ಸಿಂಧಗಿ

ದೀಪ ಅಲಂಕಾರ ಕಂಬಗಳ ಅಳವಡಿಕೆ ಕಾಮಗಾರಿಗೆ ಚಾಲನೆ

ದೀಪ ಅಲಂಕಾರ ಕಂಬಗಳ ಅಳವಡಿಕೆ ಕಾಮಗಾರಿಗೆ ಚಾಲನೆ

ಸಿಂದಗಿ 07:  ನಗರ ಮಹಾಜನತೆಯ ಬಹುದಿನಗಳ ಬೇಡಿಕೆಯನ್ನು ಬೇರೆ ತಾಲೂಕುನ್ನು ಹೊಲೀಕೆ ಮಾಡಬೇಕು ಎಂದು ನಗರದ ಅಭಿವೃದ್ಧಿಗೆ ಮಂಜೂರಾದ ಒಟ್ಟು ರೂ 80 ಕೋಟಿ ಅನುದಾನ ತರಲಾಗಿದೆ. ನಗರ ದೀಪಾಲಂಕಾರಕ್ಕೆ ರೂ 5 ಕೋಟಿ ವೆಚ್ಚದಲ್ಲಿ ಒಟ್ಟು 274 ವಿದ್ಯುತ್ ಕಂಬಗಳನ್ನು ನಿಲ್ಲಿಸುವ ಮೂಲಕ ನಮ್ಮ ಸರಕಾರ ಉತ್ತಮ ಕೊಡುಗೆ ನೀಡಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು. 

ಪಟ್ಟಣದ ಬಸವೇಶ್ವರ ವೃತ್ತದಲ್ಲಿ 2023-24 ನೇ ಸಾಲಿನ ಲೇಕ್ಕ ಶೀರ್ಷಿಕೆ 5054-ಅಪೆಂಡಿಕ್ಸ-ಇ ಯೋಜನೆಯಡಿಲ್ಲಿ ರೂ 5 ಕೋಟಿ ವೆಚ್ಚದಲ್ಲಿ ದೀಪ ಅಲಂಕಾರ ಕಂಬಗಳ ಅಳವಡಿಕೆ ಕಾಮಗಾರಿಯ ಭೂಮಿಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿ, ಸಿಂದಗಿ ಪಟ್ಟಣದ ಪರಿಮಿತಿಯ ಜೇವರ್ಗಿ-ಚಿಕ್ಕೋಡಿ ಜಿಲ್ಲಾ ಮುಖ್ಯ ರಸ್ತೆ ಕಿ.ಮೀ 0.00 ರಿಂದ 6.45 ವರೆಗೆ ರಾಜ್ಯ ಹೆದ್ದಾರಿ-50 ವರ್ತುಲ್ ರಸ್ತೆಯಿಂದ ಡೋರ ಕಕ್ಕಯ್ಯ ವೃತ್ತ ಟಿಪ್ಪು ವರ್ತುಲ್ ರಸ್ತೆಯವರೆಗೆ ಅಲಂಕಾರಿಕ ಬೀದಿ ದೀಪಗಳನ್ನು ಅಳವಡಿಸುವದು ಅಂದಾಜು ಮೊತ್ತ ರೂ: 350.00 ಲಕ್ಷಗಳು ಅಲಂಕಾರಿಕ ವಿದ್ಯುತ್ ದೀಪಗಳು ಅಳವಡಿಸಲಾಗುವ ರಸ್ತೆಯ ಉದ್ದ 6.45 ಕಿ.ಮೀ ಉದ್ದ, ಒಟ್ಟು ವಿದ್ಯುತ್ ದೀಪಗಳು-194, ಬಸವೇಶ್ವರ ವೃತ್ತಕ್ಕೆ ಅಲಂಕಾರಿಕ ದೀಪಗಳು-10, ಅಂಬೇಡ್ಕರ ವೃತ್ತಕ್ಕೆ ಅಲಂಕಾರಿಕ ದೀಪಗಳು-10 ಅಲ್ಲದೆ ಪಟ್ಟಣದ ಪರಿಮಿತಿಯ ಸಿಂದಗಿ-ಕೊಡಂಗಲ್ ರಾಜ್ಯ ಹೆದ್ದಾರಿ-16ರ ಕಿ.ಮೀ 0.00 ರಿಂದ 3.00 ವರೆಗೆ ಬಸವೇಶ್ವರ ವೃತ್ತದಿಂದ ಸ್ವಾಮಿ ವಿವೇಕಾನಂದ ವೃತ್ತ, ಕನಕದಾಸ ವೃತ್ತದ ಮೂಲಕ ರಾಜ್ಯ ಹೆದ್ದಾರಿ-50 ವರ್ತುಲ್ ರಸ್ತೆಯವರೆಗೆ ಅಲಂಕಾರಿಕ ಬೀದಿ ದೀಪಗಳನ್ನು ಅಳವಡಿಸುವದು ಅಂದಾಜು ಮೊತ್ತ ರೂ: 150.00 ಲಕ್ಷಗಳು ಅಲಂಕಾರಿಕ ವಿದ್ಯುತ್ ದೀಪಗಳು ಅಳವಡಿಸಲಾಗುವ ರಸ್ತೆಯ ಉದ್ದ - 3.00 ಕಿ.ಮೀ ಉದ್ದ. ಒಟ್ಟು ವಿದ್ಯುತ್ ದೀಪಗಳು-84 ರಸ್ತೆಗಳ ಮೇಲೆ ಸದರಿ ಅಂಶಗಳನ್ನು ಪರಗಣಿಸಿ ವಿದ್ಯುತ್ ದೀಪಗಳನ್ನು ಅಳವಡಿಸಲಾಗುವದು ಎಂದು ತಿಳಿಸಿದರು. 

ಜನ ಕೊಟ್ಟ ಅಧಿಕಾರವನ್ನು ಜನರಿಗಾಗಿ ಮಿಸಲಿಟ್ಟು ಕ್ಷೇತ್ರದ ಅಭಿವೃದ್ಧಿ ಹತ್ತು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. 1994ರಲ್ಲಿ ಪಟ್ಟಣದ ಜನತೆ ಕುಡಿಯುವ ನೀರಿಗಾಗಿ ಪರಿತಪ್ಪಿಸುತ್ತಿರುವ ಸಂದರ್ಭದಲ್ಲಿ ಶಾಶ್ವತ ಯೋಜನೆ ಕಲ್ಪಿಸಿದ ದಿ. ಎಂ.ಸಿ.ಮನಗೂಳಿಯವರು ರೂ 7 ಕೋಟಿ ವೆಚ್ಚದಲ್ಲಿ ಯರಗಲ್ ಕೆನಾಲ್ದಿಂದ ಸಿಂದಗಿ ಕೆರೆಗೆ ನೀರು ತಂದರು ನಂತರ 2018ರಲ್ಲಿ ಸಚಿವರಾದ ಸಂದರ್ಭದಲ್ಲಿ ರೂ 17 ಕೋಟಿ ವೆಚ್ಚದಲ್ಲಿ ಬಳಗಾನೂರ ಕೆರೆಯಿಂದ ನೀರು ತಂದು ಜನಾನುರಾಗಿದ್ದಾರೆ ಅವರ ಹಾದಿಯಲ್ಲಿ ಕ್ಷೇತ್ರದ ಅಭಿವೃದ್ಧಿಯತ್ತ ಕೊಂಡ್ಯೋಯಲು ರೂ 34 ಕೋಟಿ ಅಮೃತ ಯೋಜನೆಯಡಿ  ಪಟ್ಟಣದಲ್ಲಿ ದಿನದ 24 ಗಂಟೆ ನೀರು ಪೂರೈಕೆಯ ಯೋಜನೆ, ಕೆರೆ ಅಭಿವೃದ್ಧಿಗೆ ರೂ 3.5 ಕೋಟಿ  ಶಾಂತೇಶ್ವರ 2ನೇ ಕ್ರಾಸ್ ಬಂದಾಳ ರಸ್ತೆ ಸಂಗೋಳ್ಳಿ ವೃತ್ತ ಹಗೂ ಸ್ವಾಮಿ ವಿವೇಕಾನಂದ ವೃತ್ತದವರೆಗೆ ರಸ್ತೆ ಅಭಿವೃದ್ಧಿಗೆ ರೂ 2 ಕೋಟಿ, ಹೀಗೆ 39 ಕಾಮಗಾರಿಗಳನ್ನು ಕೈಕೊಂಡು ನಗರವನ್ನು ಮಾದರಿ ಪಟ್ಟಣವನ್ನಾಗಿ ಮಾಡುವ ಗುರಿ ಹೊಂದಿದ್ದೇನೆ ಎಂದರು. 

ಡಾ ಪ್ರಭು ಸಾರಂಗದೇವ ಶಿವಾಚಾರ್ಯರು, ಆಸಂಗಿಹಾಳ ಅರೂಢಮಠದ ಶಂಕರಾನಂದ ಮಹಾರಜರು, ಕೊಣ್ಣೂರ ಹೊರಗಿನಮಠದ ಡಾ. ವಿಶ್ವಪ್ರಭುದೇವರು ಸಾನಿದ್ಯ ವಹಿಸಿದ್ದರು. 

ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ, ಉಪಾಧ್ಯಕ್ಷ ರಾಜಣ್ಣಿ ನಾರಾಯಣಕರ, ಲೋಕೋಪಯೋಗಿ ಎಇಇ ಅರುಣಕುಮಾರ ವಡವಡಗಿ, ಸಾವಂತಕರ, ವಿಜಯಪುರ ಪ್ರಥಮ ದರ್ಜೆ ಗುತ್ತಿಗೆದಾರ ಆರ್‌.ಎಸ್‌. ಹಳ್ಳದ, ಪುರಸಭೆ ಮಾಜಿ ಅಧ್ಯಕ್ಷರಾದ ಡಾ. ಶಾಂತವೀರ ಮನಗೂಳಿ, ಭಾಷಾಸಾಭ ತಾಂಬೋಳಿ, ಹಣಮಂತ ಸುಣಗಾರ, ಸದಸ್ಯರಾದ ಸಂದೀಪ ಚೌರ, ಬಸವರಾಜ ಯರನಾಳ, ಸಿದ್ದು ಮಲ್ಲೇದ, ಚೆನ್ನಪ್ಪ ಗೋಣಿ, ರಹಿಮ ದುದನಿ, ಮುಖ್ಯಾಧಿಕಾರಿ ಸುರೇಶ ನಾಯಕ, ನಗರ ಯೋಜನಾ ಪ್ರಾಧಿಕಾರದ  ಅಧ್ಯಕ್ಷ ಬಸವರಾಜ ಕಾಂಬಳೆ, ಅಂಬ್ರೀಶ ಚೌಗಲೆ, ಮಹಾನಂದಾ ಬಮ್ಮಣ್ಣಿ, ಜಯಶ್ರೀ ಹದನೂರ ಸೇರಿದಂತೆ ಹಲವರು ಇದ್ದರು. 


ಸುದ್ದಿ ಓದಿ