ಹೆಚ್ಚಿನ ಪರಿಹಾರಕ್ಕೆ ಒತ್ತಾಯ: ಸಚಿವ ಹೆಬ್ಬಾರ
ಬನವಾಸಿ: ಕಳೆದ ಮೂರು ನಾಲ್ಕು ದಿನಗಳಿಂದ ಸುರಿದ ಭಾರಿ ಮಳೆಗೆ ಜಿಲ್ಲೆಯಲ್ಲಿ 350ರಿಂದ 400 ಕೋಟಿ ಹಾನಿ ಸಂಭವಿಸಿರುವ ಬಗ್ಗೆ ಅಂದಾಜಿಸಲಾಗಿದೆ ಈ ಬಗ್ಗೆ ಮುಖ್ಯಮಂತ್ರಿಯವರು ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಹೆಚ್ಚಿನ ಪರಿಹಾರಕ್ಕೆ ಒತ್ತಾಯಿಸುತ್ತೆನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಂ ಹೆಬ್ಬಾರ್ ಹೇಳಿದರು.
ಅವರು ಭಾನುವಾರ ಸ್ಥಳೀಯ ಗುಡ್ನಾಪೂರ ಕೆರೆ ಹಾಗೂ ವರದಾ ನದಿಗೆ ಬಾಗಿನ ಅರ್ಿಸಿ ಮಾಧ್ಯಮದವರ ಜತೆ ಮಾತನಾಡಿ, ಜಿಲ್ಲಾ ಮಟ್ಟದ ಅಧಿಕಾರಿಗಳಿಂದ ಹಾನಿಯ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಗಿದ್ದು ನಿಖರ ಮಾಹಿತಿಗೆ ಸ್ವಲ್ಪ ಕಾಲವಕಾಶ ಬೇಕಾಗುತ್ತದೆ. ಮುಖ್ಯ ಮಂತ್ರಿ ಬಿ.ಎಸ್ ಯಡಿಯೂರ್ಪ ಅವರಿಗೆ ಜಿಲ್ಲೆಯಲ್ಲಿ ಉಂಟಾದ ಹಾನಿಯ ಸಮಗ್ರ ಮಾಹಿತಿಯನ್ನು ನೀಡಲಾಗುವುದು. ಅವರು ಸ್ಪಂದಿಸುವ ವಿಶ್ವಾಸವಿದೆ. ಹಾನಿಗೊಳಗಾದ ಪ್ರದೇಶದಲ್ಲಿ ಪರಿಹಾರ ಕಾರ್ಯ ಯುದ್ಧೋಪಾದಿಯಲ್ಲಿ ನಡೆಯುತ್ತಿದೆ ಎಂದರು.ಇದೇ ವೇಳೆಯಲ್ಲಿ ಇತ್ತೀಚಿಗೆ ಬನವಾಸಿಯಲ್ಲಿ ನಡೆದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇಬ್ಬರು ಗಾಯಳುಗಳ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಭರಿಸುವುದಾಗಿ ತಿಳಿಸಿದರು.ಅಲ್ಲದೇ ಸಣ್ಣ ಪುಟ್ಟ ಗಾಯಗೊಂಡ 4 ಜನರಿಗೆ ತಲಾ 10 ಸಾವಿರ ರೂ. ನೀಡುವುದಾಗಿ ತಿಳಿಸಿದರು.ನಂತರ ಪ್ರವಾಹ ಪೀಡಿತ ಪ್ರದೇಶವಾದ ಮೊಗವಳ್ಳಿ, ಹೊಸಕೇರಿ ಗ್ರಾಮಕ್ಕೆ ಭೇಟಿ ನೀಡಿದರು.ಈ ಸಂದರ್ಭದಲ್ಲಿ ಉಪವಿಭಾಗಧಿಕಾರಿ ಆಕೃತಿ ಬನ್ಸಾಲ್, ತಹಶೀಲ್ದಾರ್ ಎಂ.ಆರ್.ಕುಲಕರ್ಣಿ, ಡಿ ವಾಯ್ ಎಸ್ ಪಿ ರವಿ ನಾಯ್ಕ್, ಪಿಎಸ್‌ಐ ಹನುಮಂತ ಬಿರಾದರ, ಗ್ರಾಪಂ ಅಧ್ಯಕ್ಷೆ ತುಳಸಿ ಆರೇರ, ಕಂದಾಯ ನೀರೀಕ್ಷಕಿ ಮಂಜುಳ ನಾಯ್ಕ್, ಕೃಷಿ ಅಧಿಕಾರಿ ಡಿ.ಜಿ.ಪಟಗಾರ, ಅರಣ್ಯಧಿಕಾರಿ ಉಷಾ ಕಬೇರ, ಪ್ರಮುಖರಾದ ದ್ಯಾಮಣ್ಣ ದೊಡ್ಮನಿ, ಮಂಗಲ ನಾಯ್ಕ್, ಶಂಕರ ಗೌಡ ಭಾಶಿ, ಶಿವಕುಮಾರ ಗೌಡ, ಗಣಪತಿ ನಾಯ್ಕ್, ರೂಪ ನಾಯ್ಕ್, ಚಂದ್ರಶೇಖರ್ ಗೌಡ ಕಡಗೋಡ, ಗ್ರಾಪಂ ಸದಸ್ಯರಾದ ಸಿದ್ದು ನೆರಗಲ್, ಅಶೋಕ ಪೊನ್ನಪ್ಪ, ಹಾಗೂ ಬಿಜೆಪಿ ಕಾರ್ಯಕರ್ತರು ಇದ್ದರು