ಸತ್ಪ್ರಜೆಯಾಗಲು ಜೀವನದಲ್ಲಿ ಮೌಲ್ಯ ಅಳವಡಿಸಿಕೊಳ್ಳಿ: ವಿದ್ಯಾರ್ಥಿಗಳಿಗೆ ಕಿವಿಮಾತು
ಮುಂಡಗೋಡ 08 : ತಾಲೂಕಿನ ಲೋಯೋಲ ಸಂಯುಕ್ತ ಪದವಿ ಪೂರ್ವ ಕಾಲೇಜ್ನಲ್ಲಿ ಮುಂಡಗೋಡ ತಾಲೂಕ ಕಾನೂನು ಸೇವಾ ಸಮಿತಿ, ವಕೀಲರ ಸಂಘ ಮತ್ತು ಪೊಲೀಸ್ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ವಿದ್ಯಾಥಿ-ವಿದ್ಯಾರ್ಥಿನಿ ಯರಿಗೆ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಮುಂಡಗೋಡ ಜೆ ಎಂಎಫ್ಸಿ ನ್ಯಾಯಾಧೀಶ ಧನವತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳು ಮುಂದಿನ ಜೀವನದಲ್ಲಿ ಉತ್ತಮ ಸತ್ಪಪ್ರಜೆಯಾಗಬೇಕಾದರೆ ಜೀವನ ಮೌಲ್ಯವನ್ನು ರೂಢಿಸಿಕೊಳ್ಳಬೇಕೆಂದು ತಿಳಿಸಿದರು.
ಕಾರ್ಯಕ್ರಮಕ್ಕೆ ಅಧ್ಯಕ್ಷರಾಗಿ ಲೋಯೋಲ ಸಂಯುಕ್ತ ಪದವಿ ಪೂರ್ವ ಕಾಲೇಜು ವಿದ್ಯಾಲಯದ ನಿರ್ದೆಶಕರಾದ; ಲಿಯೋ, ಪ್ಲೋರೇನ್ಸ್ ರವರು ವಿದ್ಯಾರ್ಥಿಗಳಿಗೆ ಕಾನೂನಿನ ಮಹತ್ವದ ಕುರಿತು ಹೇಳಿಕೊಟ್ಟರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮುಂಡಗೋಡ ಪೊಲೀಸ್ ಠಾಣೆಯ ನೀರಿಕ್ಷಕರಾದ ಸಿದ್ದಪ್ಪ, ಎಸ್.ಸಿಮಾನಿ ರವರು ಪೊಕ್ಸೋ ಕಾಯ್ದೆ, ಸೈಬರ್ ಕ್ರೈಂ ಕಾಯ್ದೆಯ ಬಗ್ಗೆ ವಿದ್ಯಾರ್ಥಿಗಳಿಗೆ ಬಿಡಿ ಬಿಡಿಯಾಗಿ ತಿಳಿಸಿದರು ವಕೀಲರಾದ ಆರ್ ಎಮ್. ಮಳಗಿಕರ ಹಾಗೂ ಆರ್. ಎಸ್. ಹಂಚಿನಮನಿ ಮಾನವ ಕಳ್ಳಸಾಗಾಣಿಕೆ ಹಾಗೂ ಮಕ್ಕಳ ಸ್ನೇಹಿ ಹಕ್ಕುಗಳ ಕುರಿತು ಮಾತನಾಡಿದರು.
ಕಾರ್ಯಕ್ರಮಕ್ಕೆ ಉಪನ್ಯಾಸಕರಾಗಿ ಆಗಮಿಸಿದ್ದ ಮುಂಡಗೋಡ ಪೊಲೀಸ್ ಠಾಣೆಯ ಎ.ಎಸ್.ಐ.,ಗೀತಾ, ಕಲಘಟಗಿ, ಕಳ್ಳಸಾಗಾಣಿಕೆ ಹಾಗೂ ವಾಣಿಜ್ಯ ಲೈಂಗಿಕ ಶೋಷಣೆಯ ಕುರಿತು ಉಪನ್ಯಾಸವನ್ನು ನೀಡಿದರು, ಇನ್ನೊರ್ವ ಉಪನ್ಯಾಸಕಾರಾಗಿ ಆಗಮಿಸಿದ್ದ ವಕೀಲ ಆರಿ್ಬ.ಹುಬ್ಬಳ್ಳಿ ಮಕ್ಕಳಿಗಾಗಿ ಇರುವ ಹಕ್ಕುಗಳ ಕುರಿತು ಉಪನ್ಯಾಸವನ್ನು ನೀಡಿದರು, ಮುಖ್ಯ ಅತಿಥಿಗಳಾಗಿ ಲೊಯೋಲಾ ಪ್ರಾಂಶುಪಾಲರಾದ ಮಾದೇವ ರಾಥೋಡ ರವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರೂಪಣೆ ;ವಕೀಲ ನಾಗರಾಜ ಬಾರ್ಕಿ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಮುಂಡಗೋಡ ತಾಲುಕ ಕಾನೂನು ಸೇವಾ ಸಮಿತಿಯ ಸಿಬ್ಬಂದಿಗಳಾದ ಶರತ ಪವಾರ ಹಾಗೂ ಹನುಮಂತ ಬಿ, ಮತ್ತು ಲೊಯೋಲ ಸಂಯುಕ್ತ ಪದವಿಪೂರ್ವ ಕಾಲೇಜು ವಿದ್ಯಾಲಯದ ಶಿಕ್ಷಕ ವರ್ಗ ಹಾಗೂ ವಿದ್ಯಾರ್ಥಿ ವರ್ಗ ಉಪಸ್ಥಿತರಿದ್ದರು.