ಉದ್ದೇಶಪೂರ್ವಕವಾಗಿ ವ್ಯಕ್ತಿ ಮೇಲೆ ಹಲ್ಲೆ, ಜೀವ ಬೆದರಿಕೆ
ಮುಂಡಗೋಡ:ತಾಲೂಕಿನ ಬೆಡಸಗಾಂವ ಗ್ರಾಮದಲ್ಲಿ ವ್ಯಕ್ತಿಯೊಬ್ಬನ ಮೇಲೆ ಉದ್ದೇಶ ಪೂರ್ವಕವಾಗಿ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ಘಟನೆ ಮಂಗಳವಾರ ನಡೆದಿದೆ.
ಶ್ಯಾನವಳ್ಳಿ ಗ್ರಾಮದ ಆನಂದ ದೇವಾಡಿಗ ಹಲ್ಲೆಗೊಳಗಾದ ವ್ಯಕ್ತಿ. ಬೆಡಸಗಾಂವ ಗ್ರಾಮದ ಸಚಿನ ನಾಯ್ಕ, ಧರ್ಮೇಂದ್ರ ನಾಯ್ಕ, ನಾಗರಾಜ ನಾಯ್ಕ ಮತ್ತು ಕನ್ನಾ ನಾಯ್ಕ ಹಲ್ಲೆ ನಡೆಸಿದ ಆರೋಪಿಗಳು. ಇವರ ಬೆಳೆಯನ್ನು ಆನಂದ ದೇವಾಡಿಗ ಅವರ ಎಮ್ಮೆ ತಿಂದು ಹಾಳು ಮಾಡದಿದ್ದರೂ ಈ ನಾಲ್ವರು ಸೇರಿ ಬೆಡಸಗಾಂವ ಗ್ರಾಮದ ಕೆರೆಯ ಪಕ್ಕದ ರಸ್ತೆ ಮೇಲೆ ನಿಂತುಕೊಂಡು ಉದ್ದೇಶಪೂರ್ವಕವಾಗಿ ಆನಂದ ಅವರನ್ನು ಅಡ್ಡಗಟ್ಟಿ ದೂಡಿ ಕೆಡವಿ ಅವಾಚ್ಯ ಶಬ್ದಗಳಿಂದ ಬೈದು ಬಡಿಗೆಯಿಂದ ಹೊಡೆದು ಗಾಯಪಡಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆನಂದ ದೇವಾಡಿಗ ಇಲ್ಲಿನ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.