ಶಿಗ್ಗಾವ್

ಆರೋಗ್ಯ ಕಾರ್ಡ ವಿತರಣಾ ಕಾರ್ಯಕ್ರಮ ಉದ್ಘಾಟನೆ

ಆರೋಗ್ಯ ಕಾರ್ಡ ವಿತರಣಾ ಕಾರ್ಯಕ್ರಮ ಉದ್ಘಾಟನೆ

ಶಿಗ್ಗಾವಿ 05:  ವಿಶೇಷಚೇತನರಿಗೆ ಸರಕಾರ ನೀಡುವ ಸವಲತ್ತುಗಳನ್ನು ಮುಟ್ಟಿಸುವಲ್ಲಿ, ಮತ್ತು ಅವರಿಗೆ ವಿಶೇಷ ತರಬೇತಿ ನೀಡುವ ಮೂಲಕ ಅವರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ರೋಶನಿ ಸಮಾಜ ಸೇವಾ ಸಂಸ್ಥೆ ಹಾನಗಲ್ಲ ಮತ್ತು ಸಮುದಾಯ ಪುನರ್ವಸತಿಕೇಂದ್ರ ಶಿಗ್ಗಾವ ಇವರು ಮಾಡುತ್ತಿರುವುದು ಶ್ಲಾಘನೀಯಎಂದುತಾಲೂಕಾ ವಿಕಲ ಚೇತನರ ವಿವಿದೊದ್ದೇಶ ಪುನರ್ವಸತಿ ಕಾರ್ಯಕರ್ತ ಶಿದ್ದು ಮಸಳಿ ಹೇಳಿದರು 

ಪಟ್ಟಣದ ಸಮುದಾಯ ಪುನರ್ವಸತಿ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ ನಿರಾಮಯ ಆರೋಗ್ಯ ಕಾರ್ಡ ವಿತರಣಾ ಕಾರ್ಯಕ್ರಮದ ಉದ್ಘಾಟನೆ ಮಾಡಿ ಮಾತನಾಡಿದ ಅವರು, ತಾಲೂಕಿಗೆ ಒಂದು ಪೀಜೀಯೋತೆರಪಿ ಕೇಂದ್ರ ತೆರೆದರೆ ವಿಶೇಷ ಚೇತನರ ಚಿಕಿತ್ಸೆಗೆ ಅನಕೂಲವಾಗುತ್ತದೆ ಎಂದು ಹೇಳಿದರು. 

ಎಂಪಿಎಂ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ದೇವರಾಜ ಸುಣಗಾರ ಮಾತನಾಡಿ ತಾಲೂಕ ಪಂಚಾಯತಿ, ಮತ್ತುಗ್ರಾಮ ಪಂಚಾಯತಿಗಳು ತಾವು ಬಳಸಬಹುದಾದ ಶೇ. 5ರಷ್ಟು ಅನುದಾನವನ್ನು ವಿಕಲ ಚೇತನರ ಸಮುದಾಯಗಳಿಗೆ ಬಳಸಿದರೆ ಕುಟುಂಬಗಳಿಗೆ ಆರ್ಥಿಕ ಹೊರೆಕಡಿಮೆಯಾಗಿ, ಉತ್ತಮ ಚಿಕತ್ಸೆ ಕೊಡಿಸಲು ಸಹಕಾರಿಯಾಗುತ್ತದೆ ಎಂದು ಹೇಳಿದರು. 

ಹಾನಗಲ್ಲ ರೋಶನಿ ಸಮಾಜ ಸೇವಾ ಸಂಸ್ಥೆ  ಸಿಸ್ಟರ್ ಜಾನೆಟ್ ಮಾತನಾಡಿ ನಿರಾಮಯ ಆರೋಗ್ಯ ಕಾರ್ಡನ್ನು ವಿಶೇಷ ಚೇತನರು ಪಡೆದುಕೊಳ್ಳುವುದರಿಂದ ಚಿಕಿತ್ಸೆಯ ವಿವಿಧ ವೆಚ್ಚಗಳಿಗೆ 1 ಲಕ್ಷದಷ್ಟು ಸಹಾಯಧನವನ್ನು ಸರಕಾರದಿಂದ ಪಡೆದುಕೊಳ್ಳಬಹುದು, ಮತ್ತು ತಮ್ಮ ತರಬೇತಿ ಕೇಂದ್ರಗಳಲ್ಲಿ 8 ವರ್ಷದ ಒಳಗಿನ ಮಕ್ಕಳನ್ನು ತರಬೇತಿಗೆಕಳಿಸುವುದರಿಂದ ಆರೋಗ್ಯದಲ್ಲಿ ಚೇತರಿಕೆಯನ್ನು ಕಾಣಬಹುದು ಎಂದು ಹೇಳಿದರು. 

ಹಾನಗಲ್ಲ ರೋಶನಿ ಸಮಾಜ ಸೇವಾ ಸಂಸ್ಥೆಯ ಹಿರಿಯ ಸಿಬ್ಬಂದಿ ಕಲ್ಲಪ್ಪಾ ನಾಯಕಾರ ವಿಶೇಷ ಚೇತನರಿಗೆ ಸರಕಾರದಿಂದ ಸಿಗುವ ಸವಲತ್ತುಗಳು ಮತ್ತು ಅವುಗಳನ್ನು ಪಡೆದುಕೊಳ್ಳಲು ಕುಟುಂಬಸ್ಥರು ಮಾಡಬೇಕಾದ ಕಾರ್ಯಗಳನ್ನು ಕುರಿತು ವಿವರಿಸಿದರು. 

ಕಾರ್ಯಕ್ರಮದಲ್ಲಿ ರೋಶನಿ ಸಮಾಜ ಸೇವಾ ಸಂಸ್ಥೆಯ ಸಿಸ್ಟರ್ ಇಲವಿನ್, ಶಿಕ್ಷಕಿ ಮೀನಾಕ್ಷಿ ಎಂ.ಬಿ,  ಮಂಜು ಹೊಟ್ಟೆಗೌಡರ, ಗಣೇಶ ಸುಬ್ಬಣ್ಣವರ, ಪ್ರವೀಣ ಮಾಂಗ್ಲೇನವರ ಸೇರಿದಂತೆ ಫಲಾನುಭವಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು. 


ಸುದ್ದಿ ಓದಿ