ರಾಣೆಬೆನ್ನೂರ

ವಿದೇಶೀ ವ್ಯಾಮೋಹದಿಂದ ಭಾರತೀಯ ಸಂಸ್ಕೃತಿ ಕ್ಷೀಣಿಸುತ್ತಿದೆ: ಕುಂದಾಪೂರ

ವಿದೇಶೀ ವ್ಯಾಮೋಹದಿಂದ ಭಾರತೀಯ ಸಂಸ್ಕೃತಿ ಕ್ಷೀಣಿಸುತ್ತಿದೆ: ಕುಂದಾಪೂರ

ರಾಣೇಬೆನ್ನೂರ 01: ಯುವ ಜನತೆಯಲ್ಲಿ ಹೆಚ್ಚುತ್ತಿರುವ  ಆಧುನೀಕತೆ ಮತ್ತು ಅತಿಯಾದ ವಿದೇಶಿ ವ್ಯಾಮೋಹದಿಂದಾಗಿ  ಭಾರತೀಯ  ಸಂಸ್ಕೃತಿಯ ಜೀವಾಳವಾಗಿರುವ ಜನಪದ ಮತ್ತು ಗ್ರಾಮೀಣ ಕಲೆಗಳು  ಇಂದು ಬಹಳಷ್ಟು ಕ್ಷೀಣಿಸುತ್ತಿವೆ ಎಂದು ಸ್ವಾಕರವೇ ರಾಜ್ಯಾಧ್ಯಕ್ಷ ನಿತ್ಯಾನಂದ ಕುಂದಾಪೂರ ಹೇಳಿದರು. 

ತಾಲೂಕಿನ ಹಿರೇಬಿದರಿ ಗ್ರಾಮದಲ್ಲಿ ಶ್ರೀ ಅಂಬಾಡೇಶ್ವರದೇವಿ ಕಾರ್ತಿಕೋತ್ಸವ ಮತ್ತು ಜಾತ್ರಾ ಮಹೋತ್ಸವದ ಅಂಗವಾಗಿ ರಾಜ್ಯ ಸ್ವಾಭಿಮಾನಿ ಕರವೇ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಆರೇಮಲ್ಲಾಪೂರದ ಕರ್ನಾಟಕ ಜಾನಪದ ಕಲಾ ವೇದಿಕೆಗಳ ಆಶ್ರಯದಲ್ಲಿ ಏರಿ​‍್ಡಸಿದ್ದ ಸುಗಮ ಸಂಗೀತ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.  

ಗ್ರಾಮೀಣ ಕಲೆಗಳನ್ನು ಹಾಗೂ ಜನಪದ ಕಾರ್ಯಕ್ರಮಗಳನ್ನು ಉಳಿಸಿಬೆಳೆಸುವ ಗುರುತರ ಜವಾಬ್ದಾರಿ ನಾಗರೀಕರಲ್ಲಿ ಇದೆ. ಗ್ರಾಮೀಣ ಭಾಗದಿಂದಲೇ ಇಂತಹ ಕಲೆಗಳಿಗೆ ಪ್ರೋತ್ಸಾಹ ನೀಡುವ ಮೂಲಕ ಎಲ್ಲರೂ ಜವಾಬ್ದಾರಿಯಿಂದ ಮುನ್ನಡೆಯಬೇಕಾಗಿದೆ. ಸರಕಾರವೂ ಸಹ ಇಂತಹ ಕಲೆಗಳಿಗೆ ಪ್ರೋತ್ಸಾಹಿಸುವ ಅಗತ್ಯವಿದೆ ಎಂದರು. 

ತಾಲೂಕು ಜಾನಪದ ವೇದಿಕೆ ಅಧ್ಯಕ್ಷ ಶಿವಕುಮಾರ ಜಾಧವ, ಕಲಾವಿದರಾದ ಬಸವರಾಜ ಕೊಳಜಿ, ಪರಶುರಾಮ ಬಣಕಾರ, ಗುಡ್ಡರಾಜ ಹಲಗೇರಿ, ವೀಣಾ ಕಾಮಟೆ, ರಾಜು ಸುರ್ವೆ, ಚಂದ್ರ​‍್ಪ ದೊಡ್ಮನಿ, ಲಿಂಗರಾಜ ಕೊಳಜಿ, ರವಿ ಹಲವಾಗಲ, ಗುರುರಾಜ ಕುಸಗೂರ ಸೇರಿದಂತೆ ಮತ್ತಿತರರು ಸುಗಮ ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಟ್ಟರು. 

ರಾಜ್ಯೋತ್ಸವ ಪ್ರಶಸ್ತಿ ವಿಜೇತ ಕೆ.ಸಿ.ನಾಗರಜ್ಜಿ, ನೀನಾಸಂ ಇಸ್ಮಾಯಿಲ್, ಕೊಟ್ರೇಶಪ್ಪ ಎಮ್ಮಿ, ನಾಗಪ್ಪ ಕಾಡಜ್ಜಿ, ಬಸವರಾಜ ಓಲೇಕಾರ, ಹಾಲೇಶ ಜಾಡರ, ಹನುಮಂತಪ್ಪ ಮಡಿವಾಳರ, ಬಸಪ್ಪ ಮೇಗಳಮನಿ, ಬಸವರಾಜಪ್ಪ ಮಳವಳ್ಳಿ, ಬಸಪ್ಪ ಕಡೇಮನಿ ಸೇರಿದಂತೆ ಮತ್ತಿತರರು ಇದ್ದರು. 


ಸುದ್ದಿ ಓದಿ