ರಾಮಾಪೂರಸೈಟ್ನ 26 ಮತ್ತು 27ನೇ ವಾರ್ಡ್ಗಳಲ್ಲಿ ಅಭಿವೃದ್ಧಿ ಕಾಮಗಾರಿಗಳ ಪರೀಶೀಲನೆ: ಅಧಿಕಾರಿಗಳಿಗೆ ಶಾಸಕ ವಿಶ್ವಾಸ ವೈದ್ಯ ಕಟ್ಟುನಿಟ್ಟಿನ ಸೂಚನೆ
ಸವದತ್ತಿ 04 : ಸವದತ್ತಿ ನಗರದ ರಾಮಾಪೂರಸೈಟ್ ಪ್ರದೇಶದ 26 ಮತ್ತು 27ನೇ ವಾರ್ಡ್ಗಳಿಗೆ ಸ್ಥಳೀಯ ಶಾಸಕ ವಿಶ್ವಾಸ ವೈದ್ಯ ಭೇಟಿ ನೀಡಿ, ನಡೆಯುತ್ತಿರುವ ಹಾಗೂ ಕೈಗೆತ್ತಿಕೊಳ್ಳಬೇಕಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಪರೀಶೀಲಿಸಿದರು. ಭೇಟಿಯ ವೇಳೆ ಅವರು ವಾರ್ಡ್ನ ಸಾರ್ವಜನಿಕರನ್ನು ಭೇಟಿ ಮಾಡಿ ರಸ್ತೆ, ಚರಂಡಿ, ಕುಡಿಯುವ ನೀರು, ಬೀದಿ ದೀಪ ಸೇರಿದಂತೆ ವಿವಿಧ ಮೂಲಭೂತ ಸೌಕರ್ಯಗಳಿಗೆ ಸಂಬಂಧಿಸಿದ ಸಮಸ್ಯೆಗಳು ಮತ್ತು ಅಹವಾಲುಗಳನ್ನು ಆಲಿಸಿದರು.
ನಿವಾಸಿಗಳು ತಮ್ಮ ಸಮಸ್ಯೆಗಳನ್ನು ವಿವರಿಸಿ, ಅಗತ್ಯ ಅಭಿವೃದ್ಧಿ ಕಾಮಗಾರಿಗಳನ್ನು ಶೀಘ್ರ ಕೈಗೊಳ್ಳುವಂತೆ ಮನವಿ ಮಾಡಿದರು. ಸಾರ್ವಜನಿಕರ ಮನವಿಗೆ ಸ್ಪಂದಿಸಿದ ಶಾಸಕ ವಿಶ್ವಾಸ ವೈದ್ಯ, ಸ್ಥಳದಲ್ಲಿದ್ದ ನಗರಸಭೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಕಾಮಗಾರಿಗಳನ್ನು ಗುಣಮಟ್ಟದಿಂದ ಮತ್ತು ನಿಗದಿತ ಅವಧಿಯೊಳಗೆ ಯಾವುದೇ ವಿಳಂಬವಿಲ್ಲದೆ ಪೂರ್ಣಗೊಳಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತ ಸಂಗನಬಸಯ್ಯ ಗದಗಿಮಠ, ಎ.ಎ. ಖಾಜಿ, ಶಂಕರ ದಂಡಿನ, ಶಿವಾಜಿ ಕುದರಿ, ಬಸವರಾಜ ಅಯ್ಯನಗೌಡ್ರ, ಚಂದ್ರಶೇಖರ ಮಲಕಣ್ಣವರ, ರಾಘವೇಂದ್ರ ವಾಡಕರ, ಪುರಸಭೆ ಮಾಜಿ ಅಧ್ಯಕ್ಷ ಶಿವಾನಂದ ಪಟ್ಟಣಶೆಟ್ಟಿ, ಗ್ಯಾರಂಟಿ ಸಮಿತಿಯ ಅಧ್ಯಕ್ಷ ಶಿವಕುಮಾರ್ ರಾಠೋಡ್, ಬಿ.ಎನ್. ಪ್ರಭುನವರ, ಪ್ರವೀಣ್ ಪಟ್ಟಣಶೆಟ್ಟಿ, ಆಸೀಫ್ ಬಾಗೋಜಿಕೊಪ್ಪ, ಅಮೀರ್ ಗೋರಿನಾಯ್ಕ್, ಮಕ್ತುಮ್ ತಹಶೀಲ್ದಾರ, ಲೋಕೋಪಯೋಗಿ ಇಲಾಖೆ ಹಾಗೂ ಹೆಸ್ಕಾಂ ಇಲಾಖೆಯ ಅಧಿಕಾರಿಗಳು, ಸ್ಥಳೀಯ ಮುಖಂಡರು ಮತ್ತು ವಾರ್ಡ್ನ ನಿವಾಸಿಗಳು ಉಪಸ್ಥಿತರಿದ್ದರು.