ಬೈಲಹೊಂಗಲ

ವೀರರಾಣಿ ಮಲ್ಲಮ್ಮ ವೃತ್ತದಲ್ಲಿ ಸಿಸಿ ಕ್ಯಾಮರಾ ಅಳವಡಿಕೆ

ವೀರರಾಣಿ ಮಲ್ಲಮ್ಮ ವೃತ್ತದಲ್ಲಿ ಸಿಸಿ ಕ್ಯಾಮರಾ ಅಳವಡಿಕೆ

ಬೈಲಹೊಂಗಲ 23:  ತಾಲೂಕಿನ ಬೆಳವಡಿ ಗ್ರಾಮದಲ್ಲಿ ಕಾನೂನುಬಾಹಿರ ಚಟುವಟಿಕೆಗಳನ್ನು ಪತ್ತೆಹಚ್ಚಲು, ನಾಗರೀಕರ  ಸುರಕ್ಷತೆಯ ಹಿತದೃಷ್ಟಿಯಿಂದ  ಗ್ರಾಮದಲ್ಲಿ ರೂ.2 ಲಕ್ಷ ವೆಚ್ಚದಲ್ಲಿ 16 ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದ್ದಲ್ಲದೆ ಈಗಾಗಲೇ  ಕೋಟ್ಯಾಂತರ ರೂ. ವೆಚ್ಚ ಮಾಡಿ  ಗ್ರಾಮವನ್ನು ಅಭಿವೃದ್ಧಿಯತ್ತ ಕೊಂಡೊಯ್ದು ಮಾದರಿ ಗ್ರಾ ಪಂ.ಮಾಡಲು ಪಣ ತೊಟ್ಟಿದ್ದಾರೆ.

ವಿಶ್ವದಲ್ಲಿಯೇ ಪ್ರಪ್ರಥಮ ಭಾರಿಗೆ ಸುಮಾರು 2 ಸಾವಿರ ಮಹಿಳಾ ಸೈನ್ಯ ಕಟ್ಟಿ ದಿಟ್ಟ ಹೋರಾಟಗೈದ ವೀರವನಿತೆ ಬೆಳವಡಿ ಮಲ್ಲಮ್ಮನ ಗ್ರಾಮದಲ್ಲಿ ಈಗಾಗಲೇ ಕೋಟ್ಯಾಂತರ ವೆಚ್ಚದಲ್ಲಿ ಉದ್ಯಾನವನ, ಹೈಟೆಕ್ ಡಿಜಿಟಲ್ ಲೈಬ್ರರಿ, ಹೈಟೆಕ್ ಸಭಾಭವನ, ಕೆರೆ ಅಭಿವೃದ್ಧಿ ಶಾಲಾ ಆವರಣಗಳಿಗೆ ಕಂಪೌಂಡ, ಆಟದ ಮೈದಾನ, ಮಳೆ ನೀರು ಕೊಯ್ಲು, ಇಂಗು ಗುಂಡಿ, ಹಾಗೂ 58 ಲಕ್ಷ ವೆಚ್ಚದಲ್ಲಿ ಜಲಜೀವನ ಮಿಷನ್ ಯೋಜನೆಯಡಿ ಮನೆ ಮನೆಗೆ ನಲ್ಲಿ ನೀರು ಪೂರೈಕೆ ಮಾಡುವ ಕಾಮಗಾರಿ ಪ್ರಗತಿ ಹಂತದಲ್ಲಿದೆ.

ಸಾಮಾನ್ಯವಾಗಿ ನಗರ ಪ್ರದೇಶ, ಬೃಹತ್ ವಾಣಿಜ್ಯ ಸಂಕಿರ್ಣ, ಶಿಕ್ಷಣ ಸಂಸ್ಥೆ, ಉದ್ಯಮಗಳಲ್ಲಿ ಸಿಸಿ ಕ್ಯಾಮರಾ  ಆಳವಡಿಸಿರುವುದುನ್ನು ಕಾಣುತ್ತೆವೆ.  ಗ್ರಾಮ ಮಟ್ಟದಲ್ಲಿ ಸ್ಥಳೀಯ ಸಂಸ್ಥೆಗಳು ಗ್ರಾಮದ ಸುರಕ್ಷತೆಗಾಗಿ ಸಿಸಿ ಕ್ಯಾಮರಾ ಆಳವಡಿಸುರುವ ಉದಾಹರಣೆಗಳಿಲ್ಲ.  ಆದರೆ ಬೈಲಹೊಂಗಲ ತಾಲೂಕಿನಲ್ಲಿಯೇ ಪ್ರಥಮ ಬಾರಿಗೆ  ಬೆಳವಡಿ  ಗ್ರಾಮೀಣ ಪ್ರದೇಶದಲ್ಲಿ ಗ್ರಾಮದ ಎಲ್ಲ ಪ್ರಮುಖ ವೃತ್ತಗಳಲ್ಲಿ , ಸದಾ ಜನಸಂಚಾರವಿರುವ  ಪ್ರದೇಶಗಳಲ್ಲಿ  ಒಂದು ತಿಂಗಳು ಸಂಗ್ರಹಣಾ ಸಾಮರ್ಥ್ಯವಿರುವ  16 ಸಿಸಿ ಕ್ಯಾಮರಾಗಳನ್ನು ಆಳವಡಿಸಿ ಗಮನ ಸೆಳೆದಿದೆ. ಎಲ್ಲ ಕ್ಯಾಮರಾಗಳಿಗೆ  ವೈಫೈ ಸಂಪರ್ಕವಿದ್ದು, ಲೈವ ದೃಶ್ಯವನ್ನು  ಗ್ರಾಪಂ.ನಲ್ಲಿ ಹಾಗೂ ಮೊಬೈಲïನಲ್ಲಿ  ವೀಕ್ಷಿಸಬಹುದಾಗಿದೆ.

ಬೆಳವಡಿ ಗ್ರಾಮ ಸುಮಾರು 8000 ಜನಸಂಖ್ಯೆ ಹೊಂದಿದ್ದು 26 ಗ್ರಾಪಂ.ಸದಸ್ಯರನ್ನು ಹೊಂದಿದ ಈ ಗ್ರಾಮ ದಿನದಿಂದ  ದಿನಕ್ಕೆ  ವಿಶಾಲವಾಗಿ ಬೆಳೆಯುತ್ತಿದ್ದು,  ಮಹಿಳೆಯರು, ಮಕ್ಕಳು, ವೃದ್ದರ ಹಿತದೃಷ್ಟಿಯಿಂದ  ಗ್ರಾಪಂ.ಅಭಿವೃದ್ದಿ ಅನುದಾನದಲ್ಲಿ ರೂ.2 ಲಕ್ಷ ವೆಚ್ಚದಲ್ಲಿ ಗ್ರಾಮದ ಮಲ್ಲಮ್ಮನ ವೃತ್ತ, ವೀರಭದ್ರೇಶ್ವರ ದೇವಸ್ಥಾನ, ಬಸ್ ನಿಲ್ದಾಣ, ಇನ್ನಿತರ ಜನಬೀಡ ಪ್ರದೇಶಗಳಲ್ಲಿ ಸಿಸಿ ಕ್ಯಾಮರಾ ಆಳವಡಿಸಿ ಕಾನೂನು ಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಪ್ರಯತ್ನಿಸುತ್ತಿದ್ದು  ಇದಕ್ಕೆ ಗ್ರಾಮಸ್ಥರು, ಎಲ್ಲ ಸದಸ್ಯರ ಸಹಕಾರ ನೀಡುತ್ತಿದ್ದಾರೆ.

   ಟ್ರಾಫಿಕ್ï- ಗ್ರಾಮದ ಮಲ್ಲಮ್ಮ ವೃತ್ತದ ಅಕ್ಕಪಕ್ಕದ  ರಸ್ತೆಯಲ್ಲಿ ವಾಹನ ಸವಾರರು ಬೇಕಾಬಿಟ್ಟಿ ವಾಹನ ನಿಲುಗಡೆ ಮಾಡುವುದನ್ನು ತಡೆಗಟ್ಟಬೇಕಾಗಿದೆ.

ವೀರವನಿತೆ ಬೆಳವಡಿ ಮಲ್ಲಮ್ಮಳ ಗ್ರಾಮವನ್ನು ಮಾದರಿ ಪಂಚಾಯತ ಮಾಡಲು ಪಣ ತೊಟ್ಟಿದ್ದು ಜನತೆಗೆ ಮೂಲಭೂತ ಸೌಲಭ್ಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದು ಈ ನಿಟ್ಟಿನಲ್ಲಿ ಗ್ರಾಮಸ್ಥರು, ಎಲ್ಲ ಸದಸ್ಯರ ಸಹಕಾರ ಅಗತ್ಯವಾಗಿದೆ .

ಉಸ್ಮಾನ ನದಾಫ

ಪಿಡಿಓ ಬೆಳವಡಿ ಗ್ರಾಪಂ.

ವೀರವನಿತೆ ಬೆಳವಡಿ ಮಲ್ಲಮ್ಮಳ ಗ್ರಾಪಂ. ಮಾದರಿ ಗ್ರಾಪಂ.ಮಾಡಲು ಸಂಪೂರ್ಣ ಸಹಕಾರ ನೀಡಲಾಗವುದು. 

ರೇಣುಕಾ ಕುರಿ

ಅಧ್ಯಕ್ಷರು ಗ್ರಾಪಂ.ಬೆಳವಡಿ 

           

ಪೊಟೊ ಕ್ಯಾಪ್ಸನ:ಎಚ್22-ಬಿಎಲ್‍ಎಚ್1

ಬೈಲಹೊಂಗಲ ತಾಲೂಕಿನ ಬೆಳವಡಿ ಗ್ರಾಮದ ವೀರರಾಣಿ ಮಲ್ಲಮ್ಮ ವೃತ್ತದಲ್ಲಿ ಸಿಸಿ ಕ್ಯಾಮರಾ ಅಳವಡಿಸಿರುವುದು.

ಸುದ್ದಿ ಓದಿ