ರಾಣೆಬೆನ್ನೂರ

ಭಾರತದ ಭವಿಷ್ಯ ಯುವಜನಾಂಗದ ಮೇಲಿದೆ: ನಂದ್ಯಾಲ

ಭಾರತದ  ಭವಿಷ್ಯ  ಯುವಜನಾಂಗದ  ಮೇಲಿದೆ: ನಂದ್ಯಾಲ

ಲೋಕದರ್ಶನ ವರದಿ 

  ರಾಣೇಬೆನ್ನೂರು 14:  ಭಾರತ  ದೇಶವು  ವಿಶ್ವದ  ಎಲ್ಲ ರಾಷ್ಟ್ರಗಳು  ಮೆಚ್ಚಿಕೊಳ್ಳುವಂತಹ  ದೇಶವಾಗಿ  ಗುರುತಿಸಿಕೊಂಡಿದೆ.  ದೇಶ  ಪರಿಪೂರ್ಣ  ಅಭಿವೃದ್ದಿ  ಸಾಧಿಸಬೇಕಾದರೆ  ಯುವಜನಾಂಗವು  ನಿರಂತರ  ನಿಷ್ಠೆಯಿಂದ  ಪ್ರಾಮಾಣಿಕವಾಗಿ  ತಮ್ಮ ಕರ್ತವ್ಯವನ್ನು  ಮೆರೆಯಬೇಕಾದ  ಇಂದಿನ  ಅಗತ್ಯವಿದೆ ಎಂದು  ನಿವೃತ್ತ ಉಪನ್ಯಾಸಕ  ಪ್ರೊ: ಬಿ.ಬಿ. ನಂದ್ಯಾಲ್ ಹೇಳಿದರು.   

        ಅವರು  ಇಲ್ಲಿನ  ರಾಣೇಬೆನ್ನೂರು  ತಾಲೂಕಾ  ಶಿಕ್ಷಣ  ಸಂಸ್ಥೆಯ  ವಿ.ಕೆ. ಸಾಹುಕಾರ್  ಸಭಾಭವನದಲ್ಲಿ  ಜಿಲ್ಲಾ ಆಡಳಿತ, ಜಿ.ಪಂ. ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಮತ್ತಿತರೆ  ಇಲಾಖೆ  ಸಂಯುಕ್ತವಾಗಿ  ಆಯೋಜಿಸಿದ್ದ  ಅಂತರಾಷ್ಟ್ರೀಯ  ಯುವದಿನಾಚರಣೆ  ಕಾರ್ಯಕ್ರಮದಲ್ಲಿ  ಪಾಲ್ಗೊಂಡು  ಮಾತನಾಡಿದರು.  ದೇಶ  ಬಲಿಷ್ಠವಾಗಿದೆ.  ಅದನ್ನು  ಸರಿಯಾಗಿ  ನಡೆಯಬೇಕಾದರೆ  ಇಂದಿನ  ಯುವಕರು  ತಮ್ಮ ವೈಚಾರಿಕ  ವಿಚಾರಗಳನ್ನು  ಅಳವಡಿಸಿಕೊಂಡು  ಪ್ರಗತಿಯತ್ತ  ಕೊಂಡೊಯ್ಯಬೇಕಾದ  ಅಗತ್ಯವಿದೆ ಎಂದ  ಅವರು  ವಿದ್ಯಾರ್ಥಿಗಳಲ್ಲಿ  ಉತ್ತಮ ವ್ಯಕ್ತಿತ್ವ  ರೂಪುಗೊಳ್ಳಬೇಕಾಗಿದೆ.  ಅದಕ್ಕೆ  ಶಿಕ್ಷಣದ  ಜೊತೆಜೊತೆಗೆ  ಸಮಾಜಮುಖಿ  ಕಾರ್ಯದಲ್ಲಿ  ತೊಡಗಿಸಿಕೊಂಡು  ಮುನ್ನಡೆಯಬೇಕು.  ಎಂದು  ನಂದ್ಯಾಲ್ ಅವರು  ಯುವಸಮುದಾಯಕ್ಕೆ ಕರೆ ನೀಡಿದರು. 

        ಕಾಲೇಜು  ಪ್ರಾಚಾರ್ಯ  ಎಫ್‌.ಹೆಚ್‌. ಮಾಚೇನಹಳ್ಳಿ   ಅವರು  ಕಾರ್ಯಕ್ರಮದ  ಅಧ್ಯಕ್ಷತೆ  ವಹಿಸಿದ್ದರು.  ಯೋಜನಾಧಿಕಾರಿ  ಡಾ. ಸರಸ್ವತಿ ಬಮ್ಮನಾಳ್, ಉಪನ್ಯಾಸಕರಾದ  ಸಿ.ಎ. ಹರಿಹರ,  ಮಧುಕುಮಾರ್ ಆರ್‌. ಸ್ವಪ್ನಾ ಮುದುಗಲ್,  ಶ್ರೀಧರ್ ಜಿ.ಆರ್‌. ಸೇರಿದಂತೆ  ಮತ್ತಿತರೆ  ಉಪನ್ಯಾಸಕರು  ಗಣ್ಯರು  ನೂರಾರು  ಯುವಕರು  ಪಾಲ್ಗೊಂಡಿದ್ದರು. 


ಸುದ್ದಿ ಓದಿ