ನಗರದಿಂದ ಹರಪನಹಳ್ಳಿಗೆ ಒಳ ಮಾರ್ಗ ಬಸ್ಗಳ ಸಂಚಾರ ಆರಂಭ
ರಾಣೇಬೆನ್ನೂರ 06: ವಾಯುವ್ಯ ಸಾರಿಗೆ ಸಂಸ್ಥೆಯು ಪ್ರಯಾಣೀಕರ ಅನೂಕೂಲತೆಗಾಗಿ ಎಲ್ಲ ರೀತಿಯಲ್ಲಿಯು ಸಂಚಾರ ಸೌಲಭ್ಯ ಕಲ್ಪಿಸುತ್ತದೆ. ಇಂದಿನಿಂದ ನಗರದಿಂದ ಆರಂಭವಾಗಿರುವ ನೂತನ ಮಾರ್ಗ ರಾಣೇಬೆನ್ನೂರು ಹರಪನಹಳ್ಳಿಗೆ ಒಳ ಸನಿಹ ಮಾರ್ಗವಾಗಿ ಬಸ್ಸನ್ನು ಬಿಡಲಾಗಿದೆ. ಸಾರ್ವಜನಿಕರು ಇದರ ಪ್ರಯೋಜನ ಪಡೆಯುವುದರ ಮೂಲಕ ಅಧಿಕ ಪ್ರಮಾಣದಲ್ಲಿ ಹಣವನ್ನು ಉಳಿಸಿಕೂಳ್ಳಬೇಕು ಎಂದು ಹುಬ್ಬಳ್ಳಿ ವಾಯವ್ಯ ರಾಜ್ಯ ಸಾರಿಗೆ ಸಂಸ್ಥೆಯ ಉಪಾಧ್ಯಕ್ಷ ಡಾ. ಬಿ.ಎಸ್. ಕೇಲಗಾರ ಹೇಳಿದರು.
ಅವರು ಇಲ್ಲಿನ ಬಸ್ ನಿಲ್ದಾಣದಲ್ಲಿ ನಗರದಿಂದ ಹರಪನಹಳ್ಳಿಗೆ ನಿತ್ಯ ಸಂಚರಿಸುವ ಘಟಕದ ನೂತನ ಎರಡು ಬಸ್ಗಳ ಸಂಚಾರಕ್ಕೆ ಚಾಲನೆ ನೀಡಿ ಮಾತನಾಡಿದರು. ಹರಪನಗಳ್ಳಿ ಸಾಗಬೇಕಾದರೆ ಹರಿಹರದ ಮೂಲಕ ತಲುಪಬೇಕಾಗಿತ್ತು, ಅಲ್ಲದೆ 95ರೂ. ವೆಚ್ಚ ಭರಿಸಬೇಕಾಗುತ್ತಿತ್ತು. ಈ ಬಸ್ ಹರವಿ, ಕುಂಚೂರು, ಹಲವಾಗದ, ಮೂಲಕ ಹರಪನಹಳ್ಳಿಗೆ ಸಾಗಿತ್ತದೆ. ಮತ್ತು ಸಮಯದ ಜೂತೆಗೆ 30ರೂ. ಗಳ ಉಳಿತಾಯವು ಸಹ ಆಗಲಿದೆ. ಇದು ವಿಶೇಷ ಕೂಡುಗೆಯಾದಂತಾಗಿದೆ. ಎಂದ ಅವರು ನಗರದಲ್ಲಿ ಬಡಾವಣೆಗಳು ಬೆಳವಣಿಗೆ ಕಂಡಿವೆ. ನಗರ ವಾಸಿಗಳ ಬಹು ವರ್ಷಗಳ ಬೇಡಿಕೆಯನ್ನು ನಗರ ಸಾರಿಗೆ ಪ್ರಾರಂಭಿಸುವ ಮೂಲಕ ಚಾಲನೆ ನೀಡಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಬಸವರಾಜ ಲಕ್ಷ್ಮೇಶ್ವರ, ಎ.ಬಿ. ಪಾಟೀಲ, ಕೂಟ್ರೇಶಪ್ಪ ಎಮ್ಮಿ, ಸಾರಿಗೆ ನಿಯಂತ್ರಕ ಪ್ರಕಾಶ ಹೊಳೆಯಪ್ಪನವರ, ರಮೇಶ ಯತ್ತಿನಮನಿ ಸೇರಿದಂತೆ ಚಾಲಕರು ಮತ್ತು ನಿರ್ವಾಹಕರು ಪಾಲ್ಗೊಂಡಿದ್ದರು