ಚಿಕ್ಕೋಡಿ

ಕಬ್ಬು ಅಭಿವೃದ್ಧಿ, ಆಧುನಿಕ ತಂತ್ರಜ್ಞಾನ ಕೃಷಿಯ ಬಗ್ಗೆ ಸೂಚನೆ

ಕಬ್ಬು ಅಭಿವೃದ್ಧಿ, ಆಧುನಿಕ ತಂತ್ರಜ್ಞಾನ ಕೃಷಿಯ ಬಗ್ಗೆ ಸೂಚನೆ

ಮಾಂಜರಿ, 17 ; ಚಿದಾನಂದ ಬಸಪ್ರಭು ಕೋರೆ ಸಹಕಾರಿ ಕಾರ್ಖಾನೆಯ ಹಾಗೂ ಯು.ಪಿ.ಎಲ್‌.ಕಂಪನಿಯ ಸಂಯೋಗದಲ್ಲಿ ರೈತ ಕಬ್ಬಿನ ಇಳುವರಿ ಹೆಚ್ಚಿಸುವ ಸಲುವಾಗಿ ಬೇಡಕಿಹಾಳ ಗ್ರಾಮದ ರೈತರಾದ ಚಂದ್ರಕಾಂತ ಅಬಾಸೋ ಚವ್ಹಾಣ ಅವರ ಜಮೀನಿನಲ್ಲಿ ಗುರುವಾರರಂದು ಮಧ್ಯಾಹ್ನ  ಪ್ರಾತ್ಯಕ್ಷತೆ ಪ್ಲಾಟನ್ನು ಕಾರ್ಖಾನೆಯ ಕಬ್ಬು ಅಭಿವೃದ್ಧಿ ವಿಭಾಗದ ಮಾರ್ಗದರ್ಶನ ಹಾಗೂ ಯು.ಪಿ.ಎಲ್‌.ಕಂಪನಿಯ ಉತ್ಪನ್ನಗಳ ಮತ್ತು ಆಧುನಿಕ ತಂತ್ರಜ್ಞಾನ ಕಬ್ಬಿನ ಕೃಷಿಯ ಮಾಹಿತಿಯನ್ನು ನೀಡಲಾಯಿತು. ಕಾರ್ಖಾನೆಯ ಹಿರಿಯ ಪ್ರಧಾನ ವ್ಯವಸ್ಥಾಪಕರಾದ ಎನ್‌ಎಸ್ ಹಿರೇಮತ್ ಸದರಿ ರೈತರ ಜಮೀನಿಗೆ ಭೇಟಿ ನೀಡಿ ರೈತರು ಆಧುನಿಕ ತಂತ್ರಜ್ಞಾನ ಕಬ್ಬಿನ ಕೃಷಿಯಲ್ಲಿ ಹೆಚ್ಚಿನ ಇಳುವರಿ ಯಾವ ರೀತಿ ಪಡೆಯಬೇಕು. ಹಾಗೂ ಕಾರಖಾನೆಯಿಂದ ಕಿಸಾನ ಬಜಾರ ಮುಖಾಂತರ ರೈತರ ಕೋಡುವ ಸೌಲಭ್ಯಗಳು ಮತ್ತು ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. 

ಚಿದಾನಂದ ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯ ಪ್ರಧಾನ ವ್ಯವಸ್ಥಾಪಕರು ಮಾತನಾಡಿ, ಕಾರ್ಖಾನೆಯ ರೂವಾರಿಗಳಾದ ರಾಜ್ಯಸಭೆಯ ಮಾಜಿ ಸದಸ್ಯ ಹಾಗೂ ಕೆಎಲ್‌ಇ ಶಿಕ್ಷಣ ಸಂಸ್ಥೆಯ ಕಾರ್ಯಾಧ್ಯಕ್ಷರಾಗಿರುವ ಡಾ.ಪ್ರಭಾಕರ ಕೋರೆವರು ಹಾಗೂ ರಾಷ್ಟ್ರೀಯ ಸಕ್ಕರೆ ಕಾರ್ಖಾನೆ ಮಹಾಮಂಡಳ ಹೊಸದೇಲಿಯ ನಿರ್ದೇಶಕರಾದ ಅಮಿತ ಕೋರೆ ಅವರ ಆಶಯದಂತೆ ಹಾಗೂ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಕೋರೆ ನಿರ್ದೇಶನದಂತೆ ಕಾರ್ಖಾನೆಯಿಂದ ಕಬ್ಬು ಅಭಿವೃದ್ಧಿ ಯೋಜನೆಗೆ ಒತ್ತು ನೀಡಲಾಗಿದೆ. ಎಕರೆಗೆ 100 ಟನ್ ಕಬ್ಬು ಬೆಳೆಯಲು ಉತ್ತೇಜಿಸಲಾಗುತ್ತಿದೆ.        ಇಳುವರಿ ಹೆಚ್ಚಾದಲ್ಲಿ ರೈತರಿಗೆ ಹಾಗೂ ಕಾರ್ಖಾನೆಗೂ ಲಾಭವಾಗುತ್ತದೆ. ಹಾಗಾಗಿ, ಎಲ್ಲ ಸದಸ್ಯರು ಕಾರ್ಖಾನೆಯ ಕಬ್ಬು ಅಭಿವೃದ್ಧಿ ಯೋಜನೆಗಳ ಸದುಪಯೋಗ ಪಡೆದುಕೊಂಡು ಆಧುನಿಕ ಕೃಷಿ ಪದ್ಧತಿ ಆಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಈ ಸಂದರ್ಭದಲ್ಲಿ ಯು.ಪಿ.ಎಲ್‌. ಕಂಪನಿಯ ಕರಣ್ ಬಿರಾದರ ಅವರು ತಮ್ಮ ಕಂಪನಿಯ ಉತ್ಪನ್ನಗಳ ಮಾಹಿತಿಯನ್ನು ನೀಡಿದರು. ಕಾರ್ಖಾನೆ ಕಬ್ಬು ಅಭಿವೃದ್ಧಿ ಮೇಲ್ವಿಚಾರಕರಾದ ಸಚಿನ ಮೋಪಗಾರ. ಕಬ್ಬು ಮೇಲ್ವಿಚಾರಕರಾದ ಉದಯ ಕಾಗಲೆ, ಸಿಬ್ಬಂದಿಯವರು ಹಾಗೂ ಗ್ರಾಮದ ಪ್ರಗತಿ ಪರ ರೈತರುಗಳಾದ ಮಲಗೌಡ ಪಾಟೀಲ, ಅಮೀತ ಖೋತ, ಆಣ್ಣಾಸಾಬ ಭಂಡವಾಡೆ, ರಾಜಕುಮಾರ ಖೋತ, ಕುಮಾರ ಹೇರಗೆ, ಪದ್ಮಾಕರ ಖೋತ, ಬಾಬಾಸಾಬ ಹನಿಮನಾಳೆ ಹಾಗೂ ಇನ್ನುಳಿದ ಕಬ್ಬು ಬೆಳಗಾರರ ರೈತರು ಹಾಜರಿದ್ದರು. 


ಸುದ್ದಿ ಓದಿ