ರಾಣೆಬೆನ್ನೂರ

ಅಂತರಜಿಲ್ಲಾ ವಕೀಲರ ಕ್ರೀಡಾಕೂಟ: ವಕೀಲರ ತಂಡದ ಸಾಧನೆ

ಅಂತರಜಿಲ್ಲಾ ವಕೀಲರ ಕ್ರೀಡಾಕೂಟ: ವಕೀಲರ ತಂಡದ ಸಾಧನೆ

ಲೋಕದರ್ಶನ ವರದಿ 


ರಾಣೇಬೆನ್ನೂರು 13: ಮುಂಡಗೋಡ ತಾಲೂಕಾ ಕ್ರೀಡಾಂಗಣದಲ್ಲಿ ಅಂತರ ಜಿಲ್ಲಾ ವಕೀಲರ ಕ್ರೀಡಾಕೂಟವು ವಾರ್ಷಿಕವಾಗಿ ಮತ್ತುಅತ್ಯಂತ ಸ್ಪರ್ಧಾತ್ಮಕವಾಗಿ ನಡೆಯಿತು. ಎರಡು ದಿವಸಗಳ ಕಾಲ ನಡೆದ ಕ್ರೀಡಾಕೂಟದಲ್ಲಿ ಕರ್ನಾಟಕದ 20ಜಿಲ್ಲೆಗಳಿಂದ ವಕೀಲರ ಕ್ರೀಡಾತಂಡಗಳು ಪಾಲ್ಗೊಂಡಿದ್ದರು. ರಾಣೇಬೆನ್ನೂರು ನ್ಯಾಯಾಲಯದ ವಕೀಲರತಂಡವು ಪಾಲ್ಗೊಂಡು ಎಂದಿನಂತೆ ಸ್ಪರ್ಧೆ ನೀಡಿ ದ್ವಿತೀಯ ಸ್ಥಾನ ಪಡೆದುಕೊಂಡುತಮ್ಮ ಸಾಧನೆ ಮೆರೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಕ್ರೀಡಾಸ್ಪರ್ಧೆಯಲ್ಲಿ ರೋಣ ಮತ್ತು ರಾಣೇಬೆನ್ನೂರು ತಂಡಗಳ ಮಧ್ಯೆ ಹಣಾಹಣಿ ನಡೆದು ಅಂತಿಮವಾಗಿ ಪ್ರವೇಶಿಸಿ ದ್ವಿತೀಯ ಸ್ಥಾನ ಗಳಿಸಿದರು. 

ತಂಡದ ನಾಯಕ ಮಂಜುನಾಥ ಗೌಳಿ, ಉಪನಾಯಕ ದೀಲಿಪ್ ಮೋಟೆಬೆನ್ನೂರುನೇತೃತ್ವದಲ್ಲಿ ಪ್ರಕಾಶ್ ಹೆಚ್,ಆರ್, ಆನಂದ್, ವಿಠಲ್ ಪುಠಾಣಿಕರ್, ದೀಲಿಪ್ ಹಳ್ಳಳ್ಳಿ, ಪ್ರಕಾಶ್ ಸಾಸಲವಾಡ, ನಟರಾಜ್ ಗೌಳಿ, ಲಿಂಗರಾಜ್, ಮಹೇಶ್ ಶಿವಪೂಜಿ, ಸುದೀಪ್, ಬಸನಗೌಡ ಹುಲ್ಮನಿ, ಶಶಿಧರ ಕುಬಸದ, ವ್ಯವಸ್ಥಾಪಕ ಸೂರ್ಯಕಾಂತ್ ಕೆ.ಬಿ. ಪಾಲ್ಗೊಂಡಿದ್ದರು.ಪಂದ್ಯದಲ್ಲಿ ಉತ್ತಮ ಬ್ಯಾಟ್ಸ್‌ಮನ್ ರಾಣೇಬೆನ್ನೂರು ತಂಡದ ಆನಂದ್ ಹೆಚ್ ಪಡೆದುಕೊಂಡರೆ ಉತ್ತಮ ಬೌಲರ್ ಪ್ರಶಸ್ತಿಯನ್ನು ನಟರಾಜ್ ಗೌಳಿ ಅವರು ಗಳಿಸಿದರು.  ವಿಜೇತತಂಡದ ನಾಯಕರಿಗೆ ಮುಂಡಗೋಡನ್ಯಾಯಾಲಯದ ನ್ಯಾಯಾಧೀಶ ಎ.ಬಿ. ಕೇಶವ್,ಅಧ್ಯಕ್ಷ ಎಂ.ಎ.ನಂದಿಗಟ್ಟಿ, ವಿಶ್ವನಾಥ ಪವಾಡ ಶೆಟ್ರ, ಲಕ್ಷ್ಮಣ ಮತ್ತಿತರೆಗಣ್ಯರುಟ್ರೋಫಿ ವಿತರಿಸಿ ಗೌರವಿಸಿದರು. 


ಸುದ್ದಿ ಓದಿ