ಶಿಗ್ಗಾವಿ ಜೆಸಿಐ ಘಟಕದಿಂದ ಶುದ್ಧಕುಡಿಯುವ ನೀರಿನ ಘಟಕ ಅಳವಡಿಕೆ
ಲೋಕದರ್ಶನ ವರದಿ
ಶಿಗ್ಗಾವಿ 11: ಎಲ್ಲ ಮಕ್ಕಳು ಶುದ್ದವಾದ ನೀರು ಕುಡಿಯಬೇಕು ಆದ್ದರಿಂದ ಶಿಗ್ಗಾವಿ ಜೆಸಿಐ ಘಟಕದ ವತಿಯಿಂದ ಜೈತ್ರಾಜೆ ಸಿ ಸಪ್ತಾಹ- 2023ರ ಅಂಗವಾಗಿ ಶುದ್ಧಕುಡಿಯುವ ನೀರಿನಘಟಕ ಅಳವಡಿಕೆ ಮಾಡುತ್ತಿದ್ದೇವೆ ಎಂದು ಅಧ್ಯಕ್ಷೆ ಜೆಸಿ ಅನಿತಾ ಡಿ ಗೊಬ್ಬರಗುಂಪಿ ಹೇಳಿದರು.
ತಾಲೂಕಿನ ತಾಲೂಕ ನೀರಲಿಗಿ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಅನುಕೂಲತೆಗಾಗಿ ಶುದ್ಧಕುಡಿಯುವ ನೀರಿನಘಟಕ ಅಳವಡಿಕೆ ಮಾಡಿ ಮಾತನಾಡಿದಅವರುಇಂದು ನೀರಿನಲ್ಲಿ ಪ್ಲೋರೈಡ ಅಂಶ ಹೆಚ್ಚಿಗೆ ಇರುವುದರಿಂದ ಎಲ್ಲರೂ ಸಹಿತ ನೀರನ್ನು ಶುದ್ದೀಕರಿಸಿ ಆರಿಸಿ ಕುಡಿಯದಿದ್ದರೆ ಅನೇಕ ತರನಾದ ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆಯಿದೆ ಎಂದರು.
ಕಾರ್ಯದರ್ಶಿ ಜೆಸಿ ಡಾ. ಚಂದ್ರಿಕಾ ಪಾಟೀಲ್ ಜೈತ್ರಾಜೆ ಸಿ ಸಪ್ತಾಹ -2023ರ ಕೋ ಆಡಿನೇಟರ್ ಜೆಸಿಡಾ. ಕುಮಾರ್ಗೌಡ ಪಾಟೀಲ್ ಹಿರಿಯ ಪೂರ್ವಾಧ್ಯಕ್ಷ ಜೆಸಿ ಸಿನೇಟರ್ ಜಿ ಏನ್ಎಲಿಗಾರ್, ಜೆ ಸಿ ರಾಘವೇಂದ್ರ ದೇಶಪಾಂಡೆ, ಜೆ ಸಿ ಗುರುರಾಜ್ ಹುಚ್ಚಣ್ಣನವರ್, ಜೆಸಿ ಡಾ. ಡಿಎಗೊಬ್ಬರಗುಂಪಿ ಡಾ. ಲತಾ ನಿಡಗುಂದಿ ಹಾಗೂ ಪ್ರೌಢಶಾಲೆ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.