ಹೊಸಪೇಟೆ

ಅಂತರ್ ಜಿಲ್ಲಾ ಬಾಡಿ ಬಿಲ್ಡಿಂಗ್ ಸ್ಪರ್ಧೆ

ಅಂತರ್ ಜಿಲ್ಲಾ ಬಾಡಿ ಬಿಲ್ಡಿಂಗ್ ಸ್ಪರ್ಧೆ

ಹೊಸಪೇಟೆ 13: ವಿಜಯನಗರ ಕ್ಷೇತ್ರದ ರೈತ ಭವನ ಕಲ್ಯಾಣ ಮಂಟಪದಲ್ಲಿ ಮಿಸ್ಟರ್ ಇಂಡಿಯಾ ಭಾರತ್ ಶ್ರೀ ಅವಾರ್ಡ್ ವಿಜೇತರಾದ ಬಿ. ಮಾರುತೇಶ್ ಇವರ  ಭಜರಂಗಿ ಫಿಟ್ನೆಸ್ ವರ್ಡ್ ನೇತೃತ್ವದಲ್ಲಿ ಶ್ರೀ ಗಣೇಶ  ಚತುರ್ಥಿ ಹಬ್ಬದ ಪ್ರಯುಕ್ತ ಮೊದಲ ವರ್ಷದ ಅಂತರ್ ಜಿಲ್ಲಾ ಬಾಡಿ ಬಿಲ್ಡಿಂಗ್ ಸ್ಪರ್ಧೆಯನ್ನು ಏರ್ಪಡಿಸಲಾಯಿತು. 

ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಆಗಮಿಸಿದ ಹೊಸಪೇಟೆ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹೆಚ್.ಎನ್ ಮೊಹಮ್ಮದ್ ಇಮಾಮ್ ನಿಯಾಜಿರವರನ್ನು ಸನ್ಮಾನಿಸಿ ಗೌರವಿಸಲಾಯಿತು ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ವಿಜಯನಗರ ಕ್ಷೇತ್ರದಲ್ಲಿ ಭಜರಂಗಿ ಫಿಟ್ ನೆಸ್  ವಲ್ರ್ಡನ್ನು ಪ್ರಾರಂಭಿಸಿ ಯುವ ಜನತೆಗೆ  ಉತ್ತಮ ದೈಹಿಕ ಶಿಕ್ಷಣ ನೀಡಿ ಸದೃಢÀರನ್ನಾಗಿಸುತ್ತಿರುವುದಕ್ಕೆ  ಸಂಸ್ಥೆಯ ಎಲ್ಲಾ ಪದಾಧಿಕಾರಿಗಳಿಗೂ ಹಾಗೂ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸುತ್ತಿರುವರೆಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸಿದರು. ಇತ್ತೀಚಿನ ದಿನಗಳಲ್ಲಿ ವ್ಯಾಯಾಮದ ಕೊರತೆ ಒಂದೆಡೆಯಾದರೆ ಮತ್ತೊಂದೆಡೆ ಆಧುನಿಕತೆ ಹಾಗೂ ಒತ್ತಡದ ಜೀವನ ಮತ್ತು ಅಪೌಷ್ಟಿಕತೆಯ ಆಹಾರದಿಂದ  ದೇಹದ ತೂಕ ಹೆಚ್ಚಾದಂತೆ ಕಾಯಿಲೆಗಳು ಸಹ ಮನುಷ್ಯನಿಗೆ ಹೆಚ್ಚಾಗುತ್ತವೆ. ಆರೋಗ್ಯವನ್ನು ಕಾಪಾಡಿಕೊಳ್ಳಲು ಮತ್ತು ದೇಹದ ತೂಕವನ್ನು ಕಾಪಾಡಿಕೊಳ್ಳಲು ವ್ಯಾಯಾಮ ತುಂಬಾ ಅಗತ್ಯವಾಗಿ ಮನುಷ್ಯನಿಗೆ ಬೇಕಾಗುತ್ತದೆ. ದೈಹಿಕ  ಹಾಗೂ ಮಾನಸಿಕ ಸದೃಢತೆಗಾಗಿ ವ್ಯಾಯಾಮ ಎಲ್ಲರಿಗೂ ಅನುಕೂಲವಾಗಿರುವುದರಿಂದ  ಇದರಲ್ಲಿ ಪುರುಷರು ಮಹಿಳೆಯರು ಎಂಬ ಯಾವುದೇ ಭೇದಭಾವವಿಲ್ಲ. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಭಜರಂಗಿ ಫಿಟ್ ನೆಸ್ ವಲ್ರ್ಡ ತರಬೇತಿ ಕೇಂದ್ರವನ್ನು  ನಗರದ ಎಲ್ಲಾ ಯುವಕರು ಸದುಪಯೋಗ ಪಡೆದುಕೊಂಡು ಉತ್ತಮ ಸ್ಪರ್ಧಾಳುಗಳು ತರಬೇತು ಗೊಂಡು ರಾಜ್ಯ ಮಟ್ಟದಲ್ಲಿ ಹಾಗೂ ರಾಷ್ಟ್ರಮಟ್ಟದಲ್ಲಿ ಕೀರ್ತಿ ತರುವಂತಾಗಲೀ ಎಂದು ಹಾರೈಸಿದರು. 

ಈ ಕಾರ್ಯಕ್ರಮದಲ್ಲಿ ಕುರಿ ಶಿವಮೂರ್ತಿ, ಗುಜ್ಜಲ್ ನಾಗರಾಜ್, ತಾರಳ್ಳಿ ಹನುಮಂತಪ್ಪ, ಸಿದ್ದಾರ್ಥ್ ಸಿಂಗ್, ಥಾಮಸ್, ಸುರೇಶ್ ಕುಮಾರ್, ಂSI, ಮಾಂತೇಶ್, ಮಂಜುನಾಥ್, ಸುಭಾಶ್ ಚಂದ್ರ, ಭಜರಂಗಿ ಫಿಟ್ನೆಸ್ ತರಬೇತಿ ಸಂಸ್ಥೆಯ ಪದಾಧಿಕಾರಿಗಳು, ಹಾಗು ಸ್ಪರ್ಧಾಳುಗಳ ಪಾಲಕರು ಪೆÇೀಷಕರು, ಸಾರ್ವಜನಿಕರು ಉಪಸ್ಥಿತರಿದ್ದರು.

ಸುದ್ದಿ ಓದಿ