ಇನ್ನರವೀಲ್ ಕ್ಲಬ್ ಸಮಾಜಕ್ಕೆ ಉತ್ತಮ ಕೊಡುಗೆ ನೀಡಿದೆ ; ಶಾಸಕ ಪಾಟೀಲ್
ಕುಷ್ಟಗಿ19: ಇನ್ನರವೀಲ್ ಕ್ಲಬ್ ಸಮಾಜಕ್ಕೆ ಉತ್ತಮ ಕೊಡುಗೆ ನೀಡಿದೆ ಎಂದು ಶಾಸಕ ದೊಡ್ಡನಗೌಡ ಪಾಟೀಲ್ ಹೇಳಿದರು.
ಬುಧವಾರ ಬೆಳಗ್ಗೆ ಇಲ್ಲಿನ ಎನ್.ಸಿ.ಎಚ್ ಪ್ಯಾಲೇಸ್ ನಲ್ಲಿ ಏರಿ್ಡಸಿದ್ದ 2023-24 ನೇ ಅವಧಿಯ ಇನ್ನರ್ ವೀಲ್ ಕ್ಲಬ್ ನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಮಹಿಳೆಯರು ಎಲ್ಲಾ ರಂಗದಲ್ಲಿ ಭಾಗವಹಿಸಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು.
ಮಹಿಳೆಯರು ಆರ್ಥಿಕವಾಗಿ ಹಾಗೂ ಸಮಾಜಿಕವಾಗಿ ಮುಂದೆ ಬರಬೇಕು.
ದುರ್ಬಲ ವ್ಯಕ್ತಿಗಳನ್ನು ಗುರುತಿಸಿ ಸಹಾಯ ಸಹಕಾರ ನೀಡಿ ಮೇಲೆತ್ತಬೇಕು ಎಂದು ಹೇಳಿದರು.
ಚಿತ್ರದುರ್ಗ ಜಿಲ್ಲೆಯ ಇನ್ನರ್ ವೀಲ್ ಕ್ಲಬ್ ಪಾಸ್ಟ್ ಡಿಸ್ಟಿಕ್ ಚೇರಮನ್ ಸವಿತಾ ಶಿವಕುಮಾರ ಅವರು ಸಸಿಗೆ ನೀರು ಹಾಕುವ ಮೂಲಕ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ನೂತನ ಅಧ್ಯಕ್ಷೆ ಶಾರದಾ ಶೆಟ್ಟರ್ ಮಾತನಾಡಿ 2023-24 ನೇ ಸಾಲಿನಲ್ಲಿ ಕುಷ್ಟಗಿ ಹಾಗೂ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಮತ್ತು ಸಾಮಾಜಿಕ ಹಾಗೂ ಶೈಕ್ಷಣಿಕ ಕಾರ್ಯಕ್ರಮ ಗಳನ್ನು ಆಯೋಜಿಸಿ ಕ್ಲಬ್ ನ ಬೆಳವಣಿಗೆಗೆ ಶ್ರಮ ಪಡುತ್ತೇನೆ ಎಂದು ಹೇಳಿದರು.
ಶಾಸಕರ ಧರ್ಮಪತ್ನಿ ಲಕ್ಷ್ಮೀ ದೇವಿ ದೊಡ್ಡನಗೌಡ ಪಾಟೀಲ್, ಡಿಸ್ಟಕ್ ಎಡಿಟರ್ ಪಾರ್ವತಿ ಪಳೂಟಿ, 2022-23
ಸಾಲಿನ ಅಧ್ಯಕ್ಷೆ ಸುಮಾ ಬ್ಯಾಳಿ, ಕಾರ್ಯದರ್ಶಿ ಗೌರಮ್ಮ ಕುಡತಿನಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಇನ್ನರ್ ವೀಲ್ ಕ್ಲಬ್ ನೂತನ ಅಧ್ಯಕ್ಷರಾಗಿ ಶಾರದಾ ಶೆಟ್ಟರ್, ಉಪಾಧ್ಯಕ್ಷರಾಗಿ ಸುವರ್ಣ ಬಳೂಟಗಿ, ಐ.ಪಿ.ಪಿ ಸುಮಾ ಬ್ಯಾಳಿ, ಕಾರ್ಯದರ್ಶಿಯಾಗಿ ವಂದನಾ ಗೋಗಿ, ಖಜಾಂಚಿಯಾಗಿ ಗೌರಮ್ಮ ಕುಡತಿನಿ, ಐಎಸ್ಓ ಗೌರಮ್ಮ ಅಂಗಡಿ, ಜಂಟಿ ಕಾರ್ಯದರ್ಶಿಯಾಗಿ ಶಿಲ್ಪಾ ಸುಂಕದ, ಎಡಿಟರ್ ಮೇಘಾ ದೇಸಾಯಿ, ಶಶಿಕಲಾ ಬಯ್ಯಾಪೂರ, ಪ್ರಭಾ ಬಂಗಾರಶೆಟ್ಟರ್, ಪಾರ್ವತಿ ಪಳೂಟಿ, ಡಾ.ವೇದಾ ಪಾಟೀಲ್, ಡಾ.ಕುಮದಾ ಪಲ್ಲೇದ, ಸುದೀಪ್ತಾ ಕಾಖಂಡಿಕಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.