ಸಿಂಧಗಿ

ಜ್ಞಾನವನ್ನು ಹೆಚ್ಚಿಸಿಕೊಂಡು ದೇಶ ಸೇವೆಗೆ ಮುಂದಾಗಿ: ಪಾಟೀಲ

ಜ್ಞಾನವನ್ನು ಹೆಚ್ಚಿಸಿಕೊಂಡು ದೇಶ ಸೇವೆಗೆ ಮುಂದಾಗಿ: ಪಾಟೀಲ

ಸಿಂದಗಿ : ಇಂದಿನ ಸಮಾಜದಲ್ಲಿರುವ ಹಲವಾರು ಸಮಸ್ಯೆಗಳನ್ನು ನಿವಾರಿಸಲು ನಾವು ನಮ್ಮ ಜ್ಞಾನವನ್ನು ಹೆಚ್ಚಿಸಿಕೊಂಡು ದೇಶ ಸೇವೆಗೆ ಮುಂದಾಗಬೇಕಿದೆ ಎಂದು ಪ್ರಾಚಾರ್ಯ ವಿಮಲಕಾಂತ ಪಾಟೀಲ ಹೇಳಿದರು. 

ಪಟ್ಟಣದ ಆರ್.ಡಿ.ಪಾಟೀಲ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಜರುಗಿದ ಪವಿವ ಸಂಸ್ಥೆಯ ವಿವಿಧ ಅಂಗಸಂಸ್ಥೆಗಳ ಸಹಯೋಗದಲ್ಲಿ 77ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಸಮಾರಂಭದಲ್ಲಿ ಧ್ವಜಾರೋಹಣ ನೇರವೇರಿಸಿ ಅವರು ಮಾತನಾಡಿದರು. 

ವಿದ್ಯಾರ್ಥಿ ಜೀವನದಲ್ಲಿ ಚೆನ್ನಾಗಿ ಓದಿಕೊಳ್ಳುವುದರ ಜೊತೆಗೆ ಪ್ರಪಂಚ ಜ್ಞಾನದ ಜೊತೆಗೆ ನಾಯಕತ್ವದ ಗುಣಗಳನ್ನು ಬೆಳೆಸಿಕೊಂಡು ನಮ್ಮ ಮಹಾನ ಭಾರತದೇಶದ ರಕ್ಷಣೆ ಮತ್ತು ಅಭಿವೃದ್ಧಿಗೆ ಕೊಡುಗೆಯನ್ನು ನೀಡಬೇಕು. ಭಾರತವು ಜಗತ್ತಿನಲ್ಲಿ ಅತಿದೊಡ್ಡ ಜಾತ್ಯಾತೀತ ಮತ್ತು ಪ್ರಜಾಪ್ರಭುತ್ವ ಹೊಂದಿದ ದೇಶವಾಗಿದೆ. ಜಗತ್ತಿನಲ್ಲಿ ಎರಡನೇಯ ದೊಡ್ಡ ಸೇನಾ ಪಡೆಯನ್ನು ಹೊಂದಿರುವ ದೇಶವಾಗಿದೆ. ಮೊದಲ ಪ್ರಯತ್ನದಲ್ಲಿಯೇ ಮಂಗಳಯಾನ ಯಶಸ್ವಿಯಾಗಿದೆ. ಸ್ವತಂತ್ರ ಭಾರತದಲ್ಲಿ ಇಂದಿಗೂ ಸಹ ನಾನಾ ಕಡೆಗಳಲ್ಲಿ ಅಸಮಾನತೆ, ದೌರ್ಜನ್ಯ, ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳು, ಸಕರ್ಾರದ ಮೇಲಿನ ಭ್ರಷ್ಟಾಚಾರ, ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳು ಎದುರಿಸುತ್ತಿರುವ ಆಪಾದನೆ, ಪರಸ್ಪರ ಮಾತಿನ ಕೆಸರಾಟಗಳ ಬೆಳವಣಿಗೆಯನ್ನು ನೋಡಿದರೆ ವಿಷಾದನೀಯವೆನಿಸುತ್ತದೆ ಎಂದರು. 

ಪ್ರಾಚಾರ್ಯರಾದ ಡಿ.ಎಂ.ಪಾಟೀಲ, ಬಿ.ಜಿ.ಅವಟಿ, ಜೆ.ಸಿ.ನಂದಿಕೋಲ, ದಿವಾಕರ ಮಠ, ಶರಣು ಜೋಗೂರ, ಬಿ.ಎಂ.ಸಿಂಗನಳ್ಳಿ, ಎನ್.ಸಿ.ಸಿ. ಅಧಿಕಾರಿ ರವಿ ಲಮಾಣಿ, ದೈಹಿಕ ಉಪನ್ಯಾಸಕರಾದ ರವಿ ಗೋಲಾ, ಗವಿಸಿದ್ದಪ್ಪ ಆನೆಗುಂದಿ ಸೇರಿದಂತೆ ವಿವಿಧ ಅಂಗ ಸಂಸ್ಥೆಗಳ ಬೋಧಕ ಬೋಧಕೇತರ ಸಿಬ್ಬಂದಿ, ಎನ್.ಎಸ್.ಎಸ್., ಎನ್.ಸಿ.ಸಿ. ವಿದ್ಯಾಥರ್ಿಗಳು ಇನ್ನಿತರರು ಇದ್ದರು. 


ಸುದ್ದಿ ಓದಿ