ಶಿಗ್ಗಾವ್

ಜನಪರ ರೈತಪರ ಆಡಳಿತ ನೀಡುವಲ್ಲಿ ಇಂದಿರಾಜೀ, ಪಟೇಲರ ದೂರ ದೃಷ್ಟಿ ಸ್ಮರಣೀಯ

ಜನಪರ ರೈತಪರ ಆಡಳಿತ ನೀಡುವಲ್ಲಿ ಇಂದಿರಾಜೀ, ಪಟೇಲರ ದೂರ ದೃಷ್ಟಿ ಸ್ಮರಣೀಯ

ಶಿಗ್ಗಾವಿ 02: ಜನಪರ ರೈತಪರ ಆಡಳಿತ ನೀಡುವಲ್ಲಿ ಇಂದಿರಾಗಾಂಧಿಜಿಯವರ ಹಾಗೂ ರಾಷ್ಟ್ರದ ಐಕ್ಯತೆಗೆ  ಪಟೇಲರ ದೂರ ದೃಷ್ಟಿ ಸದಾ ಸ್ಮರಣೀಯ ಎಂದು ಶಿಗ್ಗಾವಿ ತಾಲೂಕ ಕಾಂಗ್ರೆಸ್ ಪಕ್ಷದ ವಕ್ತಾರ ಮಂಜುನಾಥ್ ಮಣ್ಣಣ್ಣವರ್ ಹೇಳಿದರು. 

ಪಟ್ಟಣದ ಕಾಂಗ್ರೆಸ್ ಪಕ್ಷದ ಕಾರ್ಯಾಲಯದಲ್ಲಿ ನಡೆದ ದೇಶದ ಮೊದಲ ಮಹಿಳಾ ಪ್ರಧಾನಿ ಹಾಗೂ ಉಕ್ಕಿನ ಮಹಿಳೆ ದಿ ಇಂದಿರಾ ಗಾಂಧೀಜಿಯವರ ಪುಣ್ಯಸ್ಮರಣೆ ಹಾಗೂ ಉಪ ಪ್ರಧಾನಿ ಹಾಗೂ ಉಕ್ಕಿನ ಮನುಷ್ಯ ಎಂದು ಪ್ರಖ್ಯಾತರಾಗಿದ್ದ ದಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನ ಕಾರ್ಯಕ್ರಮ ಜರುಗಿತು. ನಂತರ ಮಾತನಾಡಿದ ಅವರು ಉಳುವವನೇ ಹೊಲದ ಒಡೆಯ ಎಂಬ ಐತಿಹಾಸಿಕ ರೈತ ಜನಪರ ಕಾರ್ಯಕ್ರಮವನ್ನು ದೇಶಕ್ಕೆ ನೀಡಿದ ಬಡವ ಬಲ್ಲಿಗರ ಕಾರ್ಯಕ್ರಮ ಜಾರಿ ಮಾಡುವ ಮೂಲಕ ಇತಿಹಾಸ ಸೃಷ್ಟಿಸಿದ ಉಕ್ಕಿನ ಮಹಿಳೆ ಮಾಜಿ ಪ್ರಧಾನಿ ದಿ ಇಂದಿರಾ ಗಾಂಧಿಜಿಯವರ ಕಾರ್ಯಕ್ರಮಗಳು ಇಂದಿಗೂ ಹಸಿರಾಗಿವೆ ಹಾಗೂ ದೇಶದ ಐಕ್ಯತೆಗೆ ಕೊಡುವುದರಲ್ಲಿ ಮಾಜಿ ಉಪ ಪ್ರಧಾನಿ ದಿವಂಗತ ಸರದಾರ ವಲ್ಲಭಭಾಯಿ ಪಟೇಲ್ ಅವರ ಪಾತ್ರ ಅತ್ಯಂತ ಪ್ರಮುಖವಾಗಿದ್ದು ಇಂಥವರ ಸ್ಮರಣೆ ಮಾಡುವುದು ಹಾಗೂ ಅವರ ಕಾರ್ಯಗಳನ್ನು ಅಳವಡಿಸಿಕೊಳ್ಳುವುದು ಪ್ರತಿಯೊಬ್ಬರ ಕೆಲಸವಾಗಬೇಕಾಗಿದೆ ಎಂದರು. 

ಕಾರ್ಯಕ್ರಮದಲ್ಲಿ ಶಿಗ್ಗಾವಿ ಪಟ್ಟಣದ ಕಾಂಗ್ರೆಸ್ ಘಟಕದ ಅಧ್ಯಕ್ಷ ಚಂದ್ರು ಕೊಡ್ಲಿವಾಡ. ಅಲ್ಪಸಂಖ್ಯಾತರ ಘಟಕದ ತಾಲೂಕ ಉಪಾಧ್ಯಕ್ಷ ಪೀರ್ ಸಾಬ್ ನದಾಫ ಮುಖಂಡರುಗಳಾದ ದೇವಣ್ಣ ಕೆರೆಕನವರ, ವಿಜಯ್ ಪಾಟೀಲ್, ಫಿರೋಜ ಕಾಮನಹಳ್ಳಿ, ಎಲ್ಲಪ್ಪ ಕೊಡ್ಲಿವಾಡ, ಯೋಗೀಶ್ ಉಪಸ್ಥಿತರಿದ್ದರು. 


ಸುದ್ದಿ ಓದಿ