ಬೈಲಹೊಂಗಲ

ಕಡಲೆ ಖರೀದಿ ಕೇಂದ್ರ ಆರಂಭಿಸುವಂತೆ ಒತ್ತಾಯ

ಕಡಲೆ ಖರೀದಿ ಕೇಂದ್ರ ಆರಂಭಿಸುವಂತೆ ಒತ್ತಾಯ

ಬೈಲಹೊಂಗಲ ೦೪: ಮತಕ್ಷೇತ್ರದ ಮುರಗೋಡ, ದೊಡವಾಡ ಭಾಗದಲ್ಲಿ ಹಾಗೂ ಬೆಳಗಾವಿ ಜಿಲ್ಲೆಯಾದ್ಯಂತ ಅತೀ ಹೆಚ್ಚು ಕಡಲೆ ಬೆಳೆಯಲಾಗಿದ್ದು, ಸರ್ಕಾರ ಕೂಡಲೇ ಕಡಲೆ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಿ, ಬೆಂಬಲ ಬೆಲೆಯಲ್ಲಿ ಕಡಲೆ ಖರೀದಿ ಸಲು ಕ್ರಮ ಕೈಕೊಂಡು ಸಂಕಷ್ಟದಲ್ಲಿರುವ ರೈತರಿಗೆ ನೆರವಾಗಬೇಕೆಂದು ಶಾಸಕ ಮಹಾಂತೇಶ ಕೌಜಲಗಿ ಒತ್ತಾಯಿಸಿದರು.

ಅವರು ವಿಧಾನಸಭೆಯಲ್ಲಿ ಸಹಕಾರ ಸಚಿವರನ್ನು ಪ್ರಶ್ನಿಸಿದಾಗ,  ಸಚಿವ ಎಸ್.ಟಿ. ಸೋಮಶೇಖರ ಕೂಡಲೇ ಸಚಿವ ಸಂಪುಟ ಉಪ ಸಮಿತಿ ಸಭೆ ಕರೆದು 3 ದಿನಗಳಲ್ಲಿ ಕೇಂದ್ರ ಸರ್ಕಾರದ ಒಪ್ಪಿಗೆ ಪಡೆದು ಖರೀಧಿ ಕೇಂದ್ರಗಳನ್ನು ಪ್ರಾರಂಬಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ ಎಂದು ಕೌಜಲಗಿ ಪತ್ರಿಕೆಗೆ ಹೇಳಿದ್ದಾರೆ.

ಸುದ್ದಿ ಓದಿ