ರಾಷ್ಟ್ರೀಯ

ಭಾರತದ ಜಾಗತಿಕ ಕಾರ್ಯತಂತ್ರ ತತ್ತರಿಸಿದೆ, ಎಲ್ಲ ಅಧಿಕಾರ ಮತ್ತು ಎಲ್ಲೆಡೆ ಕಳೆದುಕೊಳ್ಳುತ್ತಿದೆ- ರಾಹುಲ್ ಗಾಂಧಿ

ಭಾರತದ ಜಾಗತಿಕ ಕಾರ್ಯತಂತ್ರ ತತ್ತರಿಸಿದೆ, ಎಲ್ಲ ಅಧಿಕಾರ ಮತ್ತು ಎಲ್ಲೆಡೆ ಕಳೆದುಕೊಳ್ಳುತ್ತಿದೆ- ರಾಹುಲ್ ಗಾಂಧಿ

ನವದೆಹಲಿ, ಜುಲೈ 15: ಚಾಬಹಾರ್ ರೈಲು ಯೋಜನೆಯಿಂದ ಇರಾನ್ ಭಾರತವನ್ನು ಹೊರಹಾಕಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ   ನರೇಂದ್ರ ಮೋದಿ ಸರ್ಕಾರದ ಮೇಲೆ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಭಾರತದ ಜಾಗತಿಕ ಕಾರ್ಯತಂತ್ರ ತತ್ತರಿಸಿದ್ದು, ಎಲ್ಲೆಡೆ ಅಧಿಕಾರ ಮತ್ತು ಮಾನ್ಯತೆ ಕಳೆದುಕೊಳ್ಳುತ್ತಿದೆ ಎಂದು ಕಿಡಿಕಾರಿದ್ದಾರೆ. 

‘ಭಾರತದ ಜಾಗತಿಕ ಕಾರ್ಯತಂತ್ರವು ತತ್ತರಿಸಿದೆ. ನಾವು ಎಲ್ಲೆಡೆ ಅಧಿಕಾರ ಮತ್ತು ಮಾನ್ಯತೆ ಕಳೆದುಕೊಳ್ಳುತ್ತಿದ್ದೇವೆ. ಭಾರತ ಸರ್ಕಾರಕ್ಕೆ ಏನು ಮಾಡಬೇಕೆಂದು ತಿಳಿದಿಲ್ಲ.’ ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.

ನಿಧಿ ಪೂರೈಕೆ ವಿಳಂಬ ಕುರಿತ ವರದಿಯನ್ನು ಉಲ್ಲೇಖಿಸಿ, ಇರಾನ್ ಚಾಬಹಾರ್ ರೈಲು ಯೋಜನೆಯಿಂದ ಭಾರತವನ್ನು ಕೈಬಿಟ್ಟಿದೆ ಎಂದು ರಾಹುಲ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಟೀಕಿಸಿದ್ದಾರೆ.

ಆಫ್ಘಾನಿಸ್ತಾನದ ಗಡಿಯಲ್ಲಿ ಚಾಬಹಾರ್ ಬಂದರಿನಿಂದ ಜಹೇದಾನ್‌ಗೆ ರೈಲು ಮಾರ್ಗವನ್ನು ನಿರ್ಮಿಸಲು ಭಾರತ ಮತ್ತು ಇರಾನ್ ನಾಲ್ಕು ವರ್ಷಗಳ ಹಿಂದೆ ಒಪ್ಪಂದಕ್ಕೆ ಸಹಿ ಹಾಕಿದ್ದವು.

ಧನಸಹಾಯ ಮತ್ತು ಯೋಜನೆಯನ್ನು ಪ್ರಾರಂಭಿಸುವಲ್ಲಿ ಭಾರತದ ಕಡೆಯಿಂದ ವಿಳಂಬವನ್ನು ಉಲ್ಲೇಖಿಸಿ ಇರಾನ್ ಸರ್ಕಾರ ಸ್ವಂತವಾಗಿ ಈ ಯೋಜನೆಯಡಿ ನಿರ್ಮಾಣವನ್ನು ಮುಂದುವರಿಸಲು ನಿರ್ಧರಿಸಿದೆ ಎಂದು ವರದಿಗಳು ತಿಳಿಸಿವೆ.


ಸುದ್ದಿ ಓದಿ