ಹೊಸಪೇಟೆ

ಅಂತರರಾಷ್ಟ್ರೀಯ ಮಕ್ಕಳ ದಿನಾಚರಣೆ

ಅಂತರರಾಷ್ಟ್ರೀಯ ಮಕ್ಕಳ ದಿನಾಚರಣೆ

ಲೋಕದರ್ಶನ ವರದಿ 


ಹೊಸಪೇಟೆ 15: ವಿಜಯನಗರ ಕ್ಷೇತ್ರದ ಚಿತ್ತವಾಡ್ಗಿಯಲ್ಲಿರುವ ಆಕಾಶ್ ಇಂಟರ್‌ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನಲ್ಲಿ ಅಂತರರಾಷ್ಟ್ರೀಯ ಮಕ್ಕಳ 

ದಿನಾಚರಣೆಯನ್ನು ಹಾಗೂ ಜವಹರಲಾಲ್ ನೆಹರುರವರ ಜನ್ಮ  

ದಿನಾಚರಣೆಯನ್ನು ಆಚರಿಸಲಾಯಿತು.  


ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಆಕಾಶ್ ಇಂಟರ್‌ನ್ಯಾಷನಲ್ ಪಬ್ಲಿಕ್ ಶಾಲೆಯ ಸಂಸ್ಥಾಪಕ ಅಧ್ಯಕ್ಷ ಹೆಚ್‌.ಎನ್ ಮಹಮ್ಮದ್ ಇಮಾಮ್ ನಿಯಾಜಿರವರು ಮಾತನಾಡಿ ಜವಾಹರ್ಲಾಲ್ ನೆಹರುವರಿಗೆ ಮಕ್ಕಳೆಂದರೆ ಬಹಳ ಇಷ್ಟ. ಅವರು ಅನಾಥ ಮಕ್ಕಳು ಕೊಟ್ಟ ಗುಲಾಬಿಯನ್ನು ತಮ್ಮ ಕೋಟಿನ ಜೇಬಿಗೆ ಅಂಟಿಸಿ ಸಂತೋಷ ಪಡುತ್ತಿದ್ದರಂತೆ. ಮಕ್ಕಳ ಮೇಲಿದ್ದ ಇವರ ಅಕ್ಕರೆ, ಪ್ರೀತಿಯ ಸಂಕೇತವಾಗಿ ದೇಶದಾದ್ಯಂತ ಈ ದಿನದಂದು ಶಾಲೆಗಳಲ್ಲಿ ಮಕ್ಕಳ ದಿನಾಚರಣೆ ಆಚರಿಸಲಾಗುತ್ತದೆ. ಇವರು ಪ್ರಧಾನಿಯಾಗಿದ್ದ ಸಮಯದಲ್ಲಿ ಮಕ್ಕಳ ಅಭಿವೃದ್ಧಿಗೆ ಬಹಳಷ್ಟು ಶ್ರಮಿಸಿದ್ದರು. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಹಾಗೂ ಮುಗ್ದ ಮಕ್ಕಳು ಸಾಕ್ಷಾತ್ ದೇವರ ಪ್ರತಿರೂಪವಾದ್ದರಿಂದ  ಯಾವದೇ ತಾರತಮ್ಯ ಅಥವಾ ಬೇಧಭಾವ ಇರುವುದಿಲ್ಲ ಇಂತಹ ನಿರ್ಮಲ ಮನಸ್ಸಿನಲ್ಲಿ ಪ್ರೀತಿ ಪ್ರೇಮ ಉತ್ತಮ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರವನ್ನು  ತುಂಬುವುದು ಪ್ರತಿಯೊಬ್ಬ ಪಾಲಕರ ಪೋಷಕರ ಹಾಗೂ  ಶಿಕ್ಷಕರ  ಕರ್ತವ್ಯ ಹಾಗೂ ಜವಾಬ್ದಾರಿಯಾಗಿರುತ್ತದೆ ಎಂದರು. 


ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಹಾಗೂ ಎಲ್‌. ಕೆ.ಜಿ ಹಾಗೂ ಯು.ಕೆ.ಜಿ ಶಾಲಾ ಕೊಠಡಿಗಳನ್ನು ಪುಟ್ಟ ಪುಟ್ಟ ಮಕ್ಕಳಿಂದ ಉದ್ಘ್ಘಾಟನೆ ಮಾಡಲಾಯಿತು. ಶಾಲೆಯ ಕಾರ್ತದರ್ಶಿಗಳಾಗಿರುವ ಎನ್ ಶಾಕೀರಾ ಬೇಗಂ, ವೆಂಕಟೇಶ್ , ಮಹೇಶ್, ಹೆಚ್ ಸಂಪದ, ಆಸ್ಮಾ ಬಾನು, ನಾಗಪ್ರಭ, ಕ್ಷಮಾ ಕಿಶೋರ್, ಜ್ಯೋತಿ, ಶ್ರೀಲಕ್ಷ್ಮಿ, ಯಾಮುನಾ, ರಶ್ಮಿ, ಪ್ರಿಯಾಂಕ, ಶಾಲಿನಿ, ಶೋಭಾ ಹಾಗು ನೂರಾರು ಮಕ್ಕಳು, ಪಾಲಕರು ಪೋಷಕರು, ಶಾಲೆಯ ಆಡಳಿತ ಸಿಬ್ಬಂದಿ ಉಪಸ್ಥಿತರಿದ್ದರು. 


ಸುದ್ದಿ ಓದಿ