ಭಾರತ್-ಪಾಕಿಸ್ತಾನ್ ಕ್ರಿಕೇಟ್ ಪಂದ್ಯೆ: ಯಶಸ್ವಿಗಾಗಿ ಗಾಳೆಮ್ಮನಿಗೆ ಪೂಜೆ
ಲೋಕದರ್ಶನ ವರದಿ
ರಾಣೆಬೆನ್ನೂರು 24: ದುಬೈನಲ್ಲಿ ರವಿವಾರ ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ಮಧ್ಯದ ಪಂದ್ಯದಲ್ಲಿ ಭಾರತವು ಜಯಗಳಿಸಲೆಂದು ಪ್ರಾರ್ಥನೆ ಸಲ್ಲಿಸಿದ ಜಿಲ್ಲೆಯ ನೆಗಳೂರು ಗ್ರಾಮದ ಡಾ. ಬಿ.ಆರ್ ಅಂಬೇಡ್ಕರ್ ಕ್ರಿಕೇಟ್ ಕ್ಲಬ್ ಮತ್ತು ನೂರಾರು ಕ್ರಿಡಾಭಿಮಾನಿಗಳು ಗ್ರಾಮದ ಗಾಳೆಮ್ಮನ ದೇವಸ್ಥಾನಕ್ಕೆ ತೆರಳಿ ದೇವಿಗೆ ಪೂಜೆ ಸಲ್ಲಿಸಿದರು. ಕ್ರಿಕೇಟ್ ಕ್ಲಬ್ನ ಮುಖಂಡ ಸಂಜಯ್ಗಾಂಧಿ ಸಂಜೀವಣ್ಣನವರ, ನಾಗರಾಜ ಶಿಡ್ಲಣ್ಣನವರ, ಮರಿಯಪ್ಪ ಸಿದ್ದಣ್ಣನವರ, ಜಗದೀಶ ಹುಣಸಿಮರದ, ಡಿ.ಹೆಚ್. ತಿಮ್ಮಣ್ಣನವರ, ಅಶೋಕ ಜಾಲಣ್ಣನವರ, ಸಂತೋಷ ಹಾದಿಮನಿ, ಮಂಜಪ್ಪ ಸಿದ್ದಣ್ಣನವರ, ರಾಜು ಹುಣಸಿಮರದ, ತಿರಕಪ್ಪ ತಿಮ್ಮಣ್ಣನವರ, ಆನಂದ ಶಿಡ್ಲಣ್ಣನವರ,ಬಸವರಾಜ ಹುಣಸಿಮರದ, ಹೂನ್ನಪ ಜಾಲಣ್ಣನವರ, ಹನುಮಂತಪ್ಪ ಕಬ್ಬಾರ ಸೇರಿದಂತೆ ಅನೇಕ ಗಣ್ಯರು ಯುವಕರು ಉಪಸ್ಥಿತರಿದ್ದರು.