ರಬಾಕಾವಿಬನಹಟ್ಟಿ

ನಿರಂತರ ಶೋಷಣೆಗೀಡಾದ ಮುಗ್ಧ ನೇಕಾರರಿಗೆ ಬೇಕಿದೆ ನ್ಯಾಯ ; ಜಗದ್ಗುರು ಶಿವಶಂಕರಶ್ರೀ ಅಭಿಮತ: ನೇಕಾರ ಬೃಹತ್ ಪ್ರತಿಭಟನಾ ಮೆರವಣಿಗೆ ಪಾದಯಾತ್ರೆ

ನಿರಂತರ ಶೋಷಣೆಗೀಡಾದ ಮುಗ್ಧ ನೇಕಾರರಿಗೆ ಬೇಕಿದೆ ನ್ಯಾಯ  ; ಜಗದ್ಗುರು ಶಿವಶಂಕರಶ್ರೀ ಅಭಿಮತ: ನೇಕಾರ ಬೃಹತ್ ಪ್ರತಿಭಟನಾ ಮೆರವಣಿಗೆ ಪಾದಯಾತ್ರೆ

ಲೋಕದರ್ಶನ ವರದಿ 

ರಬಕವಿ-ಬನಹಟ್ಟಿ 14: ನೇಯ್ಗೆ ಉದ್ಯೋಗದಿಂದ ಹೊಟ್ಟೆ ತುಂಬಿಸಿಕೊಳ್ಳಲು ಹೆಣಗುವ ಮುಗ್ದ ನೇಕಾರರಿಗೆ ರಾಷ್ಟ್ರೀಯ ಪಕ್ಷಗಳು ಸತತ ಅನ್ಯಾಯ ಮಾಡುತ್ತ ಅವರನ್ನು ಶೋಷಿಸುತ್ತಿವೆ. ಶತಮಾನದ ಶೋಷಣೆ ನಿಲ್ಲಬೇಕು ರಾಜಕೀಯವಾಗಿ ಪ್ರಾಬಲ್ಯವಿರುವ ನೇಕಾರ ಕ್ಷೇತ್ರಗಳಲ್ಲಿ ನೇಕಾರ ಅಭ್ಯರ್ಥಿಗೇ ಟಿಕೇಟ್ ನೀಡುವ ಮೂಲಕ ರಾಷ್ಟ್ರೀಯ ಪಕ್ಷಗಳು ಸಾಮಾಜಿಕ ನ್ಯಾಯ ದೊರಕಿಸಬೇಕಿದೆ. ಇಲ್ಲವಾದಲ್ಲಿ ನೇಕಾರರನ್ನು ಸಂಘಟಿತಗೊಳಿಸುವತ್ತ ಮತ್ತು ಆಯಾ ಪಕ್ಷಗಳಿಗೆ ಸೋಲಿನ ಪಾಠ ಕಲಿಸುವತ್ತ ಸ್ವತಃ ನಾವೇ ಮುಂದಾಗಬೇಕಾಗುತ್ತದೆ ಎಂದು ಹಳೇಹುಬ್ಬಳ್ಳಿ ವೀರಭಿಕ್ಷಾವರ್ತಿಮಠದ ಜಗದ್ಗುರು ಶಿವಶಂಕರ ಶಿವಾಚಾರ್ಯರು ಖಾರವಾಗಿ ಎಚ್ಚರಿಕೆ ನೀಡಿದರು. 

ಗುರುವಾರದಂದು ನಡೆದ ನೇಕಾರ ಬೃಹತ್ ಪ್ರತಿಭಟನಾ ಮೆರವಣಿಗೆ ಪಾದಯಾತ್ರೆ ಸಮಯದಲ್ಲಿ ಮಾತನಾಡಿದ ಅವರು, ಇನ್ನೊಬ್ಬರ ಹೆಣದ ಮೇಲೆ ತನ್ನ ರಾಜಕೀಯ ಸಾಮ್ರಾಜ್ಯ ಕಟ್ಟಿಕೊಳ್ಳುವ ಮನೋಭಾವದ ಶಾಸಕನ ಬದಲಾಗಿ ನೇಕಾರ ಅಭ್ಯರ್ಥಿಗೆ ಟಿಕೇಟ್ ನೀಡುವಂತೆ ಜಿಲ್ಲೆ, ರಾಜ್ಯ ಮತ್ತು ದೇಶದ ರಾಜಧಾನಿ ವರೆಗೆ ಕೆಚ್ಚಿನಿಂದ ಹೋರಾಟಕ್ಕಿಳಿದ ರಾಜೇಂದ್ರ ಅಂಬಲಿ ಸ್ಥೈರ್ಯ ಎಲ್ಲ ನೇಕಾರರಲ್ಲಿ ಮಾದರಿಯಾಗಲಿ. ಬಿಜೆಪಿ ವರಿಷ್ಠರು ಬಹುಸಂಖ್ಯಾತ ನೇಕಾರ ಅಭ್ಯರ್ಥಿಗೆ ಪ್ರಾಧಾನ್ಯತೆ ನೀಡದೇ ಹಿಂದಿನ ಅಭ್ಯರ್ಥಿ ಸವದಿಗೇ ಟಿಕೇಟ್ ಘೋಷಣೆ ಮಾಡಿದ್ದನ್ನು ಸರಿಪಡಿಸಿ ಬಿಫಾರ್ಮ ನೀಡುವಾಗ ನೇಕಾರ ಅಭ್ಯರ್ಥಿಯನ್ನು ಘೊಷಿಸಿ ಬಿಫಾರ್ಮ ನೀಡಿದಲ್ಲಿ ನಮ್ಮ ಸಮುದಾಯಕ್ಕೆ ನ್ಯಾಯ ಸಿಕ್ಕಂತಾಗುತ್ತದೆ. ನೇಕಾರ ಬಾಹುಳ್ಯದ ತೇರದಾಳ ಕ್ಷೇತ್ರದ ಮತದಾರರು ಕೂಡ ಸ್ಥಳೀಯ ನೇಕಾರ ಅಭ್ಯರ್ಥಿಗೆ ಬೆಂಬಲ ಭಾರೀ ಬೆಂಬಲ ನೀಡಿ ಗೆಲವಿಗೆ ಕಂಕಣಬದ್ಧರಾಗಬೇಕೆಂದರು. 

ಆಳಂದ ಚನ್ನಬಸವಶ್ರೀ, ಬನಹಟ್ಟಿಯ ಮಹಾಂತಶ್ರೀ, ಆಕಾಂಕ್ಷಿಗಳಾದ ಭೀಮಶಿ ಮಗದುಮ್ಮ, ರಾಜೇಂದ್ರ ಅಂಬಲಿ, ಕಿರಣಕುಮಾರ ದೇಸಾಯಿ, ಬಸವರಾಜ ಬಾಳಿಕಾಯಿ, ಮಹಾದೇವ ಮಾರಾಪೂರ ಪ್ರಮುಖ ಬೀದಿಗಳಲ್ಲಿ ನಡೆದ ಮೆರವಣಿಗೆಯ ನೇತೃತ್ವ ವಹಿಸಿದ್ದರು. 


ಸುದ್ದಿ ಓದಿ