ಸ್ವಾತಂತ್ರ್ಯ ದಿನಾಚರಣೆ: ಪೂರ್ವಭಾವಿ ಸಭೆ
ಶಿಗ್ಗಾವಿ 10: ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ಬುಧವಾರ ಕರೆದಿದ್ದ ಅಗಷ್ಟ್ 15 ರ ಸ್ವಾತಂತ್ರ್ಯ ದಿನಾಚರಣೆ ಕುರಿತು ಪೂರ್ವಭಾವಿ ಸಭೆಯು ಗೊಂದಲದ ಗೂಡಾಯಿತು.
ಸಭೆ ಆರಂಭವಾಗುತ್ತಿದ್ದಂತೆ ಬೆಳಿಗ್ಗೆ 11 ಘಂಟೆಯ ಸಭೆಯು ಮದ್ಯಾಹ್ನ 1 ಘಂಟೆಯಾದರೂ ಆರಂಭವಾಗುತ್ತಿಲ್ಲ, ಅಧಿಕಾರಿಗಳು ಸಭೆಗೆ ಆಗಮಿಸಿಲ್ಲ ಎಂಬ ಗಂಭೀರ ವಿಷಯಗಳ ಚರ್ಚೆ ಆರಂಣಭಾಗಿ ನಂತರ ತಹಶೀಲ್ದಾರ ಕಾರ್ಯಾಲಯದ ಕೇಸ್ ವರ್ಕರ್ ಗೀರೀಶ ಅವರು ಹೋರಾಟಗಾರರು, ಮಾದ್ಯಮದವರು ಹಾಗೂ ವಿವಿಧ ಕನ್ನಡಪರ ಹೋರಾಟಗಾರರಿಗೆ ಸರಿಯಾಗಿ ನೋಟೀಸ್ ನೀಡದೇ ನಿಷ್ಕಾಳಜಿ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದವು.
ಅಲ್ಲದೇ ಅಂತಹ ನಿಷ್ಕಾಳಜಿಯುಳ್ಳ ಸಿಬ್ಬಂದಿಯನ್ನ ಈ ಸ್ಥಾನದಿಂದ ಬದಲಾಯಿಸಿ ಎಂದು ತಾಲೂಕಾ ಬ್ಲಾಕ್ ಕಾಂಗ್ರೇಸ್ ಅದ್ಯಕ್ಷ ಶಂಬುಲಿಂಗಪ್ಪ ಆಜೂರ ಹಾಗೂ ಬಿಜೆಪಿ ಅದ್ಯಕ್ಷ ಶಿವಾನಂದ ಮ್ಯಾಗೇರಿ ಹಾಗೂ ರೈತ ಹೊರಾಟಗಾರರಾದ ಮುತ್ತಪ್ಪ ಗುಡಗೇರಿ, ಶಂಕರಗೌಡ ಪಾಟೀಲ ಹಾಗೂ ಕನ್ನಡಪರ ಹೋರಾಟಗಾರ ಸಂತೋಷ ಚಾಕಲಬ್ಬಿ ತಹಶೀಲ್ದಾರರಿಗೆ ಒತ್ತಾಯಿಸಿದರು, ಜೊತೆಗೆ ಈ ಭಾರಿ ಕ್ಷೇತ್ರದ ಶಾಸಕರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿಯವರನ್ನು ಸ್ವಾತಂತ್ರ್ಯೋತ್ಸವಕ್ಕೆ ಅಹ್ವಾನಿಸಿ ಜೊತೆಗೆ ತಾಲೂಕಿನ ಎಲ್ಲ ಅಧಿಕಾರರಿಗಳ ಸಮ್ಮುಖದಲ್ಲಿ ಪೂರ್ವಭಾವಿಯನ್ನು ಇನ್ನೊಮ್ಮೆ ಆಯೋಜಿಸಿ ಎಂದು ಪಟ್ಟು ಹಿಡಿದರು.
ಹೋರಾಟಗಾರರ ಮನವಿಯನ್ನ ತಹಶೀಲ್ದಾರ ಸಂತೋಷ ಹಿರೇಮಠ ಅವರು ಶಾಂತವಾಗಿ ಆಲಿಸಿ ಮಾತನಾಡಿ ಸಿಬ್ಬಂದಿ ಗೀರೀಶ ಮೇಲೆ ಈ ಕುರಿತು ಕ್ರಮ ಜರುಗಿಸುವ ಬರವಸೆ ನೀಡಿ ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಸಭೆಯನ್ನ ಅಗಷ್ಟ್ 10 ರ ಗುರುವಾರ ಬೆಳಿಗ್ಗೆ 11 ಘಂಟೆಗೆ ಕರೆಯಲಾಗುವುದು ಸರ್ವರೂ ಭಾಗವಹಿಸಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪಕ್ಕೀರ್ಪ ಕುಂದೂರ, ನ್ಯಾಯವಾದಿ ಬಸವರಾಜ ಜೇಕನಕಟ್ಟಿ ಸೇರಿದಂತೆ ತಾಲೂಕಿನ ಹೋರಾಟಗಾರರು ಹಾಗೂ ಅಧಿಕಾರಿಗಳು ಇದ್ದರು.