ಶಿಕ್ಷಣ, ರಕ್ಷಣೆ, ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ದೇಶ ಸಾಕಷ್ಟು ಪ್ರಗತಿ ಸಾಧಿಸಿದೆ : ಆನಂದ ನ್ಯಾಮಗೌಡ
ಜಮಖಂಡಿ,16: ದೇಶಕ್ಕೆ ಸ್ವತಂತ್ರ್ಯ ಬಂದ ಸಮಯ 1947ರಲ್ಲಿ ಮೂಲಭೂತ ಮತ್ತು ಅನೇಕ ಬಾಹ್ಯ ಸಮಸ್ಯೆಗಳನ್ನು ಎದುರಿಸುತ್ತಿತ್ತು. ಆಹಾರ ಕೊರತೆಯನ್ನು ನಿಭಾಯಿಸಿ ಆಮುದು ರಾಷ್ಟ್ರದಿಂದ ರಫ್ತುರಾಷ್ಟ್ರವಾಗಿ ಬೆಳೆದಿದೆ. ಆರೋಗ್ಯ, ಶಿಕ್ಷಣ, ರಕ್ಷಣೆ, ತಂತ್ರಜ್ಞಾನ ಕ್ಷೇತ್ರದಲ್ಲಿ ನಮ್ಮ ಭಾರತ ದೇಶ ಸಾಕಷ್ಟು ಪ್ರಗತಿ ಸಾಧಿಸಿದೆಂದು ಸಂಸ್ಥೆಯ ಅಧ್ಯಕ್ಷ, ಮಾಜಿ ಶಾಸಕ ಆನಂದ ನ್ಯಾಮಗೌಡ ಹೇಳಿದರು.
ನಗರದ ರಾಯಲ್ ಪ್ಯಾಲೇಸ್ ಶಾಲೆ ಮತ್ತು ಪದವಿ ಪೂರ್ವ ಮತ್ತು ಪದವಿ ಕಾಲೇಜಿನಲ್ಲಿ ನಡೆದ 78ನೇ ಸ್ವಾತಂತ್ರ್ಯೋತ್ಸವದ ಅದ್ದೂರಿ ಕಾರ್ಯಕ್ರಮದಲ್ಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ದೂರದೃಷ್ಟಿಯ ನೇತೃತ್ವ ಮತ್ತು ಕ್ರಿಯಾಶೀಲ ಸಮಾಜ ಕಾರಣವಾಗಿದೆ.ಹಾಗೆ ವಿದ್ಯಾರ್ಥಿಗಳನ್ನು ಪಂಚಶೀಲಗಳಾದ ಸಮಯಪಾಲನೆ, ಸತತ ಪರಿಶ್ರಮ, ಶಿಸ್ತುಬದ್ಧ ಜೀವನ, ಗುರಿಯ ಕಡೆ ಗಮನ ಹರಿಸಿ ಮತ್ತು ಸಹನೆಯನ್ನು ಅಳವಡಿಸಿಕೊಳ್ಳಬೇಕು. ದೇಶದ ಸಮಗ್ರ ಅಭೀವೃದ್ಧಿಗೆ ತಮ್ಮ ಕೊಡುಗೆ ಬಹಳ ಮುಖ್ಯವಾಗಿದೆ ಎಂದರು.
ಸುಮಿತ್ರಾ ಸಿದ್ದು ನ್ಯಾಮಗೌಡ, ಬಸವರಾಜ ಸಿದ್ದು ನ್ಯಾಮಗೌಡ, ಶಾಲೆಯ ಪ್ರಾಚಾರ್ಯೆ ರೀತಾ ಜೈನರ ಅಧ್ಯಕ್ಷತೆ ವಹಿಸಿದ್ದರು. ಪದವಿ ಕಾಲೇಜಿನ ಪ್ರಾಚಾರ್ಯ ಡಾ,ಎನ್,ಎಂ, ರೊಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ದೇಶ ಭಕ್ತಿಗೀತೆಗಳು, ನೃತ್ಯ, ಯೋಗ, ಸ್ಕೇಟಿಂಗ ಪ್ರದರ್ಶನ ಸೇರಿದಂತೆ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ರಾಯಲ್ಕ್ರಿಕೆಟ್ಕ್ಲಬ್ ಮೂಲಕ ಕ್ರೀಕೆಟ್ ತರಬೇತಿಯನ್ನು ಉದ್ಘಾಟಿಸಲಾಯಿತು. ಕುಮಾರಿ ರಿತು ಕಾಂತಿ, ಶ್ರಾವ್ಯಾ ಮಾಳಿ ಕಾರ್ಯಕ್ರಮ ನಿರೂಪಿಸಿದರು. ಕುಮಾರ ಶ್ಲೋಕ ಸೋನಿ ವಂದಿಸಿದರು.