ಕುಷ್ಟಗಿ

ಹುಲಿಗೆಮ್ಮ ದೇವಿ ನೂತನ ಮೂರ್ತಿ ಪ್ರತಿಷ್ಠಾಪನೆ

ಹುಲಿಗೆಮ್ಮ ದೇವಿ ನೂತನ ಮೂರ್ತಿ ಪ್ರತಿಷ್ಠಾಪನೆ


ಲೋಕದರ್ಶನ ವರದಿ  

ಕುಷ್ಟಗಿ 08: ಪಟ್ಟಣ ವಾರ್ಡ ನಂಬರ್ 7ರ ಶಾಖಾಪೂರ ರಸ್ತೆಯ ಗಿಡ್ಡಹನಮಂತಪ್ಪ ಚೂರಿ ಇವರ ಲೇಓಟ್‌ನಲ್ಲಿ ಹುಲಿಗೆಮ್ಮ ದೇವಿ ನೂತನ ಮೂರ್ತಿ ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಿದರು.  


ನಂತರ ಬೆಳಿಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ದೇವಿಯ ಮೂರ್ತಿಯನ್ನು ಮುನಿರಾಬಾದ್ ಹುಲಿಗಿ ಹುಲಿಗೆಮ್ಮ ದೇವಿಯ ಪೂಜಾರಿಗಳಾದ ಹುಲಗಪ್ಪ  ಪೂಜಾರ, ಕುಷ್ಟಗಿ ಪಟ್ಟಣದ ಹುಲಿಗೆಮ್ಮ ದೇವಿಯ ಆರಾಧಕರು ಮತ್ತು ಮನೆತನದವರಾದ ಭರಮಪ್ಪ ಚೌಡ್ಕಿ ಹಾಗೂ  ಕುಷ್ಟಗಿ ಪಟ್ಟಣದ ಮಾಹಾದೇವಪ್ಪ ಬಡಿಗೇರ ಇವರ ನೇತೃತ್ವದಲ್ಲಿ ವಿವಿಧ ಪೂಜೆಗಳೊಂದಿಗೆ ಶ್ರೀ ಹುಲಿಗೆಮ್ಮ ದೇವಿಯ ನೂತನ ಮೂರ್ತಿ ಪ್ರತಿಷ್ಠಾಪನೆ ಮಾಡಲಾಯಿತು.  

ಮೂರ್ತಿ ಪ್ರತಿಷ್ಠಾಪನೆ ಮಾಡಿದ ನಂತರ ಮಾಹಾ ಮಂಗಳಾರತಿ ಅಗ್ನಿಕುಂಡವನ್ನು ಸ್ಪರ್ಶಿಸಿ ದೇವಿಯ ಸನ್ನಿದಾನಕ್ಕೆ ಭಕ್ತಿ ಸಮರ​‍್ಿಸಿದರು.  

ಶಾಖಾಪೂರ ರಸ್ತೆಯ ಕಾಳಿಕಾದೇವಿ ದೇವಸ್ಥಾನದಲ್ಲಿ ಶ್ರೀ ಹುಲಿಗೆಮ್ಮ ದೇವಿ ಗೋಪುರದ ಕಳಸಕ್ಕೆ ವಿಶೇಷ ಪೂಜೆ ಸಲ್ಲಿಸಿ ಡೊಳ್ಳು ಕುಣಿತದೊಂದಿಗೆ ಅಕ್ಕ ಸುಮಂಗಲಿಯರಿಂದ ಕುಂಭ ಮತ್ತು ಕಳಸದೊಂದಿಗೆ ಶ್ರೀದೇವಿ ಸನ್ನಿದಾನದ ವರಗೆ ಮೇರವಣಿಗೆಯನ್ನು ಕರೆತಂದು ಮಾಹಾ ಮಂಗಳಾರತಿಯೊಂದಿಗೆ ಸರ್ವಭಕ್ತರಿಗೆ ಅನ್ನಸಂತರೆ​‍್ಣ ಕಾರ್ಯಕ್ರಮ ನಡೆಸಲಾಯಿತು.  


ಈ ಸಂದರ್ಭದಲ್ಲಿ ಹುಲಿಗೆಮ್ಮ ದೇವಿಯ ಕಮಿಟಿಯವರಾದ ಸಂಗಮೇಶ ಸಿಂಗಾಡಿ, ಹಿರೇವಂಕಲಕುಂಟಿ ಪಿ.ಜಿ.ಬಿ ವ್ಯವಸ್ಥಾಪಕ ವೆಂಕಟೇಶ, ದುರಗಪ್ಪ ಚೂರಿ, ನಾಗಪ್ಪ ಚೂರಿ, ಹನಮಂತ ವಡಗೇರಿ, ಹನಮಂತಪ್ಪ ಕೋಳೂರ, ಮಲ್ಲನಗೌಡ ಮಾಲಿ ಪಾಟೀಲ, ಶರಣಗೌಡ ಹಳೇಗೌಡ್ರ, ಸಂಗಪ್ಪ ನಾಗೂರು, ಪವಾಡೆಪ್ಪ ಚೌಡ್ಕಿ ಸೇರಿದಂತೆ ಹಲವಾರರು ಉಪಸ್ಥಿತರಿದ್ದರು. 


ಸುದ್ದಿ ಓದಿ