150 ಕೋಟಿ ರೂ. ಅಭಿವೃದ್ಧಿ ಕಾಮಗಾರಿಗಳ ಪರೀಶೀಲನೆ
ರಾಣೀಬೆನ್ನೂರ 21: ಸ್ಥಳೀಯ ತಾ.ಪಂಚಾಯತಿಯ ತ್ರೈಮಾಸಿಕ ಕೆಡಿಪಿ ಸಭೆಯು ಇಂದು ಮಧ್ಯಾಹ್ನ 12.00ಕ್ಕೆ ಶಿಕ್ಷಕರ ಸಹಕಾರಿ ಸಂಘದಲ್ಲಿ ಶಾಸಕ ಅರುಣಕುಮಾರ ಪೂಜಾರ ಅವರ ಅಧ್ಯಕ್ಷತೆ ಯಲ್ಲಿ ಜರುಗಿತು.
ಕೋವಿಡ್ ಹಾವ ಳಿಯ ಪರಿಣಾಮದಿಂದ ಒಂದು ವರ್ಷದ ಹಿಂದೆ ನಡೆದ ಕೆಡಿಪಿ ಸಭೆ ಇಂದು ನಡೆದು 150ಕೋ.ರೂ. ಹೆಚ್ಚು ವೆಚ್ಚದ ಅಭಿವೃದ್ಧಿ ಕಾಮಗಾರಿಗಳ ಪರೀಶೀಲನೆ ನಡೆಸಿ ಕಳಪೆಯಾ ಗದಂತೆ ಮಂದಗತಿಯಲ್ಲಿದ್ದ ಕಾಮಗಾರಿಗಳ ತ್ವರಿಗತಿಯಲ್ಲಿ ನಡೆಸಲು ಸಂಬಂಧಪಟ್ಟ ಇಲಾ ಖಾಧಿಕಾರಿಗಳಿಗೆ ಸೂಚಿಸಲಾ ಯಿತು.
ಬ್ಯಾಡಗಿ ಕ್ಷೇತ್ರದ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಅವರು ಎರೇಕುಪ್ಪಿ ಗ್ರಾಮದ ಚರಂಡಿ ನೀರಿನ ಸಮಸ್ಯೆ ಬಗ್ಗೆ ಪ್ರಸ್ತಾಪಿಸಿ ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾ ಗದ ಸಹಾಯಕ ಕಾರ್ಯನಿರ್ವಾ ಹಕ ಅಭಿಯಂತರರಾದ ರಾಮಣ್ಣನವರನ್ನು ತೀವ್ರ ತರಾಟೆಗೆ ತೆಗೆದು ಕೊಂಡರು. ಈ ಸಂದರ್ಭದಲ್ಲಿ ಸ್ಥಳೀಯ ಶಾಸಕ ಅರುಣ ಕುಮಾರ ಪೂಜಾರ ಅವರು ಸಹ ತರಾಟೆ ತೆಗೆದು ಕೊಂಡು ಈ ಸಮಸ್ಯೆ ಬಗೆಹರಿ ಸಲು ಎಷ್ಟು ತಿಂಗಳು ಬೇಕು, ಒಂದು ವರ್ಷದಿಂದ ಈ ಬಗ್ಗೆ ಚರ್ಚೆ ನಡೆಯುತ್ತಲೆ ಇದೆಯೇ ವಿನಃ ಸಮಸ್ಯೆ ನಿವಾರಣೆಯಾ ಗಿಲ್ಲ, ಜಾಗೆಯನ್ನು ಸ್ವಾಧಿನಪಡಿಸಿ ಕೊಂಡು ಗಲೀಜು ನೀರು ಹೊರ ಹೋಗುವಂತೆ ಮಾಡುವುದರ ಬದಲು ಏಕೆ ಮೀನಾಮೇಷ ಎಣಿಸುತ್ತಿದ್ದೀರಿ, ಯಾರದೆ ಜಗ ಆಗಿರಲಿ ಏನೇ ಒತ್ತಡವಿರಲಿ ಮಣಿಯದೇ ಸಮಸ್ಯೆ ನಿವಾರಿಸಿ ಎಂದಾಗ ಅಭಿಯಂತ ರರವರು ಸಮಸ್ಯೆ ನಿವಾರಣೆಗೆ ಇಬ್ಬರು ಶಾಸಕರು ಹಾಗೂ ಆರಕ್ಷಕ ಇಲಾಖೆಯ ವರು ಸ್ಥಳಕ್ಕೆ ಬಂದು ಸಮಸ್ಯೆ ನಿವಾರಣೆ ಮಾಡ ಬೇಕೆಂದು ಕೋರಿದಾಗ ಇಬ್ಬರು ಶಾಸಕರು ಗಳು ಸಮ್ಮತಿಸಿ ಆರಕ್ಷಕ ಇಲಾಖೆಯವರು ಉಪಸ್ಥಿತ ರಿರಲು ಸೂಚಿಸಲಾ ಯಿತು.
ಗ್ರಾಮೀಣ ಕುಡಿ ಯುವ ನೀರು ಸರಬರಾಜು ಇಲಾಖೆಯ ಕಾರ್ಯನಿರ್ವಾ ಹಕ ಅಭಿಯಂತರರಾದ ರಾಮ ಕೃಷ್ಣರವರು ಸಭೆಯಲ್ಲಿ ಮಾತ ನಾಡಿ ತಾಲೂಕಿನಾದ್ಯಂತ 86 ಕಾಮಗಾರಿಗಳನ್ನು ಕೈಗೆತ್ತಿ ಕೊಂಡಿದ್ದು ಅದರಲ್ಲಿ 32 ಕಾಮ ಗಾರಿಗಳಿಗೆ ವರ್ಕ ಆರ್ಡರ್ ನೀಡಿದ್ದು ಮೂರು ಕಾಮಗಾರಿ ಗಳು ಮುಕ್ತಾಯಗೊಂಡಿವೆ. ಈ ಕಾಮಗಾರಿಗಳಿಗೆ 84ಕೋ. 53 ಲಕ್ಷ ರೂ.ವ್ಯಯಿಸಿದ್ದು ಈ ವರ್ಷ 22 ಕಾಮಗಾರಿಗೆ 17 ಕೋ.ರೂ.ವ್ಯಯಿಸಲಾಗುವು ದೆಂದು ಹೇಳಿದರು. ಆಗ ಶಾಸಕ ಅರುಣಕುಮಾರ ಪೂಜಾರ ಅವರು ಮಾಗೋಡ ಗ್ರಾಮದ ವರಿಗೆ ಇರುವ ಪೈಪ್ ಲೈನನ್ನು ಖಂಡೇರಾಯನಹಳ್ಳಿಯವರೆಗೆ ವಿಸ್ತರಿಸಿ ನೀರು ಪೂರೈಸಲು ಸೂಚಿಸಿದರು.
ವಿರುಪಾಕ್ಷಪ್ಪ ಬಳ್ಳಾರಿ ಅವರು ಮಾತನಾಡಿ ಹಳೆ ಪೈಪ್ ಲೈನುಗಳಿಗೆ ಕಲೆಕ್ಷನ್ ಕೊಟ್ಟರೆ ಮುಂದೆ ನೀರು ಪೂರೈಕೆ ಸಂದರ್ಭದಲ್ಲಿ ಸಮಸ್ಯೆಗಳು ಉದ್ಭವಿಸುತ್ತವೆ. ಆದ್ದರಿಂದ ಎಲ್ಲ ಕಡೆಗೂ ಹೊಸ ಪೈಪ್ ಲೈನ್ ಅಳವಡಿಸಿ ನೀರು ಪೂರೈಸಬೇ ಕೆಂದು ಸೂಚಿಸಿ ದರು. ಸಮಾಜ ಕಲ್ಯಾಣ ಇಲಾ ಖೆಯ ಅಧಿಕಾರಿ ಮಾತನಾಡಿ 38 ಅಂತರ್ಜಾತಿ ವಿವಾಹಗಳು ಜರುಗಿದ್ದು 24 ವಿವಾಹಗಳಿಗೆ 7ಲ.ರೂ. ನೀಡಲಾಗಿದೆ. 14 ವಿವಾಹಗಳಿಗೆ ಅನುದಾನವಿಲ್ಲದ್ದರಿಂದ ಸಹಾಯಧನ ತಡೆಹಿಡಿಯಲಾಗಿದೆ ಎಂದರು. ಹಿಂದುಳಿದ ವರ್ಗದ ಇಲಾಖಾಧಿಕಾರಿ ಮಾತನಾಡಿ ಅಲೇಮಾರಿಗಳಿಗೆ ಮನೆ ನಿರ್ಮಾಣ ಮಾಡಲು ಸರ್ವೆ ಕಾರ್ಯ ನಡೆಯುತ್ತಿದ್ದು 30 ಮನೆಗಳ ನಿರ್ಮಾಣ ಕಾರ್ಯವಾಗಬೇಕಿದೆ ಎಂದರು. ವೇದಿಕೆಯಲ್ಲಿ ತಾ.ಪಂ.ನ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಟಿ.ಆರ್.ಮಲ್ಲಾಡದ, ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಚೋಳಪ್ಪ ಕಸವಾಳ ಉಪಸ್ಥಿತರಿದ್ದರು.