ಗ್ರಾಫಿಕ್ಸ್ ಡಿಸೈನ್ ಅಂಡ್ ಫ್ಲಕ್ಸ್ ಬ್ಯಾನರ್ ಪ್ರಿಂಟಿಂಗ್ ಮಷಿನ್ ಉದ್ಘಾಟನೆ
ಹೊಸಪೇಟೆ 05: ಗುರುವಾರ 5ರಂದು ಇಂದಿರಾ ನಗರದಲ್ಲಿರುವ ಮಹಿಳಾ ಸಮಾಜ ಶಾಲೆ, ಹಿಂಭಾಗದಲ್ಲಿ ಡಬ್ಲ್ಯೂ ಎಂ ಗ್ರಾಫಿಕ್ಸ್ ಡಿಸೈನ್ ಅಂಡ್ ಫ್ಲಕ್ಸ್ ಬ್ಯಾನರ್ ಪ್ರಿಂಟಿಂಗ್ ಮಷಿನ್ ಉದ್ಘಾಟನೆಯನ್ನು ಹೊಸಪೇಟೆ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್.ಎನ್ ಮೊಹಮ್ಮದ್ ನಿಯಾಜಿ ನೆರವೇರಿಸಿದರು.
ನಂತರ ಮಾತನಾಡಿದ ಅವರು ನೂತನವಾಗಿ ಡಬ್ಲ್ಯೂ ಎಂ ಗ್ರಾಫಿಕ್ ಡಿಸೈನ್ ಅಂಡ್ ಫ್ಲಕ್ಸ್ ಬ್ಯಾನರ್ ಪ್ರಿಂಟಿಂಗ್ ಉದ್ಯಮವನ್ನು ಪ್ರಾರಂಭಿಸಿರುವ ವಾಹಿದ್ ಅವರಿಗೆ ಶುಭ ಹಾರೈಸಿದರು. ಹಾಗೂ ಉದ್ದಿಮೆ ಎಂದ ಮೇಲೆ ಏರಿಳಿತಗಳು ಸರ್ವೇಸಾಮಾನ್ಯ ಎಂಥ ಸಂದರ್ಭದಲ್ಲಿಯೂ ಎದೆಗುಂದದೆ ಕೌಶಲ್ಯದಿಂದ ಹಾಗೂ ಧೈರ್ಯದಿಂದ ನಡೆಸಿ ಯಶಸ್ವಿಯಾಗಬೇಕೆಂದು ಹಾಗೂ ಈ ಮೂಲಕ ಹಲವಾರು ಕಾರ್ಮಿಕರಿಗೆ ಉದ್ಯೋಗ ನೀಡುವಂತಾಗಿ ಅವರ ಕುಟುಂಬಗಳಿಗೆ ಆಧಾರವಾಗುವಂತಾಗಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಅಂಜುಮನ್ ಕಮಿಟಿಯ ಸದಸ್ಯರಾದ ಫೈರೋಜ್ ಹಾಗು ಎಲ್ ಗುಲಾಮ್ ರಸೂಲ್, ಆಸಿಫ್, ಜಿಯಾ, ಫಯಾಜ್, ತಾಹಿರ್, ಆಶು, ರಜಾಕ್, ವಿನಯ್, ಮುಂತಾದವರು ಉಪಸ್ಥಿತರಿದ್ದರು.