ರಾಷ್ಟ್ರೀಯ

ಅಭಿವೃದ್ದಿ ಶೀಲ ದೇಶಗಳ ಮಾರುಕಟ್ಟೆ- ನಾಲ್ಕು ಸ್ಥಾನ ಕೆಳಗಿಳಿದ ಭಾರತ

ಅಭಿವೃದ್ದಿ ಶೀಲ ದೇಶಗಳ  ಮಾರುಕಟ್ಟೆ- ನಾಲ್ಕು ಸ್ಥಾನ  ಕೆಳಗಿಳಿದ ಭಾರತ

ನವದೆಹಲಿ,ನವೆಂಬರ್ 19: ಅಭಿವೃದ್ಧಿ ಶೀಲ   ಮಾರುಕಟ್ಟೆಯಲ್ಲಿ  ಭಾರತದ   ಶ್ರೇಯಾಂಕ  ಕುಸಿದಿದೆ.  ಅಕ್ಟೋಬರ್ ತಿಂಗಳ ಶ್ರೇಯಾಂಕದಲ್ಲಿ  ನಾಲ್ಕು ಸ್ಥಾನ  ಕುಸಿದು 8 ನೇ ಸ್ಥಾನಕ್ಕೆ ತಲುಪಿದೆ. ಜೂನ್‌  ನಂತರ  ಅಭಿವೃದ್ಧಿಶೀಲ  ದೇಶಗಳ ಪಟ್ಟಿಯಲ್ಲಿ  ಭಾರತದ ಸ್ಥಾನ   ಕ್ರಮವಾಗಿ ಸ್ಥಿರವಾಗಿ ಕುಸಿಯುತ್ತಿದೆ. ಆದರೂ  ಸೆಪ್ಟೆಂಬರ್  ಅಂತ್ಯಕ್ಕೆ ಮುಗಿದ  ತ್ರೈಮಾಸಿಕ್ಕೆ ಸಂಬಂಧಿಸಿದ  ಜಿಡಿಪಿ ಅಂಕಿಅಂಶಗಳು ಬಿಡುಗಡೆಯಾದರೆ ಶ್ರೇಯಾಂಕಗಳು ಸ್ವಲ್ಪ ಸುಧಾರಿಸಬಹುದು  ಎಂದು ತಜ್ಞರು ಅಂದಾಜಿಸಿದ್ದಾರೆ. ವಾಸ್ತವವಾಗಿ, ಜೂನ್‌ನಲ್ಲಿ ಭಾರತ ತಳಮಟ್ಟಕ್ಕೆ ಕುಸಿದಿದೆ.  ಆ ನಂತರ ಕಾರ್ಖಾನೆ ಉತ್ಪನ್ನಗಳು  ಹೆಚ್ಚಳದಿಂದ ಆರ್ಥಿಕ ಪರಿಸ್ಥಿತಿ ಸುಧಾರಿಸಿದಂತೆ ಭಾರತದ ಶ್ರೇಣಿ ಸ್ವಲ್ಪ ಸುಧಾರಿಸಿದೆ.

ಈಗಾಗಿ  ಸೆಪ್ಟೆಂಬರ್‌ನಲ್ಲಿ,  10  ಅಗ್ರ  ಅಭಿವೃದ್ದಿ ಶೀಲ ಮಾರುಕಟ್ಟೆಗಳಲ್ಲಿ ನಾಲ್ಕನೇ ಸ್ಥಾನಕ್ಕೆ  ಏರಿದೆ  ಆದರೆ,  ಅಕ್ಟೋಬರ್ ನಲ್ಲಿ  ಪರಿಸ್ಥಿತಿ ವ್ಯತಿರಿಕ್ತವಾಗಿದೆ ಎಂದು ಇತ್ತೀಚಿನ  ಅಂಕಿ ಅಂಶಗಳು  ತೋರಿಸುತ್ತದೆ. ಸೆಪ್ಟೆಂಬರ್ ತ್ರೈಮಾಸಿಕದಲ್ಲಿ, ಕೆಲವು ಅಭಿವೃದ್ದಿ  ಶೀಲ ಮಾರುಕಟ್ಟೆಗಳ ಜಿಡಿಪಿ ಗಮನಾರ್ಹವಾಗಿ  ವೃದ್ದಿಸಿದೆ.  ಜೂನ್ ಅಂತ್ಯದ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ -ಶೇ. 24 ಕ್ಕೆ ಕುಸಿದಿರುವುದು  ಭಾರತಕ್ಕೆ  ಚೇತರಿಸಿಕೊಳ್ಳಲು ಸಾಧ್ಯವಾಗದ  ಹೊಡೆತ ನೀಡಿದೆ. . ಆದರೆ, ರಿಸರ್ವ್ ಬ್ಯಾಂಕ್ ಸೆಪ್ಟೆಂಬರ್ ಅಂತ್ಯದ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆಯನ್ನು ಶೇಕಡಾ- 8.6 ರಷ್ಟು ಮುನ್ಸೂಚನೆ ನೀಡಿದೆ. ಏಷ್ಯಾದ ದೇಶಗಳಾದ ಚೀನಾ (4.9%), ಇಂಡೋನೇಷ್ಯಾ (-3.5%) ಮತ್ತು ಮಲೇಷ್ಯಾ (-2.7%) ಗೆ ಹೋಲಿಸಿದರೆ ಇದು ಅತ್ಯಂತ  ಕಡಿಮೆ. ರಫ್ತು ಕುಸಿತ, ಹೆಚ್ಚುತ್ತಿರುವ ಹಣದುಬ್ಬರ  ಭಾರತದ ಆರ್ಥಿಕತೆಯ ಮೇಲೆ ತೀವ್ರ ಪರಿಣಾಮ ಬೀರಿದೆ. ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಟರ್ಕಿಯ ನಂತರ  ಬಾರತ  ಅತಿ ಹೆಚ್ಚು ಹಣದುಬ್ಬರ ದರ ಹೊಂದಿರುವ ದೇಶವಾಗಿದೆ. 

ಸುದ್ದಿ ಓದಿ