ನೂತನ ನಾಡಕಚೇರಿ, ಅಂಗನವಾಡಿ ಕಟ್ಟಡ ಉದ್ಘಾಟನೆ
ರಾಣಿಬೆನ್ನೂರ 07: ಕರೊನಾ ಸಂಕಷ್ಠ ಸಮಯದಲ್ಲೂ ಬಿಜೆಪಿ ಸರ್ಕಾರ ರಾಜ್ಯದ ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡುವ ಮೂಲಕ ಶ್ರಮಿಸುತ್ತದೆ. ಗ್ರಾಮಸ್ಥರು ಭಿನ್ನಾಭಿಪ್ರಾಯ ಬಿಟ್ಟು ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಶಾಸಕ ಅರುಣಕುಮಾರ ಪೂಜಾರ ಹೇಳಿದರು.
ಶನಿವಾರ ತಾಲೂಕಿನ ಕುಪ್ಪೇಲೂರ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡ ನಾಡಕಚೇರಿ ಮತ್ತು ಅಂಗನವಾಡಿ ಕಟ್ಟಡ ಉದ್ಘಾಟನೆ ಮತ್ತು 1 ಕೋಟಿ 22 ಲಕ್ಷ ರೂ.ಗಳ ಅನುದಾನದಲ್ಲಿ ಕಾಂಕ್ರೀಟ್ ರಸ್ತೆ, ಗಟಾರ, ರಸ್ತೆ ಡಾಂಬರೀಕರ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಗುತ್ತಿಗೆದಾರರು ಕಳಪೆ ಕಾಮಗಾರಿ ಮಾಡದೆ ಗುಣಮಟ್ಟದ ಕಾಮಗಾರಿ ಮಾಡಲು ಮುಂದಾಗಬೇಕು. ಅಲ್ಲದೆ ನಿಗಧಿತ ಸಮಯದೊಳಗೆ ಕಾಮಗಾರಿ ಮುಗಿಸಬೇಕು. ಇಂದು ನಾನೇ ಭೂಮಿ ಪೂಜೆ ನೆರವೇರಿಸಿದ್ದು ಎಲ್ಲ ಕಾಮಗಾರಿಗಳನ್ನು ನನ್ನ ಶಾಸಕ ಸ್ಥಾನದ ಅಧಿಕಾರದ ಅವಧಿಯೊಳಗೆ ಲೋಕಾರೆ್ಣ ಮಾಡುತ್ತೇನೆ ಇದರಲ್ಲಿ ಎರಡು ಮಾತಿಲ್ಲ ಎಂದರು.
ಗ್ರಾಮದಲ್ಲಿ 50 ಲಕ್ಷ ರೂ ವೆಚ್ಚದ ಬಸ್ ತಂಗುದಾಣ ನಿರ್ಮಾಣ, ತುಮ್ಮಿನಕಟ್ಟಿಯಿಂದ ಕುಪ್ಪೇಲೂರವರೆಗೆ ಹಳೆ ರಸ್ತೆ ನಿರ್ಮಾಣಕ್ಕೆ ಮತ್ತು ಬ್ರಹ್ಮಣ ಸಮಾಜದ ಸಮುದಾಯ ಭವನ ನಿರ್ಮಾಣಕ್ಕಾಗಿ ಶಾಸಕರ ಅನುದಾನದಲ್ಲಿ 10 ರೂ, ಹೈಟೆಕ್ ಗ್ರಂಥಾಲಯ ಸ್ಭೆರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವುದಾಗಿ ಶಾಸಕರು ಭರವಸೆ ನೀಡಿದರು.
ನಾನು ಶಾಸಕನಲ್ಲ ನಿಮ್ಮ ಸೇವಕ ದಿನದ 24 ಗಂಟೆಗಳ ಕಾಲ ಕ್ಷೇತ್ರದ ಕೆಲಸ ಮಾಡಲು ಹಂಬಲಿಸುವೆ. ಅಭಿವೃದ್ಧಿ ಕಾರ್ಯಕ್ಕೆ ಕೊನೆಯಿಲ್ಲ. ನನ್ನ ಅಧಿಕಾರಾವಧಿಯಲ್ಲಿ ಕ್ಷೇತ್ರದಾಧ್ಯಂತ ಅಭಿವೃದ್ಧಿ ಕಾರ್ಯಗಳು ನಿರಂತರವಾಗಿರುತ್ತವೆ. ಇದರ ಯಶಸ್ವಿಗೆ ಅಧಿಕಾರಿಗಳು ಹಾಗೂ ಸಾರ್ವಜನಿಕರು ಸಹಕರಿಸಬೇಕು ಎಂದರು.
ಗ್ರಾಪಂ ಅಧ್ಯಕ್ಷೆ ಶಿಲ್ಪಾ ಮರಳ್ಳಪ್ಪನವರ, ಸದಸ್ಯರಾದ ಕುಸುಮಾ ಮಣಕೂರ, ಮಲ್ಲೇಶಪ್ಪ ಬಂಗಾರಿ, ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಚೋಳಪ್ಪ ಕಸವಾಳ, ಜಿಪಂ ಮಾಜಿ ಅಧ್ಯಕ್ಷ ಮಂಜುನಾಥ ಓಲೇಕಾರ, ತಹಶೀಲ್ದಾರ ಶಂಕರ ಜಿ.ಎಸ್, ಉಪತಹಶೀಲ್ದಾರ ಮೋಹನ ಕಡೂರ, ಗ್ರಾಮದ ಮುಖಂಡರಾದ ಕುಮಾರ ಎಳೇಹೊಳಿ, ಪರಮೇಶಪ್ಪ ಚಕ್ರಸಾಲಿ, ರಾಮಪ್ಪ ಹರಿಹರ, ದುರುಗಪ್ಪ ಕರಿಯಜ್ಜೇರ, ಹನುಮಂತಪ್ಪ, ಪಿಡಿಓ ರವಿಕುಮಾರ ನಾಯಕ, ಅಭಿಯಂತರ ವಾಗೀಶರಡ್ಡಿ ಸೇರಿದಂತೆ ಮತ್ತಿತರರು ಇದ್ದರು.