ಶಿಗ್ಗಾವ್

ವಿವಿಧ ಇಲಾಖೆಗಳಿಂದ ಮಾಹಿತಿ ಕಾರ್ಯಾಗಾರ

ವಿವಿಧ ಇಲಾಖೆಗಳಿಂದ ಮಾಹಿತಿ ಕಾರ್ಯಾಗಾರ

ಲೋಕದರ್ಶನ ವರದಿ

ಶಿಗ್ಗಾವಿ 18: ಬೀದಿ ಬದಿ ವ್ಯಾಪಾರಿಗಳ ಆರ್ಥಿಕ ಸ್ವಾವಲಂಬನೆ, ಆತ್ಮ ನಿರ್ಭರ ಬದುಕಿನ ನಿಟ್ಟಿನಲ್ಲಿ ಯಾವುದೇ ಭದ್ರತೆ ಪಡೆಯದೇ ನೀಡುವ ಪಿಎಂ ಸ್ವನಿಧಿ ಸಣ್ಣ ಸಾಲ ಯೋಜನೆಗಳಾಗಿದ್ದು ಬಡ್ಡಿ ಸಾಲದ ಸುಳಿಗೆ ಸಿಲುಕುವುದನ್ನು ತಪ್ಪಿಸುವುದೂ ಪಿಎಂ ಸ್ವನಿಧಿ ಯೋಜನೆಯ ಉದ್ದೇಶಗಳಲ್ಲಿ ಒಂದಾಗಿದೆ ಇದರ ಸದುಪಯೋಗ ಪಡೆಯಬೇಕೆಂದು ಕೆನರಾ ಬ್ಯಾಂಕ್ನ ಎಫ್ಎಲ್ಸಿ ರಾಜು ಕೆಂಬಾವಿ ಹೇಳಿದರು.

ಪಟ್ಟಣದ ಪುರಭೆಯಲ್ಲಿ ಪುರಸಭೆ ಕಾರ್ಯಾಲಯ ಶಿಗ್ಗಾವಿ, ಕೌಶಾಲ್ಯಭಿವೃದ್ದಿ ಉದ್ಯಮ ಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾವೇರಿ ಮತ್ತು ಡೆ-ನಲ್ಮ್ ಯೋಜನೆ, ಪುರಸಭೆ ಶಿಗ್ಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ಪಿಎಂ ಸ್ವ-ನಿಧಿ ಸೆ ಸಮೃದ್ದಿ ಮೇಳ ಹಾಗೂ ವಿವಿಧ ಇಲಾಖೆಗಳಿಂದ ಮಾಹಿತಿ ಕಾರ್ಯಾಗಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಡೆದ ಸಾಲವನ್ನು ತಿಂಗಳ ಕಂತಲ್ಲಿ ವರ್ಷದೊಳಗೆ ಚುಕ್ತಾ ಮಾಡಿದರೆ ಎರಡನೇ ಹಂತದ ಸಾಲ ಸುಲಭವಾಗಿ ಸಿಗಲಿದೆ. ಡಿಫಾಲ್ಟ್, ಎನ್ಪಿಎ ಆಯಿತೆಂದರೆ ಖಾತೆ ಚುಕ್ತಾ ಮಾಡದ ಹೊರತು ಭವಿಷ್ಯದಲ್ಲಿ ಮಕ್ಕಳ ಶಿಕ್ಷಣ, ಗೃಹ ಸಹಿತ ಯಾವುದೇ ವ್ಯವಹಾರದ ಸಾಲದಿಂದ ವಂಚಿತರಾಗಲಿದ್ದಾರೆ. ಸಾಲಗಾರ ಬೀದಿ ವ್ಯಾಪಾರಿಗಳು ಸಿಬಿಲ್ ಸ್ಕೋರ್ ಇಳಿಕೆಯಾಗದಂತೆ ಪ್ರಾಮಾಣಿಕತೆಯ ವ್ಯವಹಾರದಿಂದ ಭದ್ರ ಭವಿಷ್ಯ ಹೊಂದಬಹುದು ಎಂದು ಮಾಹಿತಿ ನೀಡಿ, ಪ್ರಧಾನಮಂತ್ರಿ ಸುರಕ್ಷಾ ವಿಮಾ ಯೋಜನೆ, ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆ, ಪ್ರಧಾನ ಮಂತ್ರಿ ಶ್ರಮಯೋಗಿ ಮಾನದಂಡ ಯೋಜನೆ, ಪ್ರಧಾನ ಮಂತ್ರಿ ಜನಧನ್ ಯೋಜನೆ, ಕಾರ್ಮಿಕ ಇಲಾಖೆಯ ಕಾರ್ಮಿ ಕ ಕಾರ್ಡ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಶಿಗ್ಗಾವಿ ಕೆನರಾ ಬ್ಯಾಂಕ್ನ ಡಿವಿಜನಲ್ ಮ್ಯಾನೇಜರ್ ಡಿ ಎನ್ ತ್ರಿಪಾಟಿ ಅವರು 20 ಜನ ಬೀದಿ ಬದಿ ವ್ಯಾಪಾರಿಗಳಿಗೆ ಕ್ಯೂ ಆರ್ ಕೋಡ್ ವಿಸ್ತರಿಸಿದರೆ, ಶಿಗ್ಗಾವಿ ಎಸ್ಬಿಐ ಬ್ರ್ಯಾಂಕ್ ಮ್ಯಾನೇಜರ್ ವರಪ್ರಸಾದ ಚಿದಿಗೆ ಅವರು 20 ಜನ ಬೀದಿಬದಿ ವ್ಯಾಪಾರಿಗಳಿಗೆ ಕ್ಯೂಆರ್ ಕೋಡ್ ವಿತರಿಸಲಾಯಿತು. 

ಪುರಸಭೆ ಸದಸ್ಯ ಶ್ರೀಕಾಂತ ಬುಳ್ಳಕ್ಕನವರ ಮಾತನಾಡಿ, ಬೀದಿಬದಿ ವ್ಯಾಪಾರಿಗಳ ಕಷ್ಟಕರ ವ್ಯಾಪಾರಕ್ಕೆ ಕೇಂದ್ರ ಸರ್ಕಾರ ಅವರಿಗೆ ಒದಗಿಸಿರುವ ಸಾಲ ಮತ್ತು ಝೀರೋ ಬ್ಯಾಲೆನ್ಸ್ ಖಾತೆಯ ಯೋಜನೆಯನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದರು.  

ಸಿಡಿಪಿಓ ಗಣೇಶ ಲಿಂಗನಗೌಡ್ರ, ಕೆವಿಜಿ ಬ್ಯಾಂಕ್ ವ್ಯವಸ್ಥಾಪಕ ಕೆ ಎಫ್ ರಮೇಶ, ಬಂಕಾಪುರ ಪುರಸಭೆಯ ಸಮುದಾಯ ಸಂಘಟಕ ಬಿ ಎಸ್ ಗಿಡ್ಡಣ್ಣವರ, ಪೋಲಿಸ್ ಇಲಾಖೆಯ ಗೀತಾ ತಂಬೂಳಿ, ಶೈಲಜಾ ಪಾಟೀಲ, ಪುರಸಭೆಯ ಸದಸ್ಯರಾದ ದಯಾನಂದ ಅಕ್ಕಿ, ಜಾಫರಖಾನ ಪಠಾಣ, ಮೆಹಬೂಬಿ ನೀರಲಗಿ, ಬೀದಿ ಬದಿಯ ವ್ಯಾಪಾರಸ್ಥರ ಕಮಿಟಿಯ ಸದಸ್ಯ ಚಂದ್ರಶೇಖರಯ್ಯ ಚಿಕ್ಕಮಠ,  ಹುಸೇನಸಾಬ ಕರಿಂನವರ, ಲಲಿತಾ ಬಡಿಗೆರ,  ಪುರಸಭೆಯ ಸಿಬ್ಬಂದಿಗಳಾದ ವ್ಹಿ ಎಸ್ ಪಾಟೀಲ, ಗಿರಿಜಮ್ಮ ಕಮಡೊಳ್ಳಿ. ಅಕ್ಕಮ್ಮ ಮಾಕಾಪೂರ, ಛಾಯಾ ಕಾಳೆ ಧನಂಜಯ, ಶಿವಕುಮಾರ ಹಲಗಣ್ಣವರ, ಸತೀಶ ತಳವಾರ, ಪ್ರಶಾಂತ ರಾಠೋಡ ಪೌರಕಾರ್ಮಿ ಕರು ಎಲ್ಲ ಸಿಬ್ಬಂದಿಗಳು ಉಪಸ್ಥಿತರಿದ್ದರು 

ಸುದ್ದಿ ಓದಿ