ಸೌಂದತ್ತಿ

ಕಡಲೆ ಖರೀದಿ ಕೇಂದ್ರವನ್ನು ಉದ್ಘಾಟನೆ

ಕಡಲೆ ಖರೀದಿ ಕೇಂದ್ರವನ್ನು ಉದ್ಘಾಟನೆ

ಸವದತ್ತಿ: ರೈತ ಬೆಳೆದಂತ ಬೆಳೆಗಳಿಗೆ ಸೂಕ್ತ ಬೆಲೆ ಸಿಗಬೇಕೆಂಬ ಉದ್ದೇಶದಿಂದ ಸರಕಾರವು ವಿವಿಧ ಬೆಳೆಗಳನ್ನು ಬೆಂಬಲ ಬೆಲೆಯಲ್ಲಿ ಖರೀದಿಸುತ್ತಿದ್ದು, ರೈತರು ಅದರ ಸದ್ಭಳಕೆ ಮಾಡಿಕೊಳ್ಳಬೇಕೆಂದು ಕೆ.ಎಸ್.ಸಿ.ಎಮ್.ಎಫ್ ಗೋಕಾಕ ಶಾಖಾ ವ್ಯವಸ್ಥಾಪಕಿ ಗಾಯತ್ರಿ ಪವಾರ ಹೇಳಿದರು.

ಸ್ಥಳೀಯ ಎಪಿಎಮ್ಸಿಯಲ್ಲಿ ಸರಕಾರದ ಬೆಂಬಲ ಬೆಲೆಯಲ್ಲಿ ಕಡಲೆ ಖರೀದಿ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಡಲೆಯನ್ನು ಪ್ರತಿ ಕ್ವಿಂಟಲ್ಗೆ 5335ರೂ.ನಂತೆ ಖರೀದಿಸಲಾಗುತ್ತಿದ್ದು, ಪ್ರತಿ ಎಕರೆಗೆ 4 ಕ್ವಿಂಟಲ್ನಂತೆ ಗರಿಷ್ಟ 15 ಕ್ವಿಂಟಲ್ದವರೆಗೆ ಬೆಂಬಲ ಬೆಲೆಯಲ್ಲಿ ಖರೀದಿಸಲು ನಿಗದಿ ಪಡಿಸಲಾಗಿದೆ ಎಂದರು.

ಟಿಎಪಿಸಿಎಮ್ಎಸ್ ವ್ಯವಸ್ಥಾಪಕ ಪ್ರಕಾಶ ಯಲಿಗಾರ ಮಾತನಾಡಿ ಕಡಲೆ ಖರೀದಿ ನೋಂದಣಿಗೆ ಮಾ.31 ಕೊನೆಯ ದಿನವಾಗಿದ್ದು, ಕಡಲೆ ಕಾಳು ಖರೀದಿಗಾಗಿ ಈಗಾಗಲೆ ರೈತರು ತಮ್ಮ ಹೆಸರನ್ನು ನೋಂದಣಿ ಮಾಡಿಕೊಂಡಿದ್ದಾರೆ. ಖರೀದಿ ಅವಧಿಯು ಮೇ.15ರ ವರೆಗೆ ಇರುತ್ತದೆ ಎಂದರು.

ಎಪಿಎಮ್ಸಿ ಸಹಕಾರ್ಯದರ್ಶಿ  ಚೈತ್ರೇಶ ದಾಸರ, ಮಹಾಬಳೇಶ್ವರ ಬೆಳವಡಿ, ಪ್ರಕಾಶ ಯಲಿಗಾರ ಹಾಗೂ ರೈತರು ಉಪಸ್ಥಿತರಿದ್ದರು.



ಸುದ್ದಿ ಓದಿ