ರಾಯಣ್ಣನ ಪ್ರತಿಮೆಗೆ ಅವಮಾನ: ದ್ರೋಹಿಗಳಿಗೆ ಕಠಿಣ ಶಿಕ್ಷೆಗೆ ಮನವಿ
ಬೈಲಹೊಂಗಲ 19: ಬೆಳಗಾವಿಯ ಆನಿಗೊಳದಲ್ಲಿ ಕ್ರಾಂತೀವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆಗೆ ಅವಮಾನ ಮಾಡಿರುವ ದ್ರೋಹಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಸೋಮವಾರದೊಳಗೆ ಮೂರ್ತಿ ಪ್ರತಿಷ್ಠಾಪಣೆ ಮಾಡಬೇಕೆಂದು ಒತ್ತಾಯಿಸಿ ರಾಷ್ಟ್ರೀಯ ಸಂಗೊಳ್ಳಿ ರಾಯಣ್ಣ ಸೇನೆ, ವಿವಿದ ಸಂಘಟಣೆಗಳಿಂದ ತಹಶೀಲ್ದಾರ ಮೂಲಕ ಮುಖ್ಯಮಂತ್ರಿಗಳಿಗೆ ಶನಿವಾರ ಮನವಿ ಸಲ್ಲಿಸಲಾಯಿತು.
ಬೆಂಗಳೂರಿನಲ್ಲಿ ಶಿವಾಜಿ ಪ್ರತಿಮೆಗೆ ಮಸಿ ಸುರಿದ ಪ್ರಕರಣದಿಂದ ಬೆಳಗಾವಿಯಲ್ಲಿ ಸಮಸ್ಯೆ ಉದ್ಭವವಾಗಿದೆ. ರಾಯಣ್ಣ ಪ್ರತಿಮೆಯನ್ನು ಯಾರೋ ಕಿಡಿಗೇಡಿಗಳು ಧ್ವಂಸ ಮಾಡಿದ್ದಾರೆ. ಬೆಂಗಳೂರು ಹಾಗೂ ಬೆಳಗಾವಿಯಲ್ಲಿ ನಡೆದ ಎರಡು ಘಟನೆಗಳಿಂದ ಗಲಾಟೆ ರಾಜ್ಯಕ್ಕೆ ವ್ಯಾಪಿಸಿದೆ. ಹೀಗಾಗಿ ಪೊಲೀಸರು ತನಿಖೆ ನಡೆಸಿ, ಕೂಡಲೇ ಘಟಣೆಯ ಹಿಂದಿನ ಎಲ್ಲ ವ್ಯಕ್ತಿಗಳನ್ನು ಬಂಧಿಸಿ, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯ ಮಾಡಿದರು.
ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಂಡು, ಇಂತಹ ಘಟನೆಗಳು ಪದೇ ಪದೇ ಮರುಕಳಿಸದಂತೆ ನೋಡಿಕೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದರು.
ವಿಠಲ ಅಜ್ಜನಕಟ್ಟಿ, ಸಂತೋಷ ದೇವಲಾಪೂರ, ವಿಜಯ ಪೂಜೇರಿ, ಬಸವರಾಜ ಗಂಗಪ್ಪನವರ, ಮಲ್ಲಯ್ಯ ಹಿರೇಮಠ, ಸುನೀಲ ಹಲಗಿ, ಸುರೇಶ ಕುರಿ, ಗಂಗಪ್ಪ ದೇವಲಾಪೂರ, ಮಣಿಕಂಠ ಮರಕುಂಬಿ, ಸಚಿನ ಯರಡಾಲ, ಮುಸ್ತಾಕ ಭಾಗವಾನ, ಶಿವು ಪಾಟೀಲ, ಸಿದ್ದು ಪಟ್ಟಿಹಾಳ, ರಾಯಪ್ಪ ಚಂದರಗಿ ಇತರರು ಇದ್ದರು.