ಬೈಲಹೊಂಗಲ

ಇಂಚಲ: ಅಯ್ಯಪ್ಪ ಸ್ವಾಮಿ ಮಹಾ ಪೂಜೆ

ಇಂಚಲ: ಅಯ್ಯಪ್ಪ ಸ್ವಾಮಿ ಮಹಾ ಪೂಜೆ

ಲೋಕದರ್ಶನ ವರದಿ

ಬೈಲಹೊಂಗಲ 29: ಸಮೀಪದ ಸುಕ್ಷೇತ್ರ ಇಂಚಲ ಗ್ರಾಮದಲ್ಲಿ ಡಾ.ಶಿವಾನಂದ ಭಾರತಿ ಸ್ವಾಮೀಜಿ  ದಿವ್ಯ ಸಾನಿಧ್ಯದಲ್ಲಿ ಅಯ್ಯಪ್ಪಸ್ವಾಮಿಯ 22ನೇ ಮಹಾ ಪೂಜಾ ಸಮಾರಂಭ ಹಾಗೂ ಶ್ರೀ ಬಂಕನಾಥೇಶ್ವರ ಮಹಾಭಿಷೇಕ ಅನ್ನಸಂತರ್ಪಣೆ ಕಾರ್ಯಕ್ರಮ ಜರುಗಿತು. 

     ಪೂಜಾ ಸಮಾರಂಭದಲ್ಲಿ  ಪುಷ್ಪಗಳಿಂದ ಹಾಗೂ ದೀಪಗಳಿಂದ ದೇವಸ್ಥಾನ ಅಲಂಕಾರ ಗೊಂಡಿತ್ತು. ರಾಜು, ತಮ್ಮಣ್ಣ ಕಡಕೋಳ ಗುರುಸ್ವಾಮಿಗಳಿಂದ ಎಣ್ಣೆ ಸೇವೆ ಹಾಗೂ ಕೆಂಡಸೇವೆ ನೆರವೇರಿತು. ಅಯ್ಯಪ್ಪಸ್ವಾಮಿ ಮಾಲಾಧಾರಿಗಳಿಂದ ಕುದಿಯುವ ಎಣ್ಣೆಯಲ್ಲಿ ಬಜ್ಜಿ ತೆಗೆಯುವುದು ಹಾಗೂ ಕೆಂಡದಲ್ಲಿ ನಡೆಯುವ ಕಾರ್ಯಕ್ರಮ ನಡೆಯಿತು. 

   ಅಯ್ಯಪ್ಪ ಸ್ವಾಮಿ ತೊಟ್ಟಿಲೋತ್ಸವ ಹಾಗೂ ಮದ್ದು ಸುಡುವ ಕಾರ್ಯಕ್ರಮ. ಸಂಗೀತ ಕಾರ್ಯಕ್ರಮ ನಡೆಯಿತು.

   ಗುರುಸ್ವಾಮಿಗಳಾದ ಸುರೇಶ ಗಾಣಗಿ,  ಮಹಾಂತೇಶ ಬಾಗೇವಾಡಿ, ರಾಜು ಹಲಕಿ, ಬಸು ಲಕ್ಕನ್ನವರ ಸೇರಿದಂತೆ ನೂರಾರು ಅಯ್ಯಪ್ಪ ಮಾಲಾಧಾರಿಗಳು ಇದ್ದರು 

ಸುದ್ದಿ ಓದಿ