ರೈತರ ಕಬ್ಬಿನ ದರದಲ್ಲಿ ಅನ್ಯಾಯ: 28ರಂದು ಪ್ರತಿಭಟನೆ
ಶಿಗ್ಗಾವಿ 23: ತಾಲೂಕಿನ ಕೋಣನಕೇರಿಯಲ್ಲಿರುವ ವಿವೇಕ್ ಹೆಬ್ಬಾರ ಒಡೆತನದ ವಿಂಪ್ ಶುಗರ್ಸ್ ಪ್ಯಾಕ್ಟರಿಯಲ್ಲಿ ರೈತರ ಕಬ್ಬಿನ ದರದಲ್ಲಿ ಅನ್ಯಾಯ ಮಾಡುತ್ತಿದ್ದು ಇದರಿಂದ ರೈತರಿಗೆ ಸಾಕಷ್ಟು ಅನ್ಯಾಯವಾಗುತ್ತಿದೆ ಆದ್ದರಿಂದ ಇದೇ ನ.28 ಮಂಗಳವಾರ ರಂದು ರೈತರೊಂದಿಗೆ ಪ್ಯಾಕ್ಟರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಉಪಾದ್ಯಕ್ಷ ಹನುಮಂತಪ್ಪ ದೊಡ್ಡಮನಿ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಮ್ಮ ರೈತರು ಪ್ಯಾಕ್ಟರಿಗೆ ಕಬ್ಬನ್ನು ಕೊಡಲು ಸಾಧ್ಯವಿಲ್ಲ ಎಫ್ಆರ್ಪಿ ದರಕ್ಕಿಂತ ಬೇರೆ ಬೇರೆ ಕಾರ್ಖಾನೆಗಳು ಹೆಚ್ಚಿನ ದರವನ್ನು ರೈತರಿಗೆ ಕೊಡುತ್ತಿದ್ದು, ಈ ಮೊದಲು ಪ್ಯಾಕ್ಟರಿಯ ಎಂ.ಡಿ ಸಮ್ಮುಖದಲ್ಲಿ ನಡೆದ ರೈತರ ಸಭೆಯಲ್ಲಿ 3073 ರೂ ದರವನ್ನು ನಿಗದಿಪಡಿಸಿ ಅದರಲ್ಲಿ 1 ಟನ್ ಕಟಾವಿನ ಬೆಲೆ 325ರೂ ಹಾಗೂ ಟ್ರಾನ್ಸಪೂರ್ಟ ಚಾರ್ಚ್ ಎಂದು 220ರೂ ಪಡೆಯಲಾಗುತ್ತದೆ ಎಂದು ಮಾಹಿತಿ ನೀಡಲಾಗಿತ್ತು, ಅಲ್ಲದೇ ರೈತರ ಸಭೆ ಕರೆದು ನಿರ್ಧಾರ ಮಾಡಿ ಪ್ರತಿ ಟನ್ಗೆ 2528ರೂ ರೈತರ ಖಾತೆಗೆ ಜಮೆ ಮಾಡಲಾಗುತ್ತದೆ ಎಂದು ತಿಳಿಸಲಾಗಿತ್ತು, ಆದರೆ ಈಗ ವಿಂಪ್ ಶುಗರ್ಸನವರು ರೈತರ ಖಾತೆಗೆ ಪ್ರತಿ ಟನ್ಗೆ 2415ರೂ ಹಾಕುತ್ತಿದ್ದಾರೆ, ಸರಕಾರದ ದರಕ್ಕಿಂತ 1ಟನ್ ಗೆ 100ರೂ ಅಂತೆ ಕಡಿಮೆ ದರಕ್ಕೆ ರೈತರ ಕಬ್ಬನ್ನು ತೆಗೆದುಕೊಳ್ಳುತ್ತಿದ್ದು ಸರಕಾರದ ದರಕ್ಕಿಂತ ಬೇರೆ ಬೇರೆ ಜಿಲ್ಲೆಯಲ್ಲಿ ಹೆಚ್ಚಿನ ದರ ನಿಗದಿಪಡಿಸಿ ಖರೀದಿ ಮಾಡುತ್ತಿದೆ ಆದರೆ ಕೊಣನಕೇರಿಯ ವಿಂಪ್ ಶುಗರ್ಸ್ ಪ್ಯಾಕ್ಟರಿಯಲ್ಲಿ ರೈತರಿಗೆ ಮೋಸವಾಗುತ್ತಿದೆ, ಹಾಗೂ ಕಬ್ಬು ಕಡಿಯುವ ಗ್ಯಾಂಗ್ನವರು ಲಗಾನಿ ಮನಬಂದಂತೆ ಕೇಳುತ್ತಿದ್ದು ಇವೇಲ್ಲವನ್ನು ವಾರದೊಳಗಾಗಿ ರೈತರನ್ನು ಕರೆದು ಸರಿಪಡಿಸದಿದ್ದಲ್ಲಿ ಇದೇ ನ.28 ರ ಮಂಗಳವಾರದಂದು ವಿಆಯ್ಎನ್ಪಿ (ವಿಂಪ್) ಪ್ಯಾಕ್ಟರಿಯ ಎರಡು ಬಾಗಿಲುಗಳನ್ನು ಬಂದ ಮಾಡಿ ಬೃಹತ್ ಪ್ರತಿಭಟನೆ ಮಾಡಲಾಗುವುದು, ರೈತರ ಸಮಸ್ಯೆ ಬಗೆ ಹರಿಯದಿದ್ದಲ್ಲಿ ಅಹೋರಾತ್ರಿ ಧರಣೆ ಕೂಡಾ ಮಾಡಲಾಗುವುದು ಎಂದು ಎಚ್ಚರಿಸಿದರು.
ತಾಲೂಕಾದ್ಯಕ್ಷ ಆನಂದ ಕೆಳಗಿನಮನಿ ಮಾತನಾಡಿ, ರೈತರು ಬೆಳೆದ ಬೆಲೆ ತಕ್ಕ ಬೆಲೆ ನೀಡುವ ಬರವಸೆ ನೀಡಿ ಈಗ ರೈತರ ಬೆಲೆಯಲ್ಲಿ ಅನ್ಯಾಯ ಮಾಡುತ್ತಿದ್ದಾರೆ ಎಂದು ದೂರಿದರು.
ತಾಲೂಕಾ ಉಪಾದ್ಯಕ್ಷ ಶಂಕರಗೌಡ ಪಾಟೀಲ, ಕಾರ್ಯದರ್ಶಿ ಗೀರೀಶಗೌಡ ಪಾಟೀಲ, ಮಂಜುನಾಥ ಕಂಕನವಾಡ, ರಮೇಶ ಜೋಳದ, ದ್ಯಾವನಗೌಡ ಗಾಳಿಗೌಡ್ರ, ಚಂದ್ರು ನೆರ್ತಿ, ಬಸನಗೌಡ ಹುತ್ತನಗೌಡ್ರ, ಬಸನಗೌಡ ಗೋಣಿಗೌಡ್ರ, ಶಂಬು ನೆರ್ತಿ, ದಯಾನಂದ ಮೆಣಸಿನಕಾಯಿ, ಉಮೆಶ ತುಪ್ಪದ, ಮಂಜುನಾಥ ಏಗನಗೌಡ್ರ, ಸುರೇಶ ಗಂಜೀಗಟ್ಟಿ, ಅರುಣ ಬಡಿಗೇರ ಸೇರಿದಂತೆ ರೈತ ಮುಖಂಡರು ಇದ್ದರು.
ವಿಂಪ್ ಶುಗರ್ಸ್ನವರು ರೈತರ ಕಬ್ಬಿನ ದರದಲ್ಲಿ ಅನ್ಯಾಯ ಮಾಡುತ್ತಿರುವುದಲ್ಲದೇ ಪ್ರತಿ ಟನ್ಗೆ 100ರೂ ಕಮಿಷನ್ ಪಡೆಯಲಾಗುತ್ತಿದೆ ಎಂದು ಹೇಳುತ್ತಾರೆ ಇದು ರೈತನ ಜೇಬಿಗೆ ಕತ್ತರಿ ಹಾಕುವ ಕೆಲಸವಾಗಿದೆ ಇಷ್ಟಕ್ಕೂ ಈ ಪೂರ್ವದಲ್ಲಿ ರೈತರ ಸಭೆಯಲ್ಲಿ ಈ ಕಮಿಷನ್ ದರದ ಕುರಿತು ಏಕೆ ಚರ್ಚಿಸಿಲ್ಲ ?
ಶಂಕರಗೌಡ ಪಾಟೀಲ
ಉಪಾದ್ಯಕ್ಷ ರೈತ ಸಂಘ, ಶಿಗ್ಗಾವಿ