ವಿಜಯಪುರ

ಮಹಾತ್ಮ ಬಸವಣ್ಣನವರ ತತ್ವಾದರ್ಶಕ್ಕೆ ಅವಹೇಳನ ಸಹಿಸಲಾಗದು ; ರವಿ ಹಂಜ್ ವಿರುದ್ಧ ಕಠಿಣ ಕ್ರಮಕ್ಕಾಗಿ ಬಿಜೆಪಿ ಒತ್ತಾಯ

ಮಹಾತ್ಮ ಬಸವಣ್ಣನವರ ತತ್ವಾದರ್ಶಕ್ಕೆ ಅವಹೇಳನ ಸಹಿಸಲಾಗದು ; ರವಿ ಹಂಜ್ ವಿರುದ್ಧ ಕಠಿಣ ಕ್ರಮಕ್ಕಾಗಿ ಬಿಜೆಪಿ ಒತ್ತಾಯ
Insults to the principles and ideals of Mahatma Basavanna cannot be tolerated; BJP demands strict ac

          ಬೀದರ್ 20: ವಿಶ್ವದ ಮೊದಲ ಸಾಮಾಜಿಕ ಕ್ರಾಂತಿಯ ಹರಿಕಾರ, ಪ್ರಜಾಪ್ರಭುತ್ವದ ಜನಕ ಕರ್ನಾಟಕದ ಸಾಂಸ್ಕೃತಿಕ ನಾಯಕ ಮಹಾತ್ಮ ಬಸವಣ್ಣನವರ ಬಗ್ಗೆ ಅವಹೇನಕಾರಿ ಹೇಳಿಕೆ ನೀಡಿದ ಹಾಗೂ ಅವರ ತತ್ವಾದರ್ಶಕ್ಕೆ ಚ್ಯುತಿ ತರುವ ಬಸವ ಮಂಟಪ ಎಂಬ ಕೃತಿ ರಚಿಸಿದ ಅನಿವಾಸಿ ಭಾರತೀಯ ಲೇಖಕ ರವಿ ಹಂಜ್ ಅವರನ್ನು ಕೂಡಲೇ ಬಂಧಿಸಿ, ಅವರ ವಿರುದ್ಧ ಸರ್ಕಾರ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿಯಾದ ಬೀದರ್ ದಕ್ಷಿಣ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ, ಜಿಲ್ಲಾ ಅಧ್ಯಕ್ಷ ಸೋಮನಾಥ ಪಾಟೀಲ್ ಆಗ್ರಹಿಸಿದ್ದಾರೆ.

           ರವಿ ಹಂಜ್ ಅವರು ನೀಡಿದ ಹೇಳಿಕೆ ಸಂಪೂರ್ಣ ಅವಾಸ್ತವ, ಆಧಾರರಹಿತ ಹಾಗೂ ಮಿಥ್ಯದಿಂದ ಕೂಡಿವೆ. ಬಸವಣ್ಣನವರ ಶ್ರೇಷ್ಠ ವ್ಯಕ್ತಿತ್ವ, ಜಾಗತಿಕ ಮೌಲ್ಯಗಳ ಚಿಂತನೆಗೆ ವಿರುದ್ಧವಾದ ವಿಷಯಗಳು ಹೇಳಿ ಕರ್ನಾಟಕ ಮಾತ್ರವಲ್ಲ, ವಿಶ್ವದಾದ್ಯಂತ ಇರುವ ಕೋಟ್ಯಂತರ ಬಸವಭಕ್ತರ ಭಾವನೆಗೆ ಧಕ್ಕೆ ತಂದಿದ್ದಾರೆ. ಸರ್ಕಾರ ಅವರು ಬರೆದ ಬಸವ ಮಂಟಪ ಕೃತಿ ಮುಟ್ಟುಗೋಲು ಹಾಕಲು ನಿರ್ಧರಿಸಿರುವುದು ಉತ್ತಮ. ಆದರೆ ಅವರು ಎಲ್ಲಿದ್ದರೂ ತಕ್ಷಣವೇ ಬಂಧಿಸಿ ಕಠಿಣ ಕ್ರಮ ಜರುಗಿಸಬೇಕು ಎಂದು ಇಲ್ಲಿ ಹೊರಡಿಸಿದ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

           ಬಸವಣ್ಣನವರು ಜಾತಿ, ವರ್ಣ, ಲಿಂಗಭೇದ ರಹಿತ ಸಮಾನತೆಯ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಮಹಾನ್ ಮಾನವತಾವಾದಿಗಳು. ಅವರ ತತ್ವ, ಚಿಂತನೆಗಳು ವಿಶ್ವವ್ಯಾಪಿ ಆದರ್ಶವಾಗಿವೆ. ಅವರು ಕೊಟ್ಟ ಮೌಲಿಕ ವಚನಗಳು ಸಮಾಜಕ್ಕೆ ಬೆಳಕಾಗಿವೆ. ಅವರ ವಿಚಾರಗಳು ಒಂದು ಜಾತಿ, ಸಮುದಾಯಕ್ಕೆ ಸೀಮಿತವಾಗದೆ ಇಡೀ ಮಾನವಕುಲದ ಉದ್ಧಾರ ಬಯಸಿವೆ. ಇವುಗಳ ಬಗ್ಗೆ ಅವಾಸ್ತವ ಟೀಕೆ ಮಾಡುವುದು ಸಹಿಸಲಾಗದು. ಸಮಾಜಕ್ಕೆ ತಪ್ಪು ದಾರಿಗೆ ಎಳೆಯುವ ಢೋಂಗಿ ಲೇಖಕರಿಗೆ ತಕ್ಕ ಪಾಠ ಕಲಿಸಲೇಬೇಕು ಎಂದು ಹೇಳಿದ್ದಾರೆ.

            ಮಹಾತ್ಮ ಬಸವಣ್ಣನವರು ಸೇರಿದಂತೆ ಯಾವುದೇ ಮಹಾನ್ ಸಂತರು, ಶರಣರು ಹಾಗೂ ಸಮಾಜ ಸುಧಾರಕರ ವ್ಯಕ್ತಿತ್ವಕ್ಕೆ ಧಕ್ಕೆ ತರುವಂತಹ ಲೇಖನ, ಹೇಳಿಕೆ ಅಥವಾ ಕೃತಿಗಳನ್ನು ಸಹಿಸಲು ಸಾಧ್ಯವಿಲ್ಲ.ಬಸವಣ್ಣನವರ ಗೌರವ, ತತ್ವ ಮತ್ತು ವಿಚಾರಧಾರೆಗಳ ರಕ್ಷಣೆಯ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ಸರ್ಕಾರ ರವಿ ಹಂಜ್‌ಗೆ ಬೇಗ ಬಂಧಿಸಿ ಕಠಿಣ ಕ್ರಮ ಕೈಗೊಳ್ಳದಿದ್ದರೆ ಪಕ್ಷ ಹೋರಾಟ ನಡೆಸುವುದು ಎಂದು ಎಚ್ಚರಿಸಿದ್ದಾರೆ. ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಅವರ ಮಾಧ್ಯಮ ಸಂಯೋಜಕ ಸಹಾಯಕ ನಾಗೇಶ ಸಿದ್ದಾ. 


ಸುದ್ದಿ ಓದಿ