ಭಯೋತ್ಪಾದನೆ ವಿರುದ್ಧ ಹೋರಾಟಕ್ಕೆ ಭಾರತಕ್ಕೆ ಸಾಥ್ : ಅಮೆರಿಕ
ನವದೆಹಲಿ, ನವೆಂಬರ್ 26: ಭಯೋತ್ಪಾದನೆ ವಿರುದ್ಧ ಹೋರಾಡಲು
ಭಾರತದೊಂದಿಗೆ ಅಮೆರಿಕ ಸಾಥ್ ನೀಡುತ್ತದೆ ಎಂದು ಮುಂಬೈನಲ್ಲಿ ನಡೆದ 26/11 ಮುಂಬೈ ದಾಳಿಯ 12 ನೇ ವರ್ಷದಂದು
ಅಮೆರಿಕ ಹೇಳಿದೆ.
ಆರು ಮಂದಿ ಅಮೆರಿಕನ್ನರು ಸೇರಿದಂತೆ ದಾಳಿಯಲ್ಲಿ ಬಲಿಯಾದ ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡುವುದು ಹಾಗೂ ಅಪರಾಧಿಗಳನ್ನು ಹೊಣೆಗಾರರನ್ನಾಗಿ ಮಾಡುವ ಬದ್ಧತೆಯನ್ನು ಅಮೆರಿಕ ಪುನರುಚ್ಚರಿಸಿದೆ ಎಂದು ವಿದೇಶಾಂಗ ಇಲಾಖೆ ಟ್ವೀಟ್ನಲ್ಲಿ ತಿಳಿಸಿದೆ.
"26/11 ಮುಂಬೈ ದಾಳಿಯ 12 ನೇ ವರ್ಷದಂದು ದುಷ್ಕೃತ್ಯದ ಅಪರಾಧಿಗಳನ್ನು ಹೊಣೆಗಾರರನ್ನಾಗಿ ಮಾಡುವ ಮತ್ತು ಆರು ಅಮೆರಿಕನ್ನರು ಸೇರಿದಂತೆ ಸಂತ್ರಸ್ತರಿಗೆ ನ್ಯಾಯವನ್ನು ಖಾತರಿಪಡಿಸುವ ತನ್ನ ಬದ್ಧತೆಯನ್ನು ಪುನರುಚ್ಚರಿಸುತ್ತದೆ. ಭಾರತದೊಂದಿಗೆ ಕೈ ಜೋಡಿಸಿ, ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ನಾವು ದೃಢನಿಶ್ಚಯದಿಂದ ಇರುತ್ತೇವೆ" ಎಂದು ಇಲಾಖೆಯ ದಕ್ಷಿಣ ಏಷ್ಯಾ ಬ್ಯೂರೋ ಹೇಳಿದೆ. ಮತ್ತೊಂದು ಟ್ವೀಟ್ನಲ್ಲಿ, ಇಲಾಖೆಯ ಉಪ ವಕ್ತಾರ ಕೇಲ್ ಬ್ರೌನ್, ದಾಳಿಗೆ ಕಾರಣರಾದ ಎಲ್ಲರನ್ನೂ ನ್ಯಾಯದ ಚೌಕಟ್ಟಿಗೆ ತರಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ಅಮೆರಿಕ ಪ್ರಯತ್ನಿಸುತ್ತದೆ ಎಂದು ಹೇಳಿದ್ದಾರೆ. "ನವೆಂಬರ್ 26 ರಂದು ಭಾರತದ ಮುಂಬೈನಲ್ಲಿ ನಡೆದ ಭಯೋತ್ಪಾದಕ ದಾಳಿಯ 12 ನೇ ವಾರ್ಷಿಕೋತ್ಸವವನ್ನು ಸೂಚಿಸುತ್ತದೆ. ಭೀಕರ ದಾಳಿಗೆ ಕಾರಣರಾದವರಿಗೆ ಶಿಕ್ಷೆಯಾಗಿ ಸಂತ್ರಸ್ತರಿಗೆ ನ್ಯಾಯ ದೊರಕಬೇಕೆಂದು ಆಗ್ರಹಿಸುತ್ತದೆ” ಎಂದು ಬ್ರೌನ್ ಹೇಳಿದ್ದಾರೆ.