ಕುರುಬರ ಸಮುದಾಯದ ಗ್ರಾಮ ಶಾಖೆ ಉದ್ಘಾಟನೆ
ಲೋಕದರ್ಶನ ವರದಿ
ಬಳ್ಳಾರಿ 12: ನಗರ ಕರ್ನಾಟಕ ಪ್ರದೇಶ ಯುವ ಕುರುಬರ ಸಂಘ (ರಿ)ಬಳ್ಳಾರಿ ವತಿಯಿಂದ ಶ್ರೀಧರ ಗಡ್ಡೆ ಗ್ರಾಮದಲ್ಲಿ ರಾಜ್ಯಾಧ್ಯಕ್ಷ ಬಿ ಎಂ ಪಾಟೀಲ್ ಅವರ ನೇತೃತ್ವದಲ್ಲಿ ಕುರುಬರ ಸಮುದಾಯದ ಹಾಲುಮತದ ಗ್ರಾಮ ಶಾಖೆ ಘಟಕಕ್ಕೆ ಚಾಲನೆ ನೀಡಲಾಯಿತು.
ನಂತರ ತಮ್ಮ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ರಾಜ್ಯಾಧ್ಯಕ್ಷ ಬಿ ಎಂ ಪಾಟೀಲ್ ಮುಂದಿನ ದಿನಗಳಲ್ಲಿ ನಾವೆಲ್ಲಾ ಒಂದಾಗಿ ಸಮಾಜದ ಅಭಿವೃದ್ಧಿಗಾಗಿ ಹಾಗೂ ಬೆಳವಣಿಗಾಗಿ ನಮ್ಮ ಹಾಲುಮತ ಸಮಾಜದ ಯುವಕರು ಒಗ್ಗಟ್ಟಾಗಿ ಶ್ರಮವಹಿಸಬೇಕೆಂದು ಮನವಿ ಮಾಡಿದರು. ನಮ್ಮ ಕುರುಬ ಸಮುದಾಯದ ಜನರಿಗೆ ಯಾವುದೇ ರೀತಿಯ ತೊಂದರೆ ಉಂಟಾದಲ್ಲಿ ನಾನು ನಿಮ್ಮ ಬೆನ್ನೆಲುಬಾಗಿರುತ್ತೇನೆ ಎಂದು ಮಾತನಾಡಿದರು.
ಅದೇ ರೀತಿಯಾಗಿ ಹೆಚ್ಚಿನ ರೀತಿಯಲ್ಲಿ ನಮ್ಮ ಸಮುದಾಯವು ವಿದ್ಯಾಭ್ಯಾಸಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು, ಹಾಗೂ ಉನ್ನತ ಮತ್ತು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ನಾನು ಸದಾ ಪ್ರೋತ್ಸಾಹ ನೀಡುತ್ತೇನೆ ಮತ್ತು ವಿದ್ಯಾರ್ಥಿಗಳಿಗೆ ಸದಾ ಸಹಕರಿಸುತ್ತೇನೆ ಎಂದು ಭರವಸೆ ನೀಡಿದರು.
ಬಂಡಿಹಟ್ಟಿ ರಾಮಲಿಂಗ, ಕೆ ಎಂ ವಿಜಯಕುಮಾರ್, ಶಿವಶಂಕರ, ಶ್ರೀಧರ್ ಗಡ್ಡೆ ಗ್ರಾಮ ಘಟಕ ಸಂಘಕ್ಕೆ ನೇಮಕವಾದ ಎಲ್ಲಾ ಪದಾಧಿಕಾರಿಗಳು ಹಿರಿಯರು ಯುವಕರು ಉಪಸ್ಥಿತರಿದ್ದರು