ಜಮಖಂಡಿ

ಸ್ವಾತಂತ್ರ್ಯ ದಿನಾಚರಣೆ ದೇಶಾಭಿಮಾನ ಮೆರೆಯುವ ದಿನ: ಶ್ವೇತಾ ಬೀಡೀಕರ

ಸ್ವಾತಂತ್ರ್ಯ ದಿನಾಚರಣೆ ದೇಶಾಭಿಮಾನ ಮೆರೆಯುವ ದಿನ: ಶ್ವೇತಾ ಬೀಡೀಕರ

ಜಮಖಂಡಿ 16: 78 ಸ್ವಾತಂತ್ರ್ಯ ದಿನಾಚರಣೆಯನ್ನು ಅತೀ ಸಂಭ್ರಮ ಸಡಗರದಿಂದ ಆಚರಣೆ ಮಾಡುವ ದಿನವಾಗಿದೆ. ನಮ್ಮಲ್ಲಿ ದೇಶಾಭಿಮಾನ. ಭಕ್ತಿಭಾವದಿಂದ ಮೆರೆಯುವ ದಿನವಾಗಿದ್ದು. ನಮ್ಮ ಭಾರತ ದೇಶದ ಇಂದು ಸ್ವಾತಂತ್ರ್ಯದ ಹಬ್ಬವಾಗಿದೆಂದು ಉಪವಿಭಾಗಾಧಿಕಾರಿ ಶ್ವೇತಾ ಬೀಡೀಕರ ಹೇಳಿದರು. 

ನಗರದ ಐತಿಹಾಸ ಪೋಲೊ ಮೈದಾನದಲ್ಲಿ ನಡೆದ 78 ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣ ನೇರವೆರಿಸಿ ಮಾತನಾಡಿದ ಅವರು, ದೇಶಕ್ಕೆ ನಮ್ಮ ಕೊಡಗೆ ಎನ್ನು ಎಂಬುವದು ನಾವುಗಳು ಮೊದಲು ತಿಳಿದುಕೊಳ್ಳಬೇಕು. ನಮ್ಮ ಭಾರತ ದೇಶವನ್ನು ಎಂದು ಮರೆಯಬಾರದು. ನಮ್ಮ ಭಾಷೆಯ ಬಗ್ಗೆ ನಮ್ಮಗೆ ಹೆಮ್ಮೆಯಾಗಿರಬೇಕು. ಬಡವರ ಕಂಬನಿಯನ್ನು ವರೆಸುವ ನಾಯಕನಾಗಬೇಕು. ಜ್ಞಾನಿ,ವಿಜ್ಞಾನಿಯಾಗಬೇಕು. ಸ್ವಾತಂತ್ರ್ಯದ ದಿನ ದೇಶದ ಬಗ್ಗೆ ಗೌರವ ನೀಡುವ ವ್ಯಕ್ತಿಯಾಗಬೇಕು. ದೀರ,ವೀರ,ಶೂರನಾಗುವ ಮೂಲಕ ಇಂತಹ ವೇದಿಕೆಯಲ್ಲಿ ಇಂದಿನ ಮಕ್ಕಳು ಮೇಲೆ ಬಂದರೆ ಮಾತ್ರ ತಾವುಗಳು ಸಹ ಮಹನೀಯರ ಸ್ಥಾನಕ್ಕೆ ಬರಲು ಸಾಧ್ಯವಾಗುತ್ತದೆ ಎಂದರು. 

ನಮ್ಮ ಭಾರತ ದೇಶ ಸ್ವಾತಂತ್ರ್ಯ ಪಡೆದ ನಂತರ ಯಾರಿಗೂ ತೊಂದರೆ ನೀಡದೆ ಮುನ್ನಡೆ ಸಾಧಿಸಿಸುತ್ತಿದೆ. ನಮ್ಮ ನಾಡು ಬಸವನ್ನಣ್ಣವರ ನಾಡು ನಮ್ಮದಾಗಿದೆ.ಬಸವ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಬಸವನ್ನಣ್ಣವರ ನಾಡಿನಲ್ಲಿ ಹುಟ್ಟಿದವರಾಗಿದ್ದೇವೆ. ಇಂದು ದೇಶಕ್ಕೆ ಸ್ವಾತಂತ್ರ್ಯ ಬಂದ ದಿನವಾಗಿದ್ದು. ದೇಶಕ್ಕಾಗಿ ಸಾಕಷ್ಟು ಮಹನೀಯರು ದೇಶಕ್ಕಾಗಿ ಹೋರಾಟ ಮಾಡಿ. ತಮ್ಮ ಜೀವನವನ್ನು ತ್ಯಾಗ ಬಲಿದಾನ ಮಾಡಿದ್ದಾರೆ. ಅಂತವರ ಬಗ್ಗೆ ಇತಿಹಾಸವನ್ನು ಓದುವಾಗ ಮನಸಿನಿಂದ ಓದಬೇಕು.ದೇಶ ಭಕ್ತರ ಬಗ್ಗೆ ತಿಳಿದುಕೊಳ್ಳುವದು ಮಹತ್ವದಾಗಿದೆ. ಅವರ ಜೀವನ ಚರಿತ್ರೆಯನ್ನು ಜೀವನದಲ್ಲಿ ಅಳವಡಿಸಿಕೊಂಡು ಮುಂದುವರಿಯಬೇಕು ಎಂದರು. 

ಬೇರೆ ದೇಶದಲ್ಲಿ ಮಹಿಳಾ ಸಬಲಿಕರಣ ಇರುವುದಿಲ್ಲ. ಆದರೆ ನಮ್ಮ ದೇಶದಲ್ಲಿ ಮಹಿಳೆಯರಿಗೆ ಸಬಲೀಕರಣ ನೀಡಿದ ದೇಶ ನಮ್ಮದಾಗಿದೆ. ಭಾರತ ಸಂವಿಧಾನದ ಅಡಿಯಲ್ಲಿ ನಿಯಮ, ಕಾನೂನು, ಕಾಯ್ದೆ ಅಡಿಯಲ್ಲಿ ಸಮಾನರಾಗಿ, ಸಮಾನತೆಯಿಂದ ಜೀವನವನ್ನು ನಡೆಸುತ್ತಿದ್ದೇವೆ. ಇದಕ್ಕೆ ಕಾರಣ ಡಾ,ಬಿ,ಆರ್,ಅಂಬೇಡ್ಕರ್ ಅವರ ಬರೆದ ಸಂವಿಧಾನದಿಂದ ಇಂದು ಅವರ ನನೆಪಿಸಿಕೊಳ್ಳಬೇಕಾಗಿದೆ ಎಂದರು. 

ಗೆಸರು ಗದ್ದೆಯಲ್ಲಿ ನೃತ್ಯ : 

ಐತಿಹಾಸಿಕ ಪೋಲೋ ಮೈದಾನ ಮಳೆಯಿಂದಾಗಿ ಕೆಸರು ಗದ್ದೆಯಾದ ಹಿನ್ನಲೆ. ವಿವಿಧ ಶಾಲಾಮಕ್ಕಳು ಶಾಲಾ ಸಮವಸ್ತ್ರಗಳು ಧರಿಸಿಕೊಂಡು ಕೆಸರು ಗದ್ದೆಯಲ್ಲಿ ಕವಾಯತು ಹಾಗೂ ದೇಶ ಭಕ್ತಿಗೀತೆಗಳೊಂದಿಗೆ ನೃತ್ಯ ಮಾಡುವದನ್ನು ವೇದಿಕೆಯ ಕುಳಿತ ಅಧಿಕಾರಿಗಳು ಆಲಿಸುತ್ತಿದ್ದರು. ಕೊಳೆಯಾದ ಬಟ್ಟೆಗಳನ್ನು ಶಾಲಾಮಕ್ಕಳು ಬಟ್ಟೆಗಳನ್ನು ಜಾಡಿಸಿಕೊಂಡು ಸರಿಪಡಿಸಿಕೊಳ್ಳುತ್ತಿರುವುದು ಸರ್ವೇಸಾಮಾನ್ಯವಾಗಿತ್ತು. 

ಕವಾಯತ : 

ಕೆಸರು ಗದ್ದೆಯಲ್ಲಿ ಪೋಲಿಸ್ ಇಲಾಖೆ,ಹೋಮ್‌ಗಾರ್ಡ, ಸ್ಕೌಟ್, ವಿವಿಧ ಶಾಲಾಮಕ್ಕಳು ಕವಾಯತ ನಡೆಸಿದರು. 

ಸನ್ಮಾನ ಗದ್ದಲ :  

ಪ್ರತಿ ವರ್ಷದಂತೆ ಪತ್ರಕರ್ತರ ಸಂಘಟನೆಗಳಿಗೆ ಸನ್ಮಾನಿಸುವ ಸಂದರ್ಭದಲ್ಲಿ ಒಂದೇ ಪತ್ರಕರ್ತರ ಸಂಘಟನೆಗೆ ಸನ್ಮಾನಿಸಿದನ್ನು ಖಂಡಿಸಿ. ಇನ್ನೂಳಿದ ಪತ್ರಕರ್ತರ ಸಂಘಟನೆಯ ಪತ್ರಕರ್ತರು ಅಧಿಕಾರಿಗಳಿಗೆ ಪ್ರಶ್ನೀಸಲು ಕೇಳಲು ಮುಂದಾದ ಸಮಯದಲ್ಲಿ ಅಧಿಕಾರಿಗಳಿಗೆ ಹಾಗೂ ಪತ್ರಕರ್ತರ ನಡುವೆ ಮಾತಿನ ಚಕ್ಕುಮಕ್ಕಿ ನಡೆಯುತ್ತಿದಂತೆ ಸಿಪಿಐ, ಮಲ್ಲಪ್ಪ ಮಡ್ಡಿ ಮಧ್ಯ ಪ್ರವೇಶಿಸಿ ತಿಳಿಪಡಿಸಿ. ಪತ್ರಕರ್ತರನ್ನು ಸಮಾಧಾನ ಪಡಿಸಿದ ಘಟನೆ ನಡೆಯಿತು. 

ಡಿಎಸ್ ಪಿ. ಶಾಂತವೀರ ಈ, ಸಿಪಿಐ.ಮಲ್ಲಪ್ಪ ಮಡ್ಡಿ, ಬಿಇಒ. ಅಶೋಕ ಬಸನ್ನವರ, ತಾ.ಪಂ ಇಒ ಸಂಜು ಜುನ್ನೂರ, ತಾಲೂಕಾ ಆರೋಗ್ಯ ಅಧಿಕಾರಿ ಗೈಬುಸಾಬ ಗಲಗಲಿ, ನಗರಸಭೆ ಪೌರಾಯುಕ್ತ ಜೋತಿ ಗೀರೀಶ ಸೇರಿದಂತೆ ತಾಲೂಕಾಡಳಿತ ಅಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ತಹಶೀಲ್ದಾರ ಸದಾಶಿವ ಮಕ್ಕೋಜಿ ಸ್ವಾಗತಿಸಿದರು. 


ಸುದ್ದಿ ಓದಿ