ಬಡವರ ಫ್ರಿಡ್ಜ ಮಣ್ಣಿನ ಬಿಂದಿಗೆಗೆ ಹೆಚ್ಚಾದ ಬೇಡಿಕೆ
ಮಾಂಜರಿ 23: ಬಡವರ ಫ್ರಿಡ್ಜ ಎಂದೇ ಹೆಸರಾದ ಮಣ್ಣಿನ ಬಿಂದಿಗೆ (ಹೂಜಿ) ಗಳಿಗೆ ಬೇಸಿಗೆ ಬಂದರೆ ಸಾಕು ಅಪಾರ ಬೇಡಿಕೆ. ಸುಡುವ ಬಿಸಿಲಿನಲ್ಲಿ ಬಡ ಜನರು ಇಂತಹ ಮಡಿಕೆಗಳಿಗೆ ಮೊರೆ ಹೋಗುವುದು ಸರ್ವೇ ಸಾನಮಾನ್ಯ. ಕಾರಣ ತಣ್ಣನೆಯ ನೀರು ಅಮೃತಕ್ಕೆ ಸಮಾನ, ಬೇಸಿಗೆಯ ಕಾಲದಲ್ಲಿ ಕಡಿಮೆ ಖರ್ಚಿನಲ್ಲಿ ಸಿಗುವ ಎಕೈಕ ಫ್ರೀಡ್ಜ ಇದು.
ಇಂದು ಗಡಿಗ್ರಾಮಗಳಲ್ಲಿ ಬಿಸಿಲಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸರಾಸರಿ 30 ರಿಂದ 38 ಡಿಗ್ರಿ ಸೆಲ್ಸಿಯಸ್ವರೆಗೆ ತಾಪಮಾನ ಬೀಳುತ್ತಿದ್ದು, ಇದರಿಂದಾಗಿ ಸಾರ್ವಜನಿಕರು ಮಣ್ಣಿನ ಬಿಂದಿಗೆಗಳತ್ತ ಹೆಚ್ಚಿನ ಒಲವು ತೋರುತ್ತಿದ್ದಾರೆ. ಬಿಸಿಲಿನ ತಾಪಮಾನ ಹೆಚ್ಚುತ್ತಿರುವುದರಿಂದ ಖರೀದಿಸಲು ಮುಂದಾಗುತ್ತಿದ್ದಾರೆ.
ಬಿಸಿಲಿನ ತಾಪದಿಂದ ಬಸವಳಿಯುತ್ತಿರುವ ಜನರು ತನ್ನನೆಯ ನೀರು ಕುಡಿಯಲು ಬಡವರ ಫ್ರೀಜ್ ಮಡಿಕೆಗಳ ಮ್ಹೋರೆ ಹೋಗುತ್ತಿದ್ದಾರೆ, ಮನೆಯಲ್ಲಿ ಫ್ರೀಡ್ಜ ಇದ್ದರೂ ಅದರಲ್ಲಿನ ತನ್ನಿನ ನೀರು ಕುಡಿದರೆ ಆಕ್ಷಣಕ್ಕೆ ಅರಾಮದಾಯಕ ವೆನಿಸಬಹುದು ವಾಸ್ತವದಲ್ಲಿ ಹೀಟ್ ಜಾಸ್ತಿ ಮಾಡುತ್ತದೆ, ನೇಗಡಿ ಮತ್ತು ಕೆಮ್ಮು ಭಾದಿಸುತ್ತದೆ ಆಶದರೆ ಗಡಿಯಲ್ಲಿನ ತನ್ನಿನ ನೀರು ಕುಡಿದರೆ ಸಮಾದಾನ ಹಾಗೂ ಅರೋಗ್ಯಕ್ಕೆ ಹಿತಕಾರಿವಾಗಿರುತ್ತದೆ ಎಂದು ಡಾ. ಕುಮಾರ ಕುಂಬಾರ ಅವರ ಅಭಿಪ್ರಾಯವಾಗಿದೆ
ಸ್ಥಳಿಯರು ನಿರ್ಮಿಸಿದ ಬಿಂದಿಗೆಗಳು ಸರಾಸರಿ 150 ರಿಂದ 200 ರೂ. ಗಳವರೆಗೆ ಒಂದು ಮಾರಾಟವಾಗುತ್ತಿದ್ದರೆ, ರಾಜಸ್ಥಾನಿ ಬಿಂದಿಗೆಗಳು 8 ಲೀಟರ ಸಾರ್ಮಥ್ಯದ ಬಿಂದಿಗೆ 300 ನಿಂದ 400 ರೂ, 10 ಲೀಟರ ಸಾರ್ಮಥ್ಯದ ಬಿಂದಿಗೆ 350 ರಿಂದ 400 ರೂ, 14 ಲೀಟರ ಸಾರ್ಮಥ್ಯದ ಬಿಂದಿಗೆ 400 ರಿಂದ 450 ರೂ, 18 ಲೀಟರ ಸಾರ್ಮಥ್ಯದ ಬಿಂದಿಗೆ 500 ರೂ ಒಂದು ಮಾರಾಟ ವಾಗುತ್ತಿವೆ.
ಕೆಲವರು ಗ್ರಾಮೀಣ ಭಾಗದಲ್ಲಿ ಕಡಿಮೆ ಬೆಲೆಯಲ್ಲಿ ಸಿಗುತ್ತಿರುವ ಮಡಿಕೆಗಳನ್ನು ಖರೀದಿಸುತ್ತಿದ್ದಾರೆ. ಇನ್ನೂ ಕೆಲವರು ಪಟ್ಟಣ ಪ್ರದೇಶಗಳಿಗೆ ತೆರಳಿ ಬಗೆಬಗೆಯ ವಿನ್ಯಾಸಗಳಲ್ಲಿ ತಯಾರಿಸಿದ ಮಡಿಕೆಗಳನ್ನು ಮನೆಗೆ ಒಯ್ಯುತ್ತಿದ್ದಾರೆ. ಬಿಸಿಲಿನ ಬೇಗೆಯಿಂದ ಜನರು ತಮ್ಮ ಬಾಯಾರಿಕೆಯನ್ನು ನೀಗಿಸಲು ಈ ಮಣ್ಣಿನಿಂದ ತಯಾರಾದ ಮಡಿಕೆಗಳನ್ನೇ ಖರೀದಿಸುತ್ತಿದ್ದಾರೆ. ಇಂದಿನ ದಿನಗಳಲ್ಲಿ ಜನ ಎಲೆಕ್ಟ್ರಾನಿಕ ವಸ್ತುಗಳತ್ತ ಮೊರೆ ಹೋಗುತ್ತಿದ್ದಾರೆ. ಆದರೂ ಸಹ ಎಷ್ಟೇ ಆಧುನಿಕ ತಂತ್ರಜ್ಞಾನ ಮುಂದುವರೆದರೂ ಬೇಸೆಗೆ ಕಾಲದಲ್ಲಿ ಮಣ್ಣಿನ ಗಡಿಗೆಗಳನ್ನು ಇವೇ ನಮ್ಮಂಥ ಬಡವರ ಫ್ರಿಡ್ಜ ಎಂದು ಬಡವರು, ಮಧ್ಯಮ ವರ್ಗದವರು, ಕೂಲಿ-ಕಾರ್ಮಿಕರು ಭಾವಿಸುತ್ತಿದ್ದಾರೆ.
ಹತ್ತು ವರ್ಷಗಳ ಹಿಂದೆ ತಯಾರಿಸುತ್ತಿರುವ ಮಡಿಕೆಗಳನ್ನು ಈಗ ಹೊಸ ವಿನ್ಯಾಸಗಳೊಂದಿಗೆ ಹೊಸ ರೂಪ ಕೊಟ್ಟು ತಯಾರಿಸಲಾಗುತ್ತಿದೆ. ಈ ಸಾಲಿನಲ್ಲಿ ಮಾರ್ಚ ಏರಡನೇ ವಾರದಲ್ಲೆ ಹೆಚ್ಚಿ ಪ್ರಮಾಣದಲ್ಲಿ ಬಿಸಿಲು ಬೀಳುತ್ತಿರುವುದರಿಂದ ಮಣ್ಣಿನ ಗಡಿಗೆಗಳಿಗೆ ಬೇಡಿಕೆ ಹೆಚ್ಚಾಗಿದೆ.
ಈ ವರ್ಷ ಬಿಸಿಲಿನ ತಾಪ ಬೆಳಿಗ್ಗೆ 9 ರ ಹೊತ್ತಿಗೆ ನೆತ್ತಿ ಸುಡಲಾರಂಭಿಸಿ ಸಾಯಂಕಾಲ 6 ಗಂಟೆಯವರೆಗೆ ಇರುತ್ತದೆ. ಗ್ರಾಮೀಣ ಪ್ರದೇಶಗಳ ಜನರಂತೂ ತಮ್ಮ ದಿನನಿತ್ಯದ ಹೊಲಗದ್ದೆಗಳ ಕೆಲಸಕ್ಕೆ ಹೋಗುವವರು ಬಿಸಿಲಿನ ಬೇಗೆಯಲ್ಲಿ ಬಳಲುತ್ತಿದ್ದಾರೆ. ಬೇಸಿಗೆ ಕಾಲದಲ್ಲಿ ಕಡಿಮೆ ಖರ್ಚಿಗೆ ಸಿಗುವ ಎಕೈಕ ಫ್ರಿಡ್ಜ ಮಡಿಕೆ. ಕಾರಣ ಇದರಲ್ಲಿನ ನೀರು ಅಮೃತ ಸಮಾನವಾಗಿರುತ್ತದೆ ಎಂಬುದು ರೈತಪಿ ವರ್ಗದ ಅಭಿಪ್ರಾಯವಾಗಿದೆ.