ಕುಷ್ಟಗಿ

ಸೆ.12 ರಂದು ಕುಷ್ಟಗಿ ಪೊಲೀಸ್ ಠಾಣೆ ಉದ್ಘಾಟನೆ

ಸೆ.12 ರಂದು ಕುಷ್ಟಗಿ ಪೊಲೀಸ್ ಠಾಣೆ ಉದ್ಘಾಟನೆ

ಕುಷ್ಟಗಿ.ಸೆ11; ಕರ್ನಾಟಕ ರಾಜ್ಯ ಪೊಲೀಸ್ ಹಾಗೂ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ನೂತನವಾಗಿ ನಿರ್ಮಿಸಲಾದ ಕುಷ್ಟಗಿ ವೃತ್ತ ಕಾರ್ಯಲಯ ಹಾಗೂ ಪೊಲೀಸ್ ಠಾಣೆಯನ್ನು ಸೆ.12 ಮಂಗಳವಾರ ಬೆಳಗ್ಗೆ  ಹಿಂದುಳಿದ ವರ್ಗ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಉದ್ಘಾಟಿಸುವರು.  

ಶಾಸಕ ದೊಡ್ಡನಗೌಡ ಪಾಟೀಲ್ ಕಾರ್ಯಕ್ರಮದ ಅಧ್ಯಕ್ಷತೆವಹಿಸುವರು.  

ಗೃಹ ಸಚಿವ ಡಾ.ಜಿ ಪರಮೇಶ್ವರ, ಸಂಸದ ಕರಡಿ ಸಂಗಣ್ಣ, ಯಲಬುರ್ಗಾ ಶಾಶಕ ಬಸವರಾಜ ರಾಯರಡ್ಡಿ, ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ, ಗಂಗಾವತಿ ಶಾಸಕ ಗಾರಿ ಜನಾರ್ಧನ್ ರೆಡ್ಡಿ, ವಿಧಾನ ಪರಿಷತ್ ಸದಸ್ಯರಾದ ಶಶಿಲ್ ನಮೋಶಿ, ಚಂದ್ರಶೇಖರ ಪಾಟೀಲ,  ಶರಣಗೌಡ ಪಾಟೀಲ್ ಬಯ್ಯಾಪೂರ, ಹೇಮಲತಾ ನಾಯಕ, ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಡಿ.ಜಿ.ಐ.ಜಿ.ಪಿ ಅಲೋಕ್ ಮೋಹನ್, ಎಡಿಜಿಪಿ ಎಂ.ಡಿ. ಕೆ.ಎಸ್‌.ಪಿ.ಎಚ್ ಡಾ.ಕೆ. ರಾಮಚಂದ್ರರಾವ್, ಬಳ್ಳಾರಿ ಪೊಲೀಸ್ ಮಹಾ ನೀರೀಕ್ಷಕ ಬಿ.ಎಸ್ ಲೋಕೇಶ್, ಮುಖ್ಯ ಅಭಿಯಂತರರು, ಕೆ.ಎಸ್‌.ಪಿ.ಎಚ್ ಬಿ.ಎಚ್ ಮಂಜುನಾಥ, ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ, ಡಿವಾಯ್ ಎಸ್ಪಿ ಸಿದ್ದಲಿಂಗಪ್ಪಗೌಡ ಪಾಟೀಲ್, ಸಿಪಿಐ ಯಶವಂತ ಬಿಸನಳ್ಳಿ, ಪಿಎಸ್‌ಐ ಮುದ್ದರಂಗಸ್ವಾಮಿ, ಮಾನಪ್ಪ ವಾಲ್ಮೀಕಿ ಭಾಗವಹಿಸುವರು ಎಂದು ಡಿವಾಯ್ ಎಸ್ಪಿ ಸಿದ್ದಲಿಂಗಪ್ಪಗೌಡ ಪಾಟೀಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 


ಸುದ್ದಿ ಓದಿ