ಮಹಾಲಕ್ಷ್ಮೀ ಬೇಕರ್ಸನ ನಮಕಿನ್ಸ ಉದ್ಯಮ ಉದ್ಘಾಟನೆ
ಲೋಕದರ್ಶನ ವರದಿ
ಅಥಣಿ 10: ಗೃಹ, ಸಣ್ಣ ಉದ್ಯಮ ನಡೆಸುವ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಉದ್ಯೋಗ ಕಲ್ಪಿಸಬೇಕು ಎಂದು ಗಚ್ಚಿನ ಮಠದ ಮುರುಘೇಂದ್ರ ಶಿವಬಸವ ಸ್ವಾಮೀಜಿ ಹೇಳಿದರು. ಅವರು ಮಹಾಲಕ್ಷ್ಮೀ ಬೇಕರ್ಸ ಪ್ರಾರಂಭಿಸಿದ ನಮಕಿನ್ಸ ಉದ್ಯಮ ಉದ್ಘಾಟಿಸಿ ಮಾತನಾಡುತ್ತಿದ್ದರು.
ಸುಭಾಶ ಭೋಜಣೆ ಹಾಗೂ ಆನಂದ ಭೋಜಣೆಯವರು ಈಗಾಗಲೇ ಮಹಾಲಕ್ಷ್ಮೀ ಬೇಕರ್ಸ ಮೂಲಕ 30 ಕ್ಕೂ ಹೆಚ್ಚು ಜನರಿಗೆ ಉದ್ಯೋಗ ಕಲ್ಪಿಸಿಕೊಟ್ಟಿದ್ದಾರೆ ಇದರ ಜೊತೆಗೆ ನಮಕಿನ್ಸ ಉದ್ಯಮ ಸ್ಥಾಪಿಸುವ ಮೂಲಕ ಕನಿಷ್ಠ 50 ಜನರಿಗೆ ಉದ್ಯೋಗ ಕಲ್ಪಿಸುತ್ತಿರುವ ಇವರ ಕಾರ್ಯ ಅಭಿನಂದನಾರ್ಹ ಎಂದರು.
ಎಲ್ಲರೂ ಸರಕಾರಿ, ಸಹಕಾರಿ ಅಥವಾ ಖಾಸಗಿ ಉದ್ಯೋಗವನ್ನೇ ಅವಲಂಬಿಸಿದಲ್ಲಿ ಸೀಮಿತವಾಗಿ ಉದ್ಯೋಗ ಕಲ್ಪಿಸಬಹುದು ಆದರೆ ಒಬ್ಬ ಸ್ವಯಂ ಉದ್ಯಮ ಪ್ರಾರಂಭಿಸಿದಲ್ಲಿ ಆ ಉದ್ಯಮದ ಮೂಲಕ ಕನಿಷ್ಠ 20 ಜನರಿಗಾದರೂ ಉದ್ಯೋಗ ಕೊಡಬಹುದು ಎಂದ ಅವರು ಯುವಕರು ನೌಕರಿಯಿಂದ ದೂರ ಉಳಿದು ಮತ್ತೊಬ್ಬರಿಗೆ ಉದ್ಯೋಗ ಕಲ್ಪಿಸುವ ಸ್ವಯಂ ಉದ್ಯಮ ಪ್ರಾರಂಭಿಸಿ ಎಂದು ಕರೆ ನೀಡಿದರು.
ಮಹಾಲಕ್ಷ್ಮೀ ನಮಕೀನ್ಸನ ಸುಭಾಶ ಭೋಜಣೆ ಮಾತನಾಡಿ, ನಮ್ಮ ತಂದೆ ಶಿವಾಜಿ ಭೋಜಣೆ ಪ್ರಾರಂಭಿಸಿದ ಮಹಾಲಕ್ಷ್ಮೀ ಬೇಕರ್ಸ ಮೂಲಕ ಕಳೆದ 15 ವರ್ಷಗಳಿಂದ ಬೇಕರಿ ವಸ್ತುಗಳನ್ನು ಕೇವಲ ಅಥಣಿ ಅಷ್ಟೇ ಅಲ್ಲ ಸಂಪೂರ್ಣ ತಾಲೂಕು ಜೊತೆಗೆ ಜಮಖಂಡಿ, ಹಾರೂಗೇರಿ, ಕಾಗವಾಡ, ರಾಯಬಾಗ ಸೇರಿದಂತೆ ಬೇರೆ ಬೇರೆ ತಾಲೂಕುಗಳಿಗೂ ಸಾಗಿಸುತ್ತೇವೆ. ಮಹಾಲಕ್ಷ್ಮೀ ನಮಕೀನ್ ಮೂಲಕ ಬಟಾಟಿ ಚಿಪ್ಸ, ಕುರಕುರೆ ಸೇರಿದಂತೆ ಅನೇಕ ಪ್ಯಾಕ್ಡ ಸ್ನಾಕ್ಸ ಉತ್ಪಾದಿಸಿ ಮಾರುಕಟ್ಟೆಗೆ ಸಾಗಿಸುತ್ತೇವೆ ಗುಣಮಟ್ಟದ ಬೇಕರಿ ವಸ್ತುಗಳನ್ನು ಪೂರೈಕೆ ಮಾಡುತ್ತಿರುವ ನಾವು ನಮಕೀನ್ಸ ವಸ್ತುಗಳನ್ನೂ ಸಹ ಗುಣಮಟ್ಟದಲ್ಲಿ ಪೂರೈಕೆ ಮಾಡುತ್ತೇವೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಯುವ ಉದ್ಯಮಿ ಶಿವಕುಮಾರ ಸವದಿ, ಕಾಂಗ್ರೆಸ್ ಮುಖಂಡ ಬಸವರಾಜ ಬುಟಾಳಿ, ಧರೆಪ್ಪ ಠಕ್ಕಣ್ಣಬವರ, ಅಜೀತ ಪವಾರ ಆಗಮಿಸಿದ್ದರು. ಪುರಸಭಾ ಸದಸ್ಯರಾದ ರಾಜು ಬುಲಬುಲೆ, ಸಿದ್ದು ಪಾಟೀಲ, ಅವಿನಾಶ ಜಾಧವ, ನಾನಾಸಾಹೇಬ ಅವತಾಡೆ, ಸಂದೀಪ ಪಾಟೀಲ, ಸಂಜು ವಾಂಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.