ಪೌಷ್ಠಿಕ ಕೈತೋಟದ ಪ್ರಾತ್ಯಕ್ಷಿಕೆ ತಾಕಿಗೆ ಡಾ. ರಮೇಶ ಬಾಬು ಭೇಟಿ
ರಾಣೇಬೆನ್ನೂರು 14: ಪ್ರತಿ ಮನೆಯಲ್ಲಿ ಪೌಷ್ಠಿಕ ಕೈತೋಟದ ನಿರ್ಮಾಣದಿಂದ ಅಪೌಷ್ಟಿಕತೆಯನ್ನು ತಡೆಯುವುದರ ಜೊತೆಗೆ ದೇಹದಲ್ಲಿ ರೂೀಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಮಕ್ಕಳು ಮತ್ತು ಗರ್ಭಿಣಿ ಮಹಿಳೆಯರು ಕೊರೋನಾ ರೋಗಕ್ಕೆ ತುತ್ತಾಗುವುದನ್ನು ತಡೆಗಟ್ಟುವಲ್ಲಿ ಸಹಾಯವಾಗುತ್ತದೆ ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ನೂೀಡಲ್ ಅಧಿಕಾರಿ ಡಾ|| ಗೂೀಪಾಲ ಹೇಳಿದರು.
ಅವರು ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರವು ಹಾನಗಲ್ ತಾಲೂಕಿನ ಶಿಗಿಹಳ್ಳಿ ಗ್ರಾಮದಲ್ಲಿ ಆಯೂಜಿಸಿದ್ದ ಪೌಷ್ಠಿಕ ಕೈತೋಟದ ಪ್ರಾತ್ಯಕ್ಷಿಕೆ ತಾಕಿಗೆ ಭೇಟಿ ನೀಡಿ ಮಾತನಾಡಿದರು ರೈತ ಮಹಿಳೆಯರಿಗೆ ತರಕಾರಿ ಮತ್ತು ಹಣ್ಣಿನ ಬೆಳೆಗಳ ಬೇಸಾಯ ಹೊಸದೇನಲ್ಲ, ಆದರೆ ಇತ್ತೀಚಿನ ದಿನಗಳಲ್ಲಿ ಕೃಷಿಯು ಕೇವಲ ವಾಣಿಜ್ಯ ಬೆಳೆಗಳು ಮತ್ತು ಹೆಚ್ಚಿನ ಆದಾಯ ನೀಡುವ ಬೆಳೆಗಳಿಗೆ ಮಾತ್ರ ಸೀಮಿತವಾಗಿದೆ. ಪ್ರಸ್ತುತ ತರಕಾರಿ ಮತ್ತು ಹಣ್ಣುಗಳ ಬೇಸಾಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ರಾಸಾಯನಿಕ ಔಷಧಿ ಮತ್ತು ಗೊಬ್ಬರಗಳನ್ನು ಬಳಸುತ್ತಿರುವುದರಿಂದ ಇವುಗಳ ಬಳಕೆ ಆರೋಗ್ಯಕ್ಕೆ ಹಾನಿಕರವಾಗಿದೆ. ಎಂದ ಅವರು ಮನೆಯ ಸುತ್ತಮುತ್ತಲಿನ ಖಾಲಿ ಜಾಗದಲ್ಲಿ, ಆರೋಗ್ಯವನ್ನು ರಕ್ಷಿಸಿ ಪೋಷಿಸುವಂತಹ ಬೆಳೆಗಳನ್ನು ಬೆಳೆಯಲು ಪೌಷ್ಠಿಕ ಕೈತೋಟ ಮಾಡಿಕೊಳ್ಳುವುದು ಅಗತ್ಯವಿದೆ ಎಂದರು.
ಧಾರವಾಡ ಕೃಷಿ ವಿಶ್ವವಿದ್ಯಾಲಯ, ವಿಸ್ತರಣಾ ನಿರ್ದೇಶಕ ಡಾ. ರಮೇಶ ಬಾಬು, ಹಾವೇರಿ ಕೃಷಿ ವಿಜ್ಞಾನ ಕೇಂದ್ರದ, ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ. ಅಶೋಕ ಪಿ ಅವರು ಮಾತನಾಡಿ, ಟ್ರೈಕೊಡರ್ಮಾ ಎಂಬ ಜೈವಿಕ ಶಿಲೀಂಧ್ರನಾಶಕವನ್ನು ಕೊಟ್ಟಿಗೆ ಗೊಬ್ಬರದ ಜೊತೆ ಬೆರೆಸಿ ಮಣ್ಣಿಗೆ ಬಿತ್ತನೆ, ನಾಟಿ ಸಮಯದಲ್ಲಿ ಸೇರಿಸಬೇಕು. ಬೇವಿನ ಹಿಂಡಿಯನ್ನು ಬಳಕೆ ಕೂಡ ಸೂಕ್ತ ಹಾಗೆಯೇ ಬೇವಿನ ಕಷಾಯ ತಯಾರಿಸಿ ಅಥವಾ ಮಾರುಕಟ್ಟೆಯಲ್ಲಿ ಸಿಗುವ ಬೇವಿನ ಎಣ್ಣೆಯನ್ನು ನೀರಿನೊಂದಿಗೆ ಬೆರೆಸಿ ಸಿಂಪಡಿಸುವುದರಿಂದ ಸಾವಯವ ಪದ್ಧತಿಯಲ್ಲಿ ಕೀಟ ಮತ್ತು ರೋಗಗಳ ನಿಯಂತ್ರಣ ತರಲು ಸಾಧ್ಯವಿದೆ ಎಂದರು.
ಈ ಸಂಧರ್ಭದಲ್ಲಿ ಕೇಂದ್ರದ ಡಾ. ರಾಜಕುಮಾರ ಜಿ ಆರ್, ವಿಜ್ಞಾನಿ ಮತ್ತು ಡಾ. ಶಾಂತವೀರಯ್ಯ (ಹವಾಮಾನತ ತಜ್ಞರು) ಸೇರಿದಂತೆ ಶಿಗಿಹಳ್ಳಿ ಗ್ರಾಮದ ರೈತ ಮಹಿಳೆಯರು ಮತ್ತು ರೈತರು ಗಣ್ಯರು ಉಪಸ್ಥಿತರಿದ್ದರು.