30 ಲಕ್ಷ ರೂ. ನೂತನ ಗ್ರಂಥಾಲಯ ಕಟ್ಟಡ ಉದ್ಘಾಟನೆ
ಹೊಸಪೇಟೆ 17: ಬಳ್ಳಾರಿ ರಸ್ತೆಯಲ್ಲಿರುವ ಸಂಕ್ಲಾಪುರ ಗ್ರಾಮದ ವಿನಾಯಕನಗರ ಬಡಾವಣೆಯಲ್ಲಿ ಗ್ರಂಥಾಲಯ ಕಟ್ಟಡದ ನಿರ್ಮಾಣ ಕಾಮಗಾರಿ 30 ಲಕ್ಷ ಗಳಲ್ಲಿ ಹಾಗೂ ಗ್ರಂಥಾಲಯಕ್ಕೆ ಕಾಂಪೌಂಡ್ ನಿರ್ಮಾಣದ 30 ಲಕ್ಷಗಳಲ್ಲಿ ಮತ್ತು ಇತರೆ ಕಾಮಗಾರಿಯ ಉದ್ಘಾಟನಾ ಕಾರ್ಯಕ್ರಮವನ್ನು ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಎಚ್. ಎನ್ ಮೊಹಮ್ಮದ್ ಇಮಾಮ್ ನಿಯಾಜಿ ರವರು ನೆರವೇರಿಸಿದರು.
ನಂತರ ಮಾತನಾಡಿ ಸಮಸ್ತ ನಾಡಿನ ಜನತೆಗೆ ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತಿಯ ಹಾರ್ದಿಕ ಶುಭಾಶಯಗಳು ತಿಳಿಸಿದರು. ಪ್ರತಿಯೊಬ್ಬರೂ ವಿಭಿನ್ನ ವಿಷಯಗಳ ಪುಸ್ತಕಗಳನ್ನು ಓದುವುದನ್ನು ಇಷ್ಟಪಡುತ್ತಾರೆ. ಯಾವುದೇ ವಯಸ್ಸಿನ ಮಕ್ಕಳು, ವೃದ್ಧರು ಮತ್ತು ಯುವಕರು ತಮ್ಮ ಹವ್ಯಾಸಗಳಿಗೆ ಅನುಗುಣವಾಗಿ ಪುಸ್ತಕಗಳನ್ನು ಓದುವ ಮೂಲಕ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬಹುದು.ವಿಭಿನ್ನ ವಿಷಯಗಳ ಪುಸ್ತಕಗಳನ್ನು ಓದುವ ಮೂಲಕ, ಪ್ರತಿಯೊಬ್ಬ ಕ್ಷೇತ್ರದ ಜ್ಞಾನವು ವ್ಯಕ್ತಿಯಲ್ಲಿ ಹೆಚ್ಚಾಗುತ್ತದೆ.ಕಾಮಿಕ್ಸ್, ಕಥೆಗಳು, ಕಾದಂಬರಿಗಳು, ನಾಟಕಗಳು ಇತ್ಯಾದಿಗಳನ್ನು ಓದುವುದರಿಂದ ವ್ಯಕ್ತಿಯಲ್ಲಿ ಕಾಲ್ಪನಿಕತೆ ಹೆಚ್ಚಾಗುತ್ತದೆ.
ಪುಸ್ತಕವನ್ನು ಓದುವಾಗ, ಒಬ್ಬ ವ್ಯಕ್ತಿಯು ಕಥೆಯಲ್ಲಿ ಅಥವಾ ಪುಸ್ತಕದಲ್ಲಿ ಬರೆದ ಘಟನೆಯಲ್ಲಿ ಕಳೆದುಹೋಗಿ ಫ್ಯಾಂಟಸಿಗೆ ಹೋಗುತ್ತಾನೆ. ಅಧ್ಯಯನಕ್ಕೆ ಸಂಬಂಧಿಸಿದ ಪುಸ್ತಕವನ್ನು ಓದುವ ಮೂಲಕ, ಒಬ್ಬ ವ್ಯಕ್ತಿಯು ಶಿಕ್ಷಣ ಪಡೆಯುತ್ತಾನೆ ಮತ್ತು ಅವನ ಜೀವನದಲ್ಲಿ ಮುಂದೆ ಸಾಗುತ್ತಾನೆ. ಜಾಗೃತಿ ಪುಸ್ತಕಗಳನ್ನು ಓದುವುದರಿಂದ ಧೈರ್ಯ ಬರುತ್ತದೆ ಸಾಹಿತ್ಯ ಪುಸ್ತಕವು ಸಾಮಾಜಿಕ ಮತ್ತು ಸಾಮಾಜಿಕ ಮಾಹಿತಿಯನ್ನು ನೀಡುತ್ತದೆ. ಅನೇಕ ಐತಿಹಾಸಿಕ ಪುಸ್ತಕಗಳು ಗ್ರಂಥಾಲಯದಲ್ಲಿ ಲಭ್ಯವಿದೆ, ಅದನ್ನು ಓದುವ ಮೂಲಕ ಒಬ್ಬ ವ್ಯಕ್ತಿಯು ದೇಶದ ಮತ್ತು ಪ್ರಪಂಚದ ಆಸಕ್ತಿದಾಯಕ ಇತಿಹಾಸವನ್ನು ತಿಳಿದುಕೊಳ್ಳಬಹುದು. ಹಾಗೂ ಈ ಒಂದು ಗ್ರಂಥಾಲಯವನ್ನು ಸಾರ್ವಜನಿಕರದ್ದು ಎಂದು ಪರಿಗಣಿಸದೆ ಪ್ರತಿಯೊಬ್ಬರೂ ನಮ್ಮ ಗ್ರಂಥಾಲಯ ಎಂದು ಭಾವಿಸಿ ಉಳಿಸಿ, ಬೆಳೆಸಿ, ಕಾಪಾಡಿಕೊಂಡು ಮುಂದಿನ ಪೀಳಿಗೆಗೆ ಉಡುಗೊರೆಯಾಗಿ ನೀಡಬೇಕೆಂದು ಕರೆ ನೀಡಿದರು.
ಈ ಒಂದು ಉದ್ಘಾಟನಾ ಕಾರ್ಯಕ್ರಮದಲ್ಲಿ ವಿನಾಯಕ ನಗರ ಬಡಾವಣೆಯ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಹೆಚ್ ತಿಪ್ಪೇಸ್ವಾಮಿ ಹಾಗೂ ಎ???ಂ ಬಾಷಾ, ಜಹಾಂಗೀರ್, ಕುಬೇರ್ಪ, ಮಹೇಶ್, ಯಮುನೇಶ್, ರಾಘವೇಂದ್ರ ಕಿಚಡಿ, ಕೃಷ್ಣರಾವ್, ಸುರೇಶ್, ಜರಿನ ಹಾಗೂ ನೂರಾರು ಸಾರ್ವಜನಿಕರು ಉಪಸ್ಥಿತರಿದ್ದರು