ರಬಾಕಾವಿಬನಹಟ್ಟಿ

ನಿವೃತ್ತಿ: ಬಸವರಾಜ ಚನ್ನಾಳಗೆ ಬೀಳ್ಕೊಡುಗೆ

ನಿವೃತ್ತಿ: ಬಸವರಾಜ ಚನ್ನಾಳಗೆ ಬೀಳ್ಕೊಡುಗೆ

ಸಮೀರವಾಡಿ 01: ಬಾಗಲಕೋಟೆ ಜಿಲ್ಲೆಯ ರಬಕವಿ -ಬನಹಟ್ಟಿ ತಾಲೂಕಿನ ಸೈದಾಪುರ -ಸಮೀರವಾಡಿ ಗೋದಾವರಿ ಬೈಯೋರಿಪೈನರೀಜ್ ಲಿ ಸಮೀರವಾಡಿ ಸಕ್ಕರೆ ಕಾರ್ಖಾನೆಯಲ್ಲಿ 38 ವರ್ಷಗಳ ಕಾಲ ಸೇವೆ ಸಲ್ಲಿಸಿ ಸೇವಾ ನಿವೃತ್ತರಾದ ಬಸವರಾಜ ಆರ್‌. ಚನ್ನಾಳ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.   ಸಾಮಾನ್ಯ ಸರ್ಕಾರದ ನಿಯಮದ ಪ್ರಕಾರ ವೃತ್ತಿಯಲ್ಲಿರುವ ವ್ಯಕ್ತಿಗೆ 60 ವರ್ಷ ಆಗುತ್ತಿದ್ದಂತೆ ವಯೋ ನಿವೃತ್ತಿ ಹೊಂದಲೇಬೇಕು  ಸಹದ್ಯೋಗಿ ಮಿತ್ರರೊಡನೆ ಬೆರೆತು ಕೆಲಸ ಮಾಡಿದ್ದು ನನಗೆ ಸಂತೋಷದಾಯಕವಾಗಿದ್ದು ಈ ಕಾರ್ಖಾನೆಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದವರಿಗೆ ಯಾವುದಕ್ಕೂ ಕೊರತೆ ಇಲ್ಲವೆಂದು ನಿವೃತ್ತಿ ಹೊಂದಿದ ಬಸವರಾಜ ಆರ್‌. ಚನ್ನಾಳ ಹೇಳಿದರು.ಕಾರ್ಖಾನೆಯ ಆಡಳಿತ ಅಧಿಕಾರಿಗಳು ಹಾಗೂ ಕಾರ್ಮಿಕ ಬಂಧುಗಳು, ಎಲ್ಲಾ ಸೇರಿ ಕಾರ್ಯಕ್ರಮ ಸುಗಮವಾಗಿ ನೆರವೇರಿತು. ಮತ್ತು  ಎತ್ತಿನ ಗಾಡಿಯಲ್ಲಿ ಭವ್ಯ ಮೆರವಣಿಗೆ ಅವರ ಮನೆತನಕ ನೆರವೇರಿತು. 


ಸುದ್ದಿ ಓದಿ