ಶಿಗ್ಗಾವ್

ವಿರಾಟ್ ವಿಶ್ವಕರ್ಮ ಜಯಂತ್ಯೋತ್ಸವ ಉದ್ಘಾಟನೆ

ವಿರಾಟ್ ವಿಶ್ವಕರ್ಮ ಜಯಂತ್ಯೋತ್ಸವ ಉದ್ಘಾಟನೆ

ಶಿಗ್ಗಾವಿ 19: ಪ್ರತಿಯೊಂದು ಸಮುದಾಯದ ಮತ್ತು ರೈತರ ವೃತ್ತಿಗೆ ಬೇಕಾದ ಪರಿಕರಗಳ ನಿರ್ಮಾಣದಲ್ಲಿ ವಿಶ್ವಕರ್ಮ ಸಮುದಾಯದ ಕೊಡುಗೆ ಬಹಳಷ್ಟು ಉಲ್ಲೇಖನೀಯ ಎಂದು ಮಾಜಿ ಶಾಸಕ ಸಯ್ಯದ್ ಅಜ್ಜಂಪೀರ್ ಎಸ್ ಖಾದ್ರಿ ಹೇಳಿದರು. 

ಪಟ್ಟಣದ ಸದ್ಗುರು ಮೌನೇಶ್ವರ ದೇವಸ್ಥಾನದ ಸಭಾಭವನದಲ್ಲಿ ತಾಲೂಕಾ ವಿಶ್ವಕರ್ಮ ಸಮೀತಿ, ಸದ್ಗುರು ಮೌನೇಶ್ವರ ಜೀರ್ಣೋದ್ದಾರ ಸಮೀತಿ ಹಾಗೂ ಶಿಗ್ಗಾವಿ ತಾಲೂಕಾ ವಿಶ್ವಕರ್ಮ ಸಮಾಜದ ಆಶ್ರಯದಲ್ಲಿ ನಡೆದ ವಿಶ್ವಕರ್ಮ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿರಾಟ್ ವಿಶ್ವಕರ್ಮರ ಪರಂಪರೆಯ ಬಗ್ಗೆ ಎಲ್ಲರೂ ತಿಳಿದುಕೊಳ್ಳುವ ಅವಶ್ಯಕತೆ ಇದೆ, ಜೊತೆಗೆ ಅದನ್ನ ತಿಳಿದಾಗ ವಿರಾಟ್ ವಿಶ್ವಕರ್ಮ ಜಯಂತಿ ಆಚರಣೆಗೆ ಅರ್ಥ ಬರುತ್ತದೆ ಎಂದರು. 

ಸಾಹಿತಿ ಶಿವಾನಂದ ಮ್ಯಾಗೇರಿ ಮಾತನಾಡಿ, ಮತ್ತೋಬ್ಬರಿಗೆ ಸ್ಪೂರ್ಥಿದಾಯಕ ಕಾಯಕ ಮಾಡುವ ಸಮುದಾಯ ಎಂದರೆ ಅದು ವಿಶ್ವಕರ್ಮ ಸಮುದಾಯವಾಗಿದೆ,  ಕಲೆಗೆ ಕೀರ್ತಿ ಬರುವಂತೆ ಮಾಡುವವರು ವಿಶ್ವಕರ್ಮರು, ರೈತರಿಗೆ ಅನುಕೂಲಕರ ಸಲಕರಣೆ ಮಾಡಿಕೊಡುವ ಮೂಲಕ ರೈತರ ಬೆನ್ನಿಗೆ ನಿಂತಿದ್ದಾರೆ, ಸ್ವರ್ಗಲೋಕವನ್ನ ನಿರ್ಮಿಸಿದವರು ವಿಶ್ವಕರ್ಮರು, ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಸೌಲಬ್ಯಗಳನ್ನ ಕೊಡಿಸಲು ನಾವು ಸಿದ್ದರಾಗಿದ್ದೇವೆ ಎಂದರು. 

ಪ್ರಾಸ್ತಾವಿಕವಾಗಿ ಮುಖಂಡ ನಿಂಗಪ್ಪ ಕಮ್ಮಾರ ಮಾತನಾಡಿ, ವಿಶ್ವಕರ್ಮರ ಮೂರ್ತಿ ಸ್ಥಾಪನೆಗಾಗಿ ಶಿಗ್ಗಾವಿ ಹಾಗೂ ಬಂಕಾಪೂರ ಪುರಸಭೆಗಳಿಗೆ ಮನವಿ ನೀಡಿ ಒತ್ತಾಯಿಸಲಾಗಿದ್ದು ಮುಖ್ಯ ಸರ್ಕಲ್ ಗಳಲ್ಲಿ ಮೂರ್ತಿ ಸ್ಥಾಪಿಸುವಂತೆ ಒತ್ತಾಯಿಸಿದರು. 

ಮುಖಂಡ ಬಸವರಾಜ ಬಡಿಗೇರ ಮಾತನಾಡಿ, ನಮ್ಮನ್ನ ಕೇವಲ ರಾಜಕೀಯವಾಗಿ ಬಳಸಿಕೊಳ್ಳುವ ಕೆಲಸವಾಗುತ್ತಿದೆ ವಿನಹ ಸಮುದಾಯಕ್ಕೆ ನೆರವಾಗುವ ಮನಸ್ಸು ಇಲ್ಲವಾಗಿದೆ, ಪಿಎಂ ವಿಶ್ವಕರ್ಮ ಯೋಜನೆಯ ಸೌಲಭ್ಯ ತಲುಪುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿ, ವಿಶ್ವಕರ್ಮ ಸಮುದಾಯ ಒಗ್ಗಟ್ಟು ಅವಶ್ಯವಾಗಿದೆ ಎಂದರು. 

ಪುರಸಭೆ ಸದಸ್ಯ ಸುಭಾಸ್ ಚೌಹಾಣ್ ಮಾತನಾಡಿದರು, ಸಾನಿದ್ಯವನ್ನ ಹುಲಗೂರ ಮೌನೇಶ್ವರ ಮಹಾಸ್ವಾಮೀಗಳು ವಹಿಸಿದ್ದರು, ಅದ್ಯಕ್ಷತೆಯನ್ನ ಪುರಸಭೆ ಅದ್ಯಕ್ಷ ಸಿದ್ದಾರ್ಥಗೌಡ ಪಾಟೀಲ ವಹಿಸಿದ್ದರು, ವಾಸ್ತು ತಜ್ಞರಾದ ಆರ್ ವಿ ಕಮ್ಮಾರ, ವಿಶ್ವಕರ್ಮ ಸಮಾಜದ ತಾಲೂಕಾದ್ಯಕ್ಷ ಕಾಳಪ್ಪ ಬಡಿಗೇರ, ಮಂಜುನಾಥ ಬ್ಯಾಹಟ್ಟಿ, ಶಿವಾನಂದ ಸೊಬರದ, ಬಸನಗೌಡ ಮೇಲಿನಮನಿ, ಶಿವಾನಂದ ಬಾಗೂರ, ಮಲ್ಲಿಕಾರ್ಜುನ ಹಡಪದ, ಹನುಮರೆಡ್ಡಿ ನಡುವಿನಮನಿ, ದೇವಣ್ಣ ಚಾಕಲಬ್ಬಿ, ಚಿದಾನಂದ ಬಡಿಗೇರ, ಬಸವರಾಜ ಬಡಿಗೇರ ಸೇರಿದಂತೆ ವಿಶ್ವಕರ್ಮ ಸಮಾಜ ಮುಖಂಡರು ಮಹಿಳೆಯರು ಇದ್ದರು. 


ಸುದ್ದಿ ಓದಿ