ಶಿಗ್ಗಾವ್

ಸೆಂಟ್ರಲ್ ಕೋ-ಆಪರೇಟಿವ್ ಬ್ಯಾಂಕ್ನ ಶಿಗ್ಗಾವಿ ಶಾಖೆಯ ನೂತನ ಕಟ್ಟಡ ಉದ್ಘಾಟನೆ

ಸೆಂಟ್ರಲ್ ಕೋ-ಆಪರೇಟಿವ್ ಬ್ಯಾಂಕ್ನ ಶಿಗ್ಗಾವಿ ಶಾಖೆಯ ನೂತನ ಕಟ್ಟಡ ಉದ್ಘಾಟನೆ

ಲೋಕದರ್ಶನ ವರದಿ

ಶಿಗ್ಗಾವಿ 13: ರೈತರ ದುಡುಮೆಗೆ ಬೆಲೆ ಸಿಗಬೇಕು ಆ ನಿಟ್ಡಿನಲ್ಲಿ ಕೆಸಿಸಿ ಬ್ಯಾಂಕ್ ಮಹತ್ವ ಬಹಳಷ್ಟಿದೆ, ರೈತರು ಆಥರ್ಿಕವಾಗಿ ಪ್ರಭಲ ಆದರೆ ಸಾಮಾಜಿಕವಾಗಿ ಬೆಳವಣಿಗೆ ಸಾಧ್ಯವಿದೆ, ರೈತರ ದುಡಿಮೆಗೆ ಬೆಲೆ ಸಿಗುವಂತೆ ಸಹಕಾರಿ ಬ್ಯಾಂಕ್ ಕಾರ್ಯ ನಿರ್ವಹಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಪಟ್ಟಣದ ಎಪಿಎಂಸಿ ಯಾರ್ಡನಲ್ಲಿ ಧಾರವಾಡ ಕರ್ನಾಟಕ ಸೆಂಟ್ರಲ್ ಕೋ-ಆಪರೇಟಿವ್ ಬ್ಯಾಂಕ್ನ ಶಿಗ್ಗಾವಿ ಶಾಖೆಯ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡದ ಅವರು, ಕೆಸಿಸಿ ಬ್ಯಾಂಕ್ಗೆ ವಿಶೇಷ ಅನುಧಾನ ನೀಡಿ ಉಳಿಸಿದವರು ಯಡಿಯೂರಪ್ಪನವರು, ಒಂದು ಸಂಸ್ಥೆ ಉಳಿಯಲು ಹಲವಾರು ಜನರ ಶ್ರಮ, ಪರಿಶ್ರಮ ಇರುತ್ತದೆ ಅದೇ ಆ ಸಂಸ್ಥೆಗಳು ಅಥವಾ ಬ್ಯಾಂಕುಗಳ ಬೆಳವಣಿಗೆಗೆ ಕಾರಣವಾಗಿರುತ್ತದೆ, ಅನಿರೀಕ್ಷಿತ ಬದುಕಿನಲ್ಲಿ ಸ್ಥಿರತೆ ಕೊಡಬೇಕಾಗುತ್ತದೆ, ತಂತ್ರಜ್ಞಾನ ಹೆಚ್ಚಾಗಿದ್ದು ಆಹಾರ ಉತ್ಪಾದನೆ ಹೆಚ್ಚಾಗಿ ರೈತರು ಸ್ವಾವಲಂಬನೆಯಾಗಬೇಕಿದೆ, ನಾವು ಸ್ವಾವಲಂಬನೆಯನ್ನು ಹೆಚ್ಚು ರೈತರಲ್ಲಿ ಮಾತ್ರ ನಾವು ಕಾಣುತ್ತೇವೆ, ಕೃಷಿ ಅಭಿವೃದ್ದಿ ಆಗಿದೆ ಆದರೆ ರೈತ ಅಭಿವೃದ್ದಿ ಆಗಿಲ್ಲ, ಸ್ಕೇಲ್ ಆಫ್ ಪೈನಾನ್ಸ್ ಹೆಚ್ಚಾಗುವ ದೃಷ್ಟಿಯಿಂದ ಬಜೆಟ್ ನಲ್ಲಿ ಹೆಚ್ಚು ಅನುಧಾನ ಇಟ್ಟಿದ್ದೆ, ಮೂರು ಸಾವಿರದ ಆರನೂರು ಕೋಟಿ ಆವರ್ಥ ನಿಧಿಯನ್ನು ನಾನು ಸಿಎಂ ಇದ್ದಾಗ ಕೊಟ್ಟಿದ್ದೇನೆ, ಭೂಸಿರಿ ಯೋಜನೆ ಈಗ ರದ್ದಾಗಿದೆ, ಬೆಳೆವಿಮೆ ಇದೆ ಆದರೆ ರೈತವಿಮೆ ಇಲ್ಲ, ಜೀವನ ಜ್ಯೋತಿ ಯೋಜನೆ ಮಾಡಿ ಬಜೆಟ್ನಲ್ಲಿ ಅನುಧಾನ ಇಟ್ಟಿದ್ದೆ, ರೈತರ ಬದುಕು ತಿಳಿದವರು ಸರಕಾರಗಳಲ್ಲಿ ಇರಬೇಕು, ಗ್ರಾಮೀಣ ಬದುಕನ್ನ ಗಟ್ಟಿ ಮಾಡುವ ಯೋಜನೆಗಳನ್ನ ನಮ್ಮ ಕೇಂದ್ರ ಸರಕಾರ ಮಾಡಿದೆ, ಮುಂದಿನ ದಿನಗಳಲ್ಲಿ ಹಾವೇರಿಯಲ್ಲಿ ಮೆಗಾಡೈರಿ ಮೂಲಕ ಕ್ಷೀರಕ್ರಾಂತಿಯಾಗಲಿದೆ, ಸಹಕಾರಿ ರಂಗ ಮಹತ್ವದ ಒಂದು ರಂಗವಾಗಿದೆ ಎಂದರು.

ನಮ್ಮ ಸರಕಾರ ಶೂನ್ಯ ಬಡ್ಡಿದರಲ್ಲಿ ರೈತರಿಗೆ ಐದು ಲಕ್ಷದವರೆಗೂ ಸಾಲ ನೀಡಿದ್ದು ನಮ್ಮ ಸರಕಾರದ ಅವಧಿಯಲ್ಲಿ ಆವರ್ತನಿಧಿ ಒಂದು ಸಾವಿರ ಕೋಟಿ ಇತ್ತು.  ಆದರೆ, ನಾನು ಬಜೆಟ್ ನಲ್ಲಿ ಮೂರು ಸಾವಿರಕ್ಕೆ ಕೋಟಿಗೆ ಏರಿಕೆ ಮಾಡಿದ್ದೇನೆ, ಕಳೆದ ವರ್ಷದ ಬಜೆಟನಲ್ಲಿ ರೈತರಿಗೆ ಬೀಜ ಗೊಬ್ಬರ ಕೊಳ್ಳಲು ಹದಿನೈದು ಸಾವಿರ ಹಣವನ್ನು ಭೂಸಿರಿ ಯೋಜನೆ ನೀಡಿದ್ದೇವು. ಜೀವನ ಜ್ಯೋತಿ ಯೋಜನೆಗೆ  ನಮ್ಮ ಸರಕಾರ ಹಣವನ್ನು ಇಟ್ಟಿತ್ತು. ಆದರೆ ಈಗೀನ ಸರಕಾರ ಅದನ್ನು ರದ್ದುಮಾಡಿದೆ. ಆ ಯೋಜನೆಯಿಂದ ರೈತರಿಗೆ ವಿಮೆ ನೀಡುವ ಉದ್ದೇಶದಿಂದ ಮಾಡಿರುವದನ್ನು ಈ ಸರಕಾರ ಕಿತ್ತುಕೊಂಡಿದೆ, ಕೆಸಿಸಿ ಬ್ಯಾಂಕ್ ರೈತರ ಪರವಾಗಿ ಕೆಲಸ ಮಾಡಬೇಕು, ಅಲ್ಲದೇ ಹಾವೇರಿಗೆ ಮೇಗಾ ಡೈರಿ ಸ್ಥಾಪಿಸಿ 100 ಕೋಟಿಗೂ ಹೆಚ್ಚು ಅನುದಾನ ನೀಡಿ ರೈತರಿಗೆ ಕ್ಷೀರ ಕ್ರಾಂತಿ ಮಾಡಿದ ಕೀರ್ತಿ  ನಮ್ಮ ಸರಕಾರಕ್ಕೆ ಸಲ್ಲುತ್ತದೆ ಎಂದರು.

ಧಾರವಾಡ ಕೆಸಿಸಿ ಬ್ಯಾಂಕ್ ಅದ್ಯಕ್ಷ ಮಲ್ಲಿಕಾರ್ಜುನ ಹೊರಕೇರಿ, ಕೆಸಿಸಿ ಬ್ಯಾಂಕ್ ನಿರ್ದೇಶಕ ಜಿ ಪಿ ಪಾಟೀಲ ಹಾಗೂ ಗಂಗಣ್ಣ ಸಾತಣ್ಣವರ ಮಾತನಾಡಿದರು.

ಕಾರ್ಯಕ್ರಮದ ದಿವ್ಯ ಸಾನಿದ್ಯವನ್ನು ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು ವಹಿಸಿದ್ದರು.

ಕೆಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್ ವಾಯ್ ಪಾಟೀಲ, ನಿದರ್ೇಶಕರಾದ ಲಿಂಗರಾಜ ಚಪ್ಪರದಳ್ಳಿ, ಡಾ. ಮುತ್ತಣ್ಣ ಯಲಿಗಾರ, ಎಂ ಎಸ್ ದೇಸಾಯಿ, ಎಸ್ ಎಚ್ ಸಂಗಾಪೂರ, ಪಿ ವಾಯ್ ಗಣೇಶ್ಕರ್, ವಾಯ್ ಆರ್ ಹಬಸೂರ, ಎನ್ ಎಂ ಮರಿಗೌಡ್ರ, ಕೆ ಮುನಿಯಪ್ಪ ರಂಗನಾಥ ಎಸ್ ಸೇರಿದಂತೆ ವಿವಿಧ ತಾಲೂಕಿನ ವ್ಯವಸ್ಥಾಪಕರು, ಸಿಬ್ಬಂದಿಗಳು ಹಾಗೂ ತಾಲೂಕಿನ ಸಹಕಾರಿ ಸಂಘಗಳ ಅಧಿಕಾರಿಗಳು, ರೈತರು ಇದ್ದರು.

ರೈತ ವಿದ್ಯಾನಿಧಿ ಬಂದ್

ರೈತರ ಮಕ್ಕಳಿಗಾಗಿ ರೈತ ವಿದ್ಯಾನಿಧಿ ಮಾಡಲಾಗಿತ್ತು, ಅದನ್ನ ಈಗ ಬಂದ್ ಮಾಡಲಾಗಿದೆ, ಸರಕಾರಕ್ಕೆ ಈ ಮೂಲಕ ಒತ್ತಾಯ ಮಾಡುತ್ತೇನೆ ರೈತ ವಿದ್ಯಾನಿಧಿ ಪ್ರಾರಂಭ ಮಾಡಲೇಬೇಕು ರೈತವಿದ್ಯಾನಿದಿ ಯೋಜನೆ ಮುಂದುವರೆಸುವಂತೆ ಸರ್ಕಾರಕ್ಕೆ ಆಗ್ರಹಿಸುತ್ತೇನೆ. 

  -ಬಸವರಾಜ ಬೊಮ್ಮಾಯಿ

         ಮಾಜಿ ಸಿಎ 

ಸುದ್ದಿ ಓದಿ