ರಾಣೆಬೆನ್ನೂರ

ಜಗತ್ತಿಗೆ ಸಮಾನತೆ, ಸಮನ್ವಯತೆ, ವೈಜ್ಞಾನಿಕತೆ, ಸೌಜನ್ಯತೆ ಸಾರಿದ ಭಾರತ: ಶಿವಯೋಗಿ ಶ್ರೀಗಳು

ಜಗತ್ತಿಗೆ ಸಮಾನತೆ, ಸಮನ್ವಯತೆ, ವೈಜ್ಞಾನಿಕತೆ, ಸೌಜನ್ಯತೆ ಸಾರಿದ ಭಾರತ: ಶಿವಯೋಗಿ ಶ್ರೀಗಳು

ರಾಣೇಬೆನ್ನೂರು 28:  ಆದ್ಯಾತ್ಮ ತತ್ವದ ತಳಹದಿಯ ಮೇಲೆ  ಸನಾತನ ಕಾಲದಿಂದಲೂ ಜಗತ್ತಿಗೆ ಸಮಾನತೆ, ಸಮನ್ವಯತೆ, ವೈಚಾರಿಕತೆ, ವೈಜ್ಞಾನಿಕತೆ, ಸೌಮ್ಯತ್ವ, ಮತ್ತು ಸೌಜನ್ಯತ್ವಗಳನ್ನು ಭೋದಿಸುತ್ತಾ ಬಂದ ಉದಾತ್ತ ಭಾರತೀಯ ಧರ್ಮಗಳಲ್ಲಿ ವೀರಶೈವ ಶಕ್ತಿ ವಿಶಿಷ್ಟಾದ್ವೈತ ಸಿದ್ದಾಂತವು ಒಂದಾಗಿದೆ. ಈ ಮೌಲಿಕ ಸಿದ್ದಾಂತವನ್ನು ಜಗತ್ತಿಗೆ ಸಾರಿ ಭಾರತೀಯ ತತ್ವ ಸಿದ್ದಾಂತಕ್ಕೆ ಸುವರ್ಣ ಕಿರಿಟ ಪ್ರಾಯವಾಗಿದೆ ನಮ್ಮ ವೀರಶೈವ ಧರ್ಮ. ಧರ್ಮ ಪ್ರಚಾರದಲ್ಲಿ ಶನೈಶ್ಚರ ಮಠವು ತನ್ನ 9ನೇ ವಾರ್ಷಿಕೋತ್ಸವದ ನಿಮಿತ್ತ ಜ್ಞಾನ ಲಕ್ಷ ದೀಪೋತ್ಸವ ಸೇರಿದಂತೆ ಮತ್ತಿತರೆ ವೈವಿಧ್ಯ ಮತ್ತು ವೈಷಿಷ್ಟತೆಯ ದಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಿರುವುದಾಗಿ  ಹಿರೇಮಠ ಶನೈಶ್ಚರ ಮಂದಿರದ ಶ್ರೀ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.  

ಅವರು ರವಿವಾರ ಗಂಗಾಪರ ರಸ್ತೆಯ ಮಂದಿರದ ಸಭಾಭವನದಲ್ಲಿ ನಡೆದ  ಮಾಧ್ಯಮ ಗೋಷ್ಟಿಯಲ್ಲಿ ಮಾತನಾಡಿದರು. ಶ್ರೀ ಮಠವು ಈ ಭಾಗದ ಮತ್ತು ನಾಡಿನ ಭಕ್ತರ ಸದಿಚ್ಚೆಯಂತೆ 9 ವರ್ಷಗಳ ಕಾಲ ಲೋಕಕಲ್ಯಾಣಕ್ಕಾಗಿ ಅನೇಕ ರೊಪದಲ್ಲಿ ದಾರ್ಮಿಕ ಕಾರ್ಯಕ್ರಮಗಳನ್ನು ನಿರೂಪಿಸುತ್ತಾ ಬಂದಿದೆ. ರಾಷ್ಟ್ರದ 2ನೇ ರಾಜ್ಯದ ಮೊದಲನೇಯ ಶನೈಶ್ಚರ ಸ್ವಾಮಿಯ ಬಯಲು ಆಲಯ ಪುಣ್ಯಕ್ಷೇತ್ರ ಇದಾಗಿದೆ. ಈಗಾಗಲೇ ಲೋಕಕಲ್ಯಾಣಾರ್ಥ, ಪ್ರದೇಶಾಭಿವೃದ್ದಿಗಾಗಿ 384 ದಿವಸಗಳ ಕಾಲ ನಡೆದ ಜಪಾನುಷ್ಟಾನ ಪೂಜಾ, ಪ್ರವಚನ, ಮಂಗಲ, ಭದ್ರಕಾಳಿ ಸಮೇತ ಶ್ರೀ ವಿರಭದ್ರೇಶ್ವರ ಕಲ್ಯಾಣ ಮಹೋತ್ಸವ ರೈತ ಚೈತನ್ಯ ಜೋತಿ ಯಾತ್ರೆ, ಸಾವಯವ ಕೃಷಿ ಮೇಳ, ಯೋಧ ನಮನ, ಬಾಗಿನ ಸಮರೆ​‍್ಣ, ಕಾರ್ಯಕ್ರಮವು ನವೆಂಬರ್ 29 ರಿಂದ ಆರಂಭವಾಗಿದ್ದು ಡಿಸೆಂಬರ್ 4 ರಂದು ಸಾಂಗ ಮಂಗಲಗೂಳ್ಳಲಿದೆ ಎಂದರು.  

ಮನುಕುಲ ಸದ್ಭಾವನಾ ಸಮಾರಂಭವು ಶನಿವಾರ ಮಧ್ಯಾನ 3 ಗಂಟೆಗೆ ನಡೆಯಲಿದ್ದು, ರಂಭಾಪುರಿ ಪೀಠದ 1008 ಜಗದ್ಗುರು ಡಾಽಽ ವೀರಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ದಿವ್ಯ ಸಾನಿದ್ಯದಲ್ಲಿ, ನಾಡಿನ ಅನೇಕ ಪೂಜ್ಯರು  ಉಪಸ್ಥಿತರಿರುವರು. ಜಸ್ಟಿಸ್ ವಿ. ಗೋಪಾಲಗೌಡ, ಅವರು ಉದ್ಘಾಟಿಸುವರು. ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ ರಾಜ್ಯ ಸಚಿವ ಕೆ.ಎಸ್‌. ಈಶ್ವರ​‍್ಪ ಅವರಿಗೆ ಮನುಕೂಲ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ ಪ್ರಧಾನ ನಡೆಯಲಿದೆ. ಜಿ. ಪರಮೇಶ್ವರ, ವಿಶ್ವನಾಥ ಹಿರೇಮಠ, ಶರಣಬಸಪ್ಪ ದರ್ಶನಾಪುರ,ಶಿವಕುಮಾರ ಉದಾಸಿ, ಆರ್, ಶಂಕರ್, ರುದ್ರ​‍್ಪ ಲಮಾಣಿ, ವಿರೋಪಾಕ್ಷಪ್ಪ ಬಳ್ಳಾರಿ, ಶ್ರೀನಿವಾಸ ಮಾನೆ ಮತ್ತಿತರರು ಅಥಿತಿಗಳಾಗಿ ಭಾಗವಹಿಸಲಿದ್ದಾರೆ ಎಂದರು.  

ಸಂಜೆ 7 ಗಂಟೆಗೆ ಲಕ್ಷ ದೀಪೋತ್ಸವದ ಉದ್ಘಾಟನೆಯನ್ನು ಶಾಸಕ ಅರುಣಕುಮಾರ ಪೂಜಾರ ನೆರವೆರಿಸುವರು. ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ನಾಡಿನ ಎಲ್ಲ ಮಠ ಪೀಠಗಳ ಹರಗುರು ಚರಮೂರ್ತಿಗಳು ಗಣನೀಯ ಸಾಧಕರು ನಾಡಿನ ಗಣ್ಯರು, ರಾಜಕೀಯ ನಾಯಕರು, ಉದ್ಯಮಿಗಳು, ಸೇರಿದಂತೆ ಸ್ಥಳೀಯ ಸಂಘ ಸಂಸ್ಥೆಗಳ ಮುಖಂಡರು ಪದಾದಿಕಾರಿಗಳು ಗ್ರಾಮೀಣ ಪ್ರದೇಶದ ಸಾಧಕರು, ಮತ್ತಿತರರು ನಡೆಯುವ ಎಲ್ಲಾ ಕಾರ್ಯಕ್ರಮಗಳಲ್ಲಿ ಪಾಲ್ಗೂಳ್ಳುವರು ಎಂದು ವಿವರಿಸಿದ ಶ್ರೀ ಶಿವಯೋಗಿ ಶಿವಾಚಾರ್ಯರು ಪಾಲ್ಗೂಂಡು ಶನೈಶ್ಚರ ಸ್ವಾಮಿಯ ದಿವ್ಯ ದರ್ಶನ ಪಡೆದು ಪುನೀತರಾಗುವಂತೆ ಅವರು ತಿಳಿಸಿದರು.  

ಮಾಧ್ಯಮ ಗೋಷ್ಟಿಯಲ್ಲಿ ಕೂಡಲದ ಶ್ರೀ ಗುರು ಮಹೇಶ್ವರ ಶಿವಾಚಾರ್ಯರು, ಹೇರೂರು ನಂಜುಂಡೇಶ್ವರ ಪಂಡಿತಾರಾಧ್ಯ ಶಿವಾಚಾರ್ಯರು, ಯುವ ಮುಖಂಡ ಸಿದ್ದಣ್ಣ ಚಿಕ್ಕಬಿದರಿ, ಸ್ವಾ ಕರವೇ ಅಧ್ಯಕ್ಷ  ನಿತ್ಯಾನಂದ ಕುಂದಾಪುರ ಮತ್ತಿತರರು ಇದ್ದರು. 


ಸುದ್ದಿ ಓದಿ