ವಾರ್ಷಿಕ ಚಟುವಟಿಕೆ ಉದ್ಘಾಟನೆ, ವಿದ್ಯಾರ್ಥಿಗಳ ಸ್ವಾಗತ
ರಾಣೆಬೆನ್ನೂರು 27: ಜೀವನದಲ್ಲಿ ಸೋಲು ಗೆಲುವು ಸಮಾನವಾಗಿ ಸ್ವೀಕರಿಸಬೇಕು ಅದುವೇ ಜೀವನ. ಸೋತಾಗ ಕುಗ್ಗದೆ ಗೆದ್ದಾಗ ಹಿಗ್ಗದೆ ಸಮಾನತೆ ಸಾಧಿಸಬೇಕಾದರೆ ಈ ಕ್ಷಣದಲ್ಲಿ ಪರಿಪೂರ್ಣತೆ ಸಾಧಿಸಬೇಕು ಎಂದು ಉಪವಲಯ ಅರಣ್ಯ ಅಧಿಕಾರಿ ಪವನ್ ಯರಗಲ್ ಹೇಳಿದರು. ಅವರು ಕೆಎಲ್ಇ ಶಿಕ್ಷಣ ಸಂಸ್ಥೆಯ ರಾಜರಾಜೇಶ್ವರಿ ಕಲಾ ಮತ್ತು ವಾಣಿಜ್ಯ ಮಹಿಳಾ ವಿದ್ಯಾಲಯದಲ್ಲಿ ನಡೆದ 2022 ಮತ್ತು 2023ನೇ ಸಾಲಿನ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ, ಬಿಎ ಬಿಕಾಂ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಕೆಎಲ್ಇ ಶಿಕ್ಷಣ ಸಂಸ್ಥೆಯ ಸ್ಥಳೀಯ ಸದಸ್ಯ ವೀರಣ್ಣ ಅಂಗಡಿ ಅವರು, ವಿದ್ಯಾರ್ಥಿಗಳು ಕೇವಲ ನಾಲ್ಕು ಗೋಡೆಗಳ ಮಧ್ಯೆ ನಡೆಯುವ ಶಿಕ್ಷಣಕಷ್ಟೇ ಸೀಮಿತವಾಗದೆ, ಜೊತೆ, ಜೊತೆಗೆ ಸಾಮಾಜಿಕ, ಸಾಂಸ್ಕೃತಿಕ, ಸಾಹಿತಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರ ಮೂಲಕ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು. ಸ್ಥಳೀಯ ಆಡಳಿತದ ಇನ್ನೊರ್ವ ಸದಸ್ಯ ಬಸವರಾಜ ಪಟ್ಟಣಶೆಟ್ಟಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಅದಿಕ್ಷಕ ಅನಿಲ್ ದಂಡಗಿ, ಪವಿತ್ರ ತಂಬೂರಿ, ಸೇರಿದಂತೆ ಕಾಲೇಜಿನ ಮತ್ತಿತರೆ ವಿಭಾಗಗಳ ಉಪನ್ಯಾಸಕರು, ಶಿಕ್ಷಕರು ಸಿಬ್ಬಂದಿ ಉಪಸ್ಥಿತರಿದ್ದರು. ಮಹಾಲಕ್ಷ್ಮಿ ಧಲಬಂಜನ ಪ್ರಾರ್ಥಿಸಿದರು, ಪ್ರೊ : ಶೋಭಾ ದೊಡ್ಡನಾಗಳ್ಳಿ ಸ್ವಾಗತಿಸಿದರು. ಪ್ರಾಚಾರ್ಯ ನಾರಾಯಣ ನಾಯಕ್ ಎ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ ವೀರೇಶ್ ಕುರಹಟ್ಟಿ ಪರಿಚಯಿಸಿದರು. ನಿಕಿತಾ ಲದ್ವಾ, ವರದಿ ವಾಚಿಸಿದರು. ಸಹನಾ ಮಾವಿನ ತೋಪ ನಿರೂಪಿಸಿ, ಕವಿತಾ ಗಡ್ಡದ ಗೋಳಿ ವಂದಿಸಿದರು.