97ನೇ ವಾರ್ಷಿಕ ಮಹಾಸಭೆ ಉದ್ಘಾಟನೆ
ರಾಣಿಬೆನ್ನೂರ 15: ಶತಮಾನೋತ್ಸವದತ್ತ ದಾಪುಗಾಲು ಹಾಕುತ್ತಿರುವ ನಗರದ ಶ್ರೀ ಬಸವೇಶ್ವರ ಅರ್ಬನ್ ಕೋಆಪರೇಟಿವ್ಹ ಬ್ಯಾಂಕ್ ಅಭಿವೃದ್ದಿಯತ್ತ ಮುನ್ನಡೆಯುತ್ತಿದ್ದು, ಇದಕ್ಕೆ ಗ್ರಾಹಕರು ಹಾಗೂ ಸದಸ್ಯರುಗಳು ಕಾರಣರಾಗಿದ್ದಾರೆ ಎಂದು ಚನ್ನವೀರ್ಪ ಅಸುಂಡಿ ಹೇಳಿದರು.
ಸ್ಥಳೀಯ ಬ್ಯಾಂಕಿನ ಸಭಾಭವನದಲ್ಲಿ ಜರುಗಿದ 97ನೇ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಸನ್ 2020-21 ನೇ ಸಾಲಿನಲ್ಲಿ ಬ್ಯಾಂಕು ರೂ.113.75 ಲಕ್ಷ ನಿವ್ವಳ ಲಾಭ ಗಳಿಸಿದ್ದು, ಪ್ರತಿ ಬಾರಿಯಂತೆ ಈ ಬಾರಿಯೂ ಆಡಿಟ್ ಎ ಆಗಿದ್ದು, ಸದಸ್ಯರಿಗೆ ಷೇರು ಡಿವಿಡೆಂಡು ಶೇಕಡಾ 14.00 ನೀಡಲು ನಿರ್ಣಯ ಕೈಗೂಂಡಿದೆ ಎಂದರು.
ನಿರ್ದೇಶಕರಾದ ಮಂಜುನಾಥ ಓಲೇಕಾರ, ಶಿವಕುಮಾರ, ಪರಮೇಶಪ್ಪ ಗವಳಿ, ಬಸವರಾಜ ತಾವರಗೊಂದಿ, ಶಂಭುಲಿಂಗಪ್ಪ ಕಟಗಿಹಳ್ಳಿ, ವಿರೇಶ (ರಾಜಣ್ಣ ) ಮೋಟಗಿ, ಶಿವಾನಂದ ಸಾಲಗೇರಿ, ಚೋಳಪ್ಪ ಕಸವಾಳ, ಈಶ್ವರ್ಪ ಹಾವನೂರು, ಸರೋಜಾ ಅಜ್ಜೇವಡಿಮಠ, ಸುಮಾ ತಿಳವಳ್ಳಿ, ಅಚ್ಯುತ್‌ಕಟ್ಟಿ, ರಮೇಶ ಪಟ್ಟಣಶೆಟ್ಟಿ, ಎಂ ಆರ್ ಸುರಳಿಕೇರಿಮಠ ಇದ್ದರು.