ತಾಳಿಕೋಟಿ

ನೂತನ ಮಠದ ಉದ್ಘಾಟನೆ ಮತ್ತು ಪೂರ್ವಭಾವಿ ಸಭೆ

ನೂತನ ಮಠದ ಉದ್ಘಾಟನೆ ಮತ್ತು ಪೂರ್ವಭಾವಿ ಸಭೆ

ತಾಳಿಕೋಟಿ 04: ತಾಲೂಕಿನ ನಾವದಗಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಬ್ರಹ್ಮಠದ ಉದ್ಘಾಟನೆ ಹಾಗೂ ಪೂಜ್ಯಶ್ರೀ ರಾಜೇಂದ್ರ ಒಡೆಯರ್ ಇವರ ಗುರು ಪಟ್ಟಾಧಿಕಾರ ಮಹೋತ್ಸವ ಪೂರ್ವಭಾವಿ ಸಭೆ ನವಂಬರ 10 ರಂದು ನಾವದಗಿಯಲ್ಲಿ ನಡೆಯಲಿದೆ.  ಅಂದು ಮುಂಜಾನೆ 10 ಗಂಟೆಗೆ ನಾವದಗಿ ಗ್ರಾಮದಲ್ಲಿ ನಡೆಯಲಿರುವ ನೂತನ ಮಠದ ಉದ್ಘಾಟನೆ ಹಾಗೂ ಗುರು ಮಹೋತ್ಸವ  ಪಟ್ಟಾಧಿಕಾರದ ಪೂರ್ವಭಾವಿ ಸಭೆಯಲ್ಲಿ ತಾಳಿಕೋಟಿ ಹಾಗೂ ಹುಣಸಗಿ ಭಾಗದ ಸುಮಾರು 25 ಕ್ಕಿಂತಲೂ ಹೆಚ್ಚು ಹರ- ಗುರು- ಚರ-ಮೂರ್ತಿಗಳು ಹಾಗೂ ದೇ.ಹಿಪ್ಪರಗಿ  ಮತಕ್ಷೇತ್ರದ ಶಾಸಕ ರಾಜುಗೌಡ ಪಾಟೀಲ ಕು. ಸಾಲವಾಡಗಿ ಹಲವಾರು ಜನ ಪ್ರತಿನಿಧಿಗಳು ವಿವಿಧ ಸಮಾಜಗಳ ಮುಖ್ಯಸ್ಥರು ನಾವದಗಿ ಗ್ರಾಮದ ಸುತ್ತಮುತ್ತಲಿನ ಗ್ರಾಮಗಳ ಗಣ್ಯರು ಭಾಗವಹಿಸುವರು ಸದರಿ ಕಾರ್ಯಕ್ರಮಗಳಲ್ಲಿ ನಿಗದಿತ ಸಮಯಕ್ಕೆ ಹಾಜರಿರಬೇಕೆಂದು ನಾವದಗಿ ಮಠದ ಪೂಜ್ಯಶ್ರೀ ರಾಜೇಂದ್ರ ಒಡೆಯರ್ ಮಹಾಸ್ವಾಮಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ 

ಸುದ್ದಿ ಓದಿ